ಸ್ವಾತಂತ್ರ್ಯ ಹೋರಾಟದ ಬೀಜಮಂತ್ರ “ವಂದೇ ಮಾತರಂ”


Team Udayavani, Aug 5, 2023, 7:21 AM IST

indian flag

ಕ್ವಿಟ್‌ ಇಂಡಿಯಾ (ಚಲೇ ಜಾಂವ್‌-ಭಾರತ ಬಿಟ್ಟು ತೊಲಗಿ) ಚಳವಳಿ ಆರಂಭವಾದುದು ಮುಂಬಯಿಯ ಗೋವಾಲಿಯ ಟ್ಯಾಂಕ್‌ ಮೈದಾನದಲ್ಲಿ 1942ರ ಆಗಸ್ಟ್‌ 8-9ರಂದು ನಡೆದ ಅ.ಭಾ. ಕಾಂಗ್ರೆಸ್‌ ವಿಶೇಷ ಅಧಿವೇಶನದಲ್ಲಿ.

ಇದು ಆಗಸ್ಟ್‌ ಕ್ರಾಂತಿ ಎಂದೂ, ಸ್ಥಳ ಆಗಸ್ಟ್‌ ಕ್ರಾಂತಿ ಮೈದಾನವೆಂದೂ ಪ್ರಸಿದ್ಧಿಯಾಯಿತು. 1947ರಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯ ದೊರಕಿತು.
ಸ್ವಾತಂತ್ರ್ಯ ಹೋರಾಟದ ಬೀಜಮಂತ್ರವೆನಿಸಿದ ಬಂಕಿಮ್‌ ಚಂದ್ರ ಚಟರ್ಜಿಯವರ “ವಂದೇ ಮಾತರಂ’ ಹಾಡಿಗೆ ಆಧ್ಯಾತ್ಮಿಕ ಅರ್ಥ ಬರೆದ ಅರವಿಂದ ಘೋಷರು ಜನಿಸಿ (ಆ. 15ರಂದು) 150 ವರ್ಷಗಳಾಗಿವೆ.

2017ರ ಆ. 15ರ ಮೊದಲು “ವಂದೇ ಮಾತರಂ’ ಹಾಡಿನ ಕುರಿತು ಮದ್ರಾಸ್‌ ಉಚ್ಚ ನ್ಯಾಯಾಲಯ ತೀರ್ಪೊಂದನ್ನು ನೀಡಿತ್ತು. ಇದರ ಹಿನ್ನೆಲೆಯೇ ತಮಾಷೆಯಾಗಿತ್ತು.
ವೀರಮಣಿ ಎಂಬ ಶಿಕ್ಷಕ ಅಭ್ಯರ್ಥಿ ಲಿಖೀತ ಪರೀಕ್ಷೆ ಎದುರಿಸಿದ್ದರು. “ವಂದೇ ಮಾತರಂ’ ಮೂಲ ಯಾವ ಭಾಷೆಯಲ್ಲಿದೆ? ಎಂಬ ಪ್ರಶ್ನೆಗೆ ಶಾಲೆಯಲ್ಲಿ ಕಲಿತಂತೆ ಬಂಗಾಲಿ ಎಂದು ಉತ್ತರಿಸಿದ್ದರು. ಸರಿ ಉತ್ತರದಲ್ಲಿ ಸಂಸ್ಕೃತ ಎಂದಿತ್ತು. ಹೀಗಾಗಿ ಒಂದು ಅಂಕ ಕಡಿಮೆ ಸಿಕ್ಕಿತು. 90 ಅಂಕ ಸಿಕ್ಕಿದ್ದರೆ ಅಲ್ಲಿಗೇ ಕತೆ ಮುಗಿಯುತ್ತಿತ್ತು.

ವೀರಮಣಿಗೆ ಉದ್ಯೋಗ ಆಯ್ಕೆ ಕೈತಪ್ಪಿತು. ಹೀಗಾಗಿ ಮದ್ರಾಸ್‌ ಉಚ್ಚ ನ್ಯಾಯಾಲಯದ ಕದ ತಟ್ಟಿದರು. ವಂದೇ ಮಾತರಂ ಹಾಡು ಸಂಸ್ಕೃತದಲ್ಲಿದ್ದು ಬಂಗಾಲಿ ಲಿಪಿಯಲ್ಲಿ ಬರೆದದ್ದು ಎಂಬ ನಿರ್ಧಾರಕ್ಕೆ ಬಂದ ನ್ಯಾಯಾಲಯ ವೀರಮಣಿಗೆ ಒಂದು ಅಂಕ ಕೊಡಲು ನಿರ್ದೇಶಿಸಿ ಅವರನ್ನು ಶಿಕ್ಷಕ ವೃತ್ತಿಗೆ ಆಯ್ಕೆ ಮಾಡಲು ಸೂಚಿಸಿತು. ಜತೆಗೆ ಜನರಲ್ಲಿ ರಾಷ್ಟ್ರೀಯತೆ ಜಾಗೃತಿಯಾಗಲು, ಪೂರ್ವಜರ ಸ್ವಾತಂತ್ರ್ಯ ಹೋರಾಟದ ಮಹತ್ವ ಜನಮಾನಸದಲ್ಲಿ ಸದಾ ಹಸುರಾಗಿರಲು ಕನಿಷ್ಠ ವಾರದಲ್ಲಿ ಒಮ್ಮೆಯಾದರೂ ಶಾಲಾ ಕಾಲೇಜುಗಳಲ್ಲಿ ವಂದೇ ಮಾತರಂ ಹಾಡನ್ನು ಹಾಡುವಂತೆ ನ್ಯಾಯಾಲಯ ತೀರ್ಪು ನೀಡಿತು.

ನಿಜ ವಿಷಯವೆಂದರೆ ಭಾರತೀಯ ಬಹುತೇಕ ಎಲ್ಲ ಭಾಷೆಗಳ ಶಬ್ದಗಳೂ ಸಂಸ್ಕೃತದಿಂದ ಪ್ರಭಾವಿತವಾದಂತೆ ಬಂಗಾಲಿ ಭಾಷೆಯೂ ಆಗಿದೆ. “ವಂದೇ’ ಎನ್ನುವುದು “ಬಂದೆ’, ರವೀಂದ್ರ ಬದಲು ರಬೀಂದ್ರ ಆಗುವುದು ಬಂಗಾಲಿಯ ಶೈಲಿ. ಇದೇ ಹಾಡಿನಲ್ಲಿ ಮುಂದೆ ಬರುವ “ತುಮಿ’ ಎಂಬಿತ್ಯಾದಿ ಶಬ್ದಗಳು ಬಂಗಾಲಿ ಯದ್ದು, ಉಳಿದವು ಸಂಸ್ಕೃತದ್ದು. “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ||’ ಎಂಬ ಕುವೆಂಪು ಅವರ ಹಾಡು ಸಂಸ್ಕೃತವೋ? ಕನ್ನಡವೋ? ಎಂದು ಪ್ರಶ್ನಿಸಿದರೆ ದಾಖಲೆಗಳನ್ನು ಜಾಲಾಡಿಸಿ ಕೋರ್ಟ್‌ಗೆ ಹಾಜರು ಪಡಿಸಬೇಕಾಗಬಹುದು. ಇದರಲ್ಲಿರುವುದು ಬಹುತೇಕ ಶಬ್ದ ಸಂಸ್ಕೃತದ್ದೇ, ಆದರೆ ನಾವದನ್ನು ಕನ್ನಡವೆಂದೇ ಭಾವಿಸಿದ್ದೇವೆ. ವಂದೇ ಮಾತರಂ ಕತೆಯೂ ಅಷ್ಟೇ. ಹಾಗೆ ನೋಡಿದರೆ ರಬೀಂದ್ರನಾಥ ಠಾಗೋರರು ಬರೆದ “ಜನಗಣಮನ’ ಹಾಡೂ ಸಂಸ್ಕೃತದಲ್ಲಿದೆಯೋ? ಬಂಗಾಲಿಯಲ್ಲಿದೆಯೋ? ಎರಡೂ ಹೌದು…

ಬಂಕಿಮ್‌ ಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) (1838- 1894) 1882ರಲ್ಲಿ ಈ ಹಾಡನ್ನು ಬರೆದರು, “ಆನಂದಮಠ’ ಬಂಗಾಲಿ ಕಾದಂಬರಿಯಲ್ಲಿ ಈ ಹಾಡು ಉಲ್ಲೇಖೀತವಾಗಿದೆ. ಎಷ್ಟೋ ಬ್ರಿಟಿಷ್‌ ಮೂಲದ ಪ್ರಜೆಗಳು ಭಾರತದಲ್ಲಿ ಬ್ರಿಟಿಷ್‌ ಆಡಳಿತಗಾರರ ದುರಾ ಚಾರಗಳನ್ನು ಖಂಡಿಸಿದ್ದರೆ, ಬ್ರಿಟಿಷ್‌ ಆಳ್ವಿಕೆಯಲ್ಲಿಯೇ ಅಧಿಕಾರಿಗಳಾಗಿದ್ದವರು ಸ್ವಾತಂತ್ರ್ಯ ಹೋರಾಟಕ್ಕೂ ಪರವಾಗಿ ನಿಂತವರಿದ್ದಾರೆ. ಈ ವರ್ಗದಲ್ಲಿ ಬಂಕಿಮ್‌ ಒಬ್ಬರು.

ಇವರ ವಿಶೇಷವೆಂದರೆ ಸ್ವಾತಂತ್ರ್ಯ ಹೋರಾ ಟವಿನ್ನೂ ಭಾರತಾದ್ಯಂತ ಏಕಕಾಲದಲ್ಲಿ ಸಂಘಟಿತವಾಗಿ ರೂಪುಗೊಳ್ಳದೆ ಇರುವ ಸ್ವಾಭಿಮಾನದ ಪುನರುತ್ಥಾನದ ಕಾಲದಲ್ಲಿ ಈ ಹಾಡು ಇವರ ಕಾಲಾನಂತರ ಸಮಗ್ರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದಾಗ “ಆನಂದಮಠ’ ಕಾದಂಬರಿಯನ್ನೇ ಬ್ರಿಟಿಷರು ನಿಷೇಧಿಸಿದರು. ಪ್ರಕೃತಿ ಮಾತ್ರ ಅಧಿಕಾರಿಯಾಗಿದ್ದಾಗ ಬಂಕಿಮ್‌ ಚಂದ್ರರು ಬಿತ್ತಿದ ಸ್ವಾತಂತ್ರ್ಯದ ಬೀಜದ ಗುಟ್ಟನ್ನು ಬ್ರಿಟಿಷರಿಗೆ ಅರಿಯುವಂತೆ ಮಾಡಲಿಲ್ಲ. ಆಡಳಿತಾತ್ಮಕವಾಗಿ ಆಂಗ್ಲರಿಗೂ ಬಂಕಿಮರಿಗೂ ಭಿನ್ನಾಭಿಪ್ರಾಯವಿತ್ತು ಎನ್ನುವುದು ತಿಳಿದು ಬರುತ್ತದೆ. ಸ್ವಾತಂತ್ರಾನಂತರ ರಾಷ್ಟ್ರಗೀತೆ ಸ್ಥಾನ ಕೈತಪ್ಪಿ ರಾಷ್ಟ್ರೀಯ ಗಾನ ಸ್ಥಾನಸಿಕ್ಕಿತು. ಹಾಡಿಗೆ ಮುಖ್ಯವಾಗಿ ವಿರೋಧ ವ್ಯಕ್ತವಾದದ್ದು ಮುಸ್ಲಿಂ ಲೀಗ್‌ ಕಡೆಯಿಂದಲಾದರೂ, ಈ ಹಾಡನ್ನು ಹಾಡಿದ್ದು ಕಲ್ಕತ್ತಾದಲ್ಲಿ 1896ರಲ್ಲಿ ರಹಿಮತುಲ್ಲಾ ಎಂ. ಸಯಾ ನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಎಂಬುದು ಇನ್ನೊಂದು ವೈಚಿತ್ರ್ಯ. ಮೊದಲು ಹಾಡಿದ್ದು ರಬೀಂದ್ರನಾಥ ಠಾಗೋರ್‌, ಜನಗಣಮನ
ರಚಿಸಿದ್ದೂ ಠಾಗೋರ್‌.

1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ ಎಂದೂ ಕರೆಯುತ್ತಾರೆ) ನಡೆಯುವಾಗ ಬಂಕಿಮ್‌ಚಂದ್ರರು ಕಂಡ ಅನುಭವವೇ “ಆನಂದಮಠ’ ಕಾದಂಬರಿಗೆ ಪ್ರೇರಣೆಯಾಗಿರುವ ಸಾಧ್ಯತೆ ಇದೆ. ಇದಲ್ಲದೆ ಬಂಕಿಮರ ಸಮಕಾಲೀನರಾದ ಮಹಾ ರಾಷ್ಟ್ರದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವಾಸುದೇವ ಬಲವಂತ ಫ‌ಡೆRಯವರ ಪ್ರಭಾವ ಇದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಎಲ್ಲ ಕಾದಂಬರಿಗಳೂ ಒಂದರ್ಥದಲ್ಲಿ ಜೀವನ ಚರಿತ್ರೆಯಾಗಿರದೆ, ಕಾಲ್ಪನಿಕ ಸ್ವರೂಪದಲ್ಲಿರುತ್ತವೆ. ಮಧ್ಯೆ ಮಧ್ಯೆ ಕಾದಂಬರಿಕಾರ ತಾನು ಹೇಳಬೇಕಾದ ವಿಷಯವನ್ನು ಪಾತ್ರಗಳ ಮೂಲಕ ಬಿಂಬಿಸುತ್ತಾನೆ. ಆದ್ದರಿಂದ ವಾಸ್ತವವೂ ಕಲ್ಪನೆಯೂ ಮಿಶ್ರವಾಗಿರುತ್ತದೆ. 18ನೆಯ ಶತಮಾನದ ಉತ್ತರಾರ್ಧದಲ್ಲಿ ಬಂಗಾಲದ ದಿನಾಜ್‌ಪುರ ಸುತ್ತಮುತ್ತ ಉಂಟಾಗಿದ್ದ ಬರಗಾಲದ ಪರಿಸ್ಥಿತಿಯಿಂದ ಹಿಡಿದು ಸನ್ಯಾಸಿಗಳು ನಡೆಸಿದ ಕ್ರಾಂತಿಯನ್ನು ವಿವರಿಸುವ ಕಥೆ ಇಲ್ಲಿದೆ.

ಬ್ರಿಟಿಷರು ಬರಗಾಲದಿಂದ ಕಂಗೆಟ್ಟಿದ್ದ ಜನರನ್ನು ಹೆದರಿಸಿ ತೆರಿಗೆ ವಸೂಲಿ ಮಾಡುವುದು ಮತ್ತು ಸತ್ಯಾನಂದಸ್ವಾಮಿ, ಭವಾನಂದ, ಜೀವಾನಂದರು ದೇಶಕ್ಕಾಗಿ ಹೋರಾಟ ನಡೆಸುವಾಗ ಮಾತೃಭೂಮಿಯನ್ನು ದೇವಿ ಸ್ವರೂಪದಲ್ಲಿ ಆರಾಧಿಸುವುದು, ಆಕೆಯನ್ನು ಕಾಳಿ, ದುರ್ಗೆ ಎಂದು ಸಂಬೋಧಿಸುವುದೂ (ಮಾತೃಭೂಮಿ ಕಲ್ಪನೆ-ಇದುವೇ ವಂದೇಮಾತರಂ ಹಾಡಿನ ಸಾರ), ಇವರು ಸರಕಾರ ಅನ್ಯಾಯದಿಂದ ವಸೂಲಿ ಮಾಡಿದ ಕಂದಾಯದ ಹಣವನ್ನು ಲೂಟಿ ಮಾಡಿ ಬಡವರಿಗೆ ಹಂಚುವುದು, ಬ್ರಿಟಿಷ್‌ ಅಧಿಕಾರಿಗಳು ಇವರ ಬೆನ್ನಟ್ಟುವುದು ಹೀಗೆ ರೋಚಕ ಕಥಾ ವಸ್ತುಗಳಿವೆ.

1920ರ ಮೊದಲು ಅಖೀಲ ಭಾರತ ಸ್ವರೂಪದ ಸಂಘಟನಾತ್ಮಕ ಹೋರಾಟ ನಡೆಯಲಿಲ್ಲ. ಅಲ್ಲಲ್ಲಿ ಸ್ಥಳೀಯ ನೇತಾರರ ನೇತೃತ್ವದಲ್ಲಿ ಅಲ್ಲಲ್ಲೇ ಹೋರಾಟ ನಡೆದಿತ್ತು. ಹಾಗೆಯೇ ಬಂಗಾಲದಲ್ಲಿ ಸನ್ಯಾಸಿಗಳೂ ಹೋರಾಟ ನಡೆಸಿದ್ದು ಬಂಕಿಮರಿಗೆ ಪ್ರೇರೇ ಪಣೆಯಾಯಿತು ಎನ್ನಬಹುದು. ಗಾಂಧೀಜಿ ನೇತೃತ್ವದಲ್ಲಿ ನಡೆದ ಸಂಘಟನಾತ್ಮಕ ಪ್ರಯತ್ನಗಳು ಇಲ್ಲದ ಕಾರಣ ಅದಕ್ಕೂ ಹಿಂದೆ ನಡೆದ ಅದೆಷ್ಟೋ ಹೋರಾಟಗಳು ದಾಖಲಾಗದೆ ಹೋಗಿವೆ ಎನ್ನುವುದೂ ಸತ್ಯ.

ಪ್ರಾಯಃ ಬಂಕಿಮರು ಹಾಕಿದ ಬೀಜ ಅವರು ಬದುಕಿರುವವರೆಗೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುವಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರಲಿಲ್ಲ ಎನ್ನಬಹುದು. ಬೀಜ ಬೃಹದಾ ಕಾರದಲ್ಲಿ ಬೆಳೆಯುವಾಗ ಬೀಜ ಹಾಕಿದವರೇ ಕಾಲ ವಶ ವಾಗಿದ್ದರು, ನಮ್ಮ ಜೀವನದಲ್ಲಿಯೂ ಇಂತಹ ಅನುಭವ ಆಗುತ್ತದೆ. ಬೀಜ ಮರವಾಗಲು, ಶಿಶು ಜನಿಸಲು ನಿಸರ್ಗ ನಿಗದಿ ಪಡಿಸಿದ ಸಮಯವಿರುವಂತೆ ಅದೇ ನಿಸರ್ಗ ವಿಸ್ತಾರವಾದ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದಷ್ಟು ಸಮಯವನ್ನು ತೆಗೆದುಕೊಂಡಿತೋ ಎಂಬ ಊಹೆ ಮೂಡುತ್ತದೆ. ಇವೆಲ್ಲ ಫಾಸ್ಟ್‌ಫ‌ುಡ್‌ ಅಲ್ಲವಲ್ಲ? ಹಾಗಿ ದ್ದಲ್ಲಿ ಸೈಡ್‌ ಇಫೆಕ್ಟ್ ಇದ್ದಿರುತ್ತಿತ್ತೋ ಏನೋ? ಅರವಿಂದ ಘೋಷ್‌ ಪಾಂಡಿಚೇರಿಗೆ ಬಂದು ನೆಲೆಸಿದ ಬಳಿಕ, ಅವ ರನ್ನು ಮತ್ತೆ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ ಎಂದು ಮನವಿ ಮಾಡಿದಾಗ “ಸ್ವಾತಂತ್ರ್ಯ ಬಂದೇ ಬರುತ್ತದೆ.
ಕಾಲ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದು ಜ್ಞಾಪಕಕ್ಕೆ ಬರುತ್ತದೆ.

 ಮಟಪಾಡಿ ಕುಮಾರಸ್ವಾಮಿ

 

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.