US: ಅಮೆರಿಕದಲ್ಲಿ ಆಘಾತಕಾರಿ ಘಟನೆ- ಸ್ನಾನಕ್ಕೂ ಅವಕಾಶ ಕೊಡದೆ ಭಾರತೀಯನಿಗೆ ಚಿತ್ರಹಿಂಸೆ
Team Udayavani, Dec 2, 2023, 12:19 AM IST
ವಾಷಿಂಗ್ಟನ್: ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ತಿಂಗಳುಗಳ ಕಾಲ ಸ್ನಾನಕ್ಕೂ ಅವಕಾಶ ನೀಡದೆ ಕೂಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಪೊಲೀಸರು ಭಾರ ತೀಯ ಮೂಲದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಮಿಸೌರಿ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಆತನ ಸಹೋದರ ಸಂಬಂಧಿ ವೆಂಕಟೇಶ್ ಆರ್ ಸತ್ತಾರು ಹಾಗೂ ಭಾರತೀಯ ಮೂಲದ ಇನ್ನಿಬ್ಬರು ವ್ಯಕ್ತಿಗಳಾದ ಶ್ರವಣ್ ವರ್ಮಾ ಪೆನುಮೆಚ್ಚ, ನಿಖೀಲ್ ವರ್ಮಾ ಪೆನಮತ್ಸ ಎಂಬವರು ಸೇರಿ 7 ತಿಂಗಳ ಹಿಂದಿನಿಂದ ಕೂಡಿಹಾಕಿದ್ದಾರೆ. ನೆಲಮಾಳಿಗೆಯಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ ಹಿಂಸಿಸಿದ್ದಾರೆ. ಇವರ ಮೂವರ ಮನೆಗಳಿಗೂ ಕರೆದೊಯ್ದು ಅಲ್ಲಿಯೂ ಕೂಡಿ ಹಾಕಿ ಕೆಲಸ ಮಾಡುವಂತೆ ಹಿಂಸೆ ನೀಡುತ್ತಲೇ ಬಂದಿದ್ದಾರೆ. ಸಂತ್ರಸ್ತನ ಬಗ್ಗೆ ವಿಚಾರ ತಿಳಿದ ನಾಗರಿಕರೊಬ್ಬರು ಅಮೆರಿಕ ತುರ್ತು ಸಹಾಯವಾಣಿಗೆ ತಿಳಿಸಿದ ಬಳಿಕ ಪೊಲೀಸರು ವಿದ್ಯಾರ್ಥಿ ಯನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ, ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿದ್ಯಾರ್ಥಿ ಮೃತದೇಹ ಪತ್ತೆ: ಯುಕೆಯಲ್ಲಿ ನ.17ರಂದು ನಾಪತ್ತೆಯಾಗಿದ್ದ ಭಾರತದ ವಿದ್ಯಾರ್ಥಿ ಮಿತು ಕುಮಾರ್ ಪಟೇಲ್ ಎಂಬವರ ಮೃತದೇಹ ಲಂಡನ್ನ ಥೇಮ್ಸ್ ನದಿ ಸಮೀಪ ಪತ್ತೆಯಾಗಿದೆ. ಈ ಅಂಶವನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಸೆ.19ರಂದು ಅವರು ಯು.ಕೆ.ಗೆ ಉನ್ನತ ಅಧ್ಯಯನಕ್ಕಾಗಿ ಆಗಮಿ ಸಿದ್ದರು. ಕೆಲವು ದಿನಗಳ ಹಿಂದೆ ಆನ್ಲೈನ್ನಲ್ಲಿ ಧನ ಸಂಗ್ರ ಹ ಕಾರ್ಯಕ್ರಮವೊಂದರಲ್ಲಿಯೂ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ