ಮಗಳ ಮದುವೆ ಸಂದರ್ಭ ಇಬ್ಬರು ಬಡ ಹೆಣ್ಣುಮಕ್ಕಳಿಗೆ ವಿವಾಹ ನೆರವೇರಿಸಿದ ಅಬ್ಬಚ್ಚ !
Team Udayavani, Jan 4, 2022, 7:10 AM IST
ಸಾಂದರ್ಭಿಕ ಚಿತ್ರ.
ಬೆಳ್ಳಾರೆ: ಪುತ್ರಿಯ ವಿವಾಹದ ಸಂದರ್ಭದಲ್ಲೇ ತನ್ನೂರಿನ ಇಬ್ಬರು ಬಡ ಹೆಣ್ಣ ಮಕ್ಕಳ ವಿವಾಹದ ಖರ್ಚನ್ನೂ ಸಂಪೂರ್ಣ ವಾಗಿ ಭರಿಸುವ ಮೂಲಕ ಇಲ್ಲಿನ ಉದ್ಯಮಿಯೊಬ್ಬರು ಮಾದರಿ ಹೆಜ್ಜೆ ಇಟ್ಟಿದ್ದಾರೆ.
ಬೆಳ್ಳಾರೆಯ ಪ್ರಗತಿ ಎಂಟರ್ ಪ್ರೈಸಸ್ ಮಾಲಕ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ (ಅಬ್ಬಚ್ಚ) ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚು ಭರಿಸಿದವರು. ಪುತ್ರಿ ಮಿಸØಬಳ ವಿವಾಹದ ದಿನವೇ ಸಾಮೂಹಿಕ ವಿವಾಹ ಏರ್ಪಡಿಸಿ ಬಡ ಹೆಣ್ಣು ಮಕ್ಕಳಿಬ್ಬರ ಮದುವೆ ನೆರವೇರಿಸಿದರು.
ಸಾಮೂಹಿಕ ವಿವಾಹ ಹಾಗೂ ಸಮ್ಮಾನ ಕಾರ್ಯ ಕ್ರಮದ ಉಸ್ತುವಾರಿಯನ್ನು ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೆಬಲ್ ಟ್ರಸ್ಟ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಬೆಳ್ಳಾರೆ ವಹಿಸಿಕೊಂಡಿತ್ತು.
ಇದನ್ನೂ ಓದಿ:ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ
ಹಾಜಬ್ಬ ಅವರಿಗೆ ಸಮ್ಮಾನ
ಇದೇ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿ ಸಲಾಯಿತು. ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ಧಾರ್ಮಿಕ ವಿಧಿ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ್ಪಿನಂಗಡಿ : ಸಾಲ ಮಂಜೂರು ಮಾಡಿ ಶಿಕ್ಷಕಿಯ ಖಾತೆಯಿಂದ 7.47 ಲಕ್ಷ ರೂ. ಲಪಟಾವಣೆ
ವಿಟ್ಲ: ಆಟೋದಲ್ಲಿ ಬಂದು ದುಷ್ಕರ್ಮಿಗಳಿಂದ ಮಹಿಳೆಯ ಬರ್ಬರ ಹತ್ಯೆ
ಪ್ರತ್ಯೇಕ ರಾಜ್ಯ ಹೇಳಿಕೆಯನ್ನು ಪುನರ್ ಪರಿಶೀಲನೆ ನಡೆಸಿಕೊಳ್ಳಲಿ: ಗೃಹ ಸಚಿವ ಆರಗ ಜ್ಣಾನೇಂದ್ರ
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ಸುಳ್ಯ : ಎರಡು ಅಂಗಡಿಯಲ್ಲಿ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ