ಡಿಮೆನ್ಶಿಯಾ ಎಂದರೇನು?


Team Udayavani, Jul 5, 2020, 5:35 AM IST

ಡಿಮೆನ್ಶಿಯಾ ಎಂದರೇನು?

ಡಿಮೆನ್ಶಿಯಾವು ನಿಮ್ಮ ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡುವಂತಹ, ನಿಮ್ಮ ನೆನಪಿನ ಶಕ್ತಿ, ಆಲೋಚನೆ ಮತ್ತು ಸಾಮಾಜಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವ, ಮೆದುಳಿನ ನರದ ಕಾಯಿಲೆಗಳಿಗೆ ಸಂಬಂಧಿಸಿದ ಒಂದು ವಿಶಾಲವಾದ ಪದವಾಗಿದೆ. ಇದು ವ್ಯಕ್ತಿಯ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ಪ್ರಗತಿಶೀಲ ರೋಗದ ಸ್ಥಿತಿಯಾಗಿದೆ. ಡಿಮೆನ್ಶಿಯಾವು ಸುಮಾರು ಶೇ.5ರಿಂದ 7ರಷ್ಟು ವಯಸ್ಸಾದವರ ಮೇಲೆ ಪರಿಣಾಮವನ್ನು ಬೀರುತ್ತದೆ. ಆದರೆ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದಂತೆ, ಡಿಮೆನ್ಶಿಯಾದ ಹರಡುವಿಕೆಯು ಹೆಚ್ಚಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಡಿಮೆನ್ಶಿಯಾದಿಂದ ಬಳಲುತ್ತಿರುವ ಹಿರಿಯರನ್ನು ಹೆಚ್ಚಾಗಿ ಅವರ ಕುಟುಂಬದ ಸದಸ್ಯರೇ ನೋಡಿಕೊಳ್ಳುತ್ತಾರೆ. ಅದು ಅಸ್ಥಿರ ಮತ್ತು ದೀರ್ಘಾವಧಿಯವರೆಗೆ ಕಂಡುಬರುವ ರೋಗಲಕ್ಷಣವನ್ನು ಹೊಂದಿರುವ ಕಾರಣದಿಂದಾಗಿ ಡಿಮೆನ್ಶಿಯಾದಿಂದ ಬಳಲುತ್ತಿರುವವರನ್ನು ನೋಡಿಕೊಳ್ಳಲು ಸಾಕಷ್ಟು ಬೇಡಿಕೆಯೂ ಇದೆ ಮತ್ತು ಕಷ್ಟಕರವೂ ಆಗಿದೆ. ವಯಸ್ಸಾದವರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಡಿಮೆನ್ಶಿಯಾವು ಒಂದು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಯಸ್ಸಾದವರು ಮತ್ತು ಅವರ ಕುಟುಂಬ ಸದಸ್ಯರು ಡಿಮೆನ್ಶಿಯಾದ ಬಗ್ಗೆ ಸಾಕಷ್ಟು ತಿಳಿವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ.

ಡಿಮೆನ್ಶಿಯಾದ ಬಗ್ಗೆ ಅರ್ಥಮಾಡಿಕೊಳ್ಳಲು ಇರುವ ಮೊದಲ ಹಂತ ಎಂದರೆ, ಅದರ ಕಾರಣ ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು. ಮರೆಗುಳಿತನ ಕಾಯಿಲೆಯು ಡಿಮೆನ್ಶಿಯಾದ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಇದಕ್ಕೆ ಯಾವುದೇ ಕಾರಣಗಳಿಲ್ಲ. ಡಿಮೆನ್ಶಿಯಾವು ಸಾಮಾನ್ಯವಾಗಿ ಪಾರ್ಕಿನ್ಸನ್‌ ಕಾಯಿಲೆ ಅಥವಾ ಪಾರ್ಶ್ವವಾಯು ಮುಂತಾದ ಪರಿಸ್ಥಿತಿಗಳೊಂದಿಗೆ ಸಂಬಂಧಿಸಿದೆ. ಕೆಲವು ಸಂದರ್ಭಗಳಲ್ಲಿ ಸೋಂಕುಗಳು ಅಥವಾ ವಿಟಮಿನ್‌ಗಳ ಕೊರತೆಯಿಂದ ಡಿಮೆನ್ಶಿಯಾದಂತಹ ರೋಗಲಕ್ಷಣಗಳು ಸಂಭವಿಸಬಹುದು. ಅದನ್ನು ಹಿಮ್ಮುಖಗೊಳಿಸಬಹುದು ಅಥವಾ ಸರಿಪಡಿಸಬಹುದು. ಇದೇ ಕಾರಣಕ್ಕಾಗಿ, ಡಿಮೆನ್ಶಿಯಾದ ಆರಂಭಿಕ ಹಂತದ ಗುರುತಿಸುವಿಕೆ ಬಹಳ ಆವಶ್ಯಕ.

ಡಿಮೆನ್ಶಿಯಾದ ಮುಖ್ಯ ಲಕ್ಷಣಗಳು

1. ನೆನಪಿನ ಶಕ್ತಿಯ ಕ್ಷೀಣತೆ.
ಉದಾ.: ಅವರು ಇತ್ತೀಚೆಗೆ ಕಲಿತ ಮಾಹಿತಿ, ಪ್ರಮುಖ ದಿನಾಂಕಗಳು ಅಥವಾ ಘಟನೆಗಳು ಮರೆತುಹೋಗುವುದು. ಒಂದೇ ರೀತಿಯ ಪ್ರಶ್ನೆಗಳನ್ನು ಪದೇ ಪದೆ ಕೇಳುವುದು ಮತ್ತು ಸದಸ್ಯರು ತಮ್ಮ ಸ್ವಂತ ಕೆಲಸಗಳಿಗೆ ಕುಟುಂಬದವರನ್ನು ಹೆಚ್ಚಾಗಿ ಅವಲಂಬಿಸುವುದು.
2. ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಮತ್ತು ಅವರು ತಮ್ಮ ಕೆಲಸಗಳನ್ನು ಮಾಡಲು ಮೊದಲಿಗಿಂತ ಈಗ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು.
3. ತಮಗೆ ತಿಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತೊಂದರೆ.
ಉದಾ.: ಪರಿಚಿತ ಸ್ಥಳದಲ್ಲಿ ತಮ್ಮ ದಾರಿಯನ್ನು ಕಂಡುಕೊಳ್ಳುವಲ್ಲಿ ತೊಂದರೆ, ದಿನಸಿ ಪಟ್ಟಿಯನ್ನು ತಯಾರಿಸುವಲ್ಲಿ ಅಥವಾ ತಮ್ಮ ನೆಚ್ಚಿನ ಆಟದ ನಿಯಮಗಳನ್ನು ನೆನಪಿಟ್ಟುಕೊಳ್ಳುವಲ್ಲಿ, ತಮಗೆ ತಿಳಿದಿರುವ ಅಡುಗೆಯನ್ನು ಅನುಸರಿಸಲು ಅಥವಾ ತಿಂಗಳ ಬಿಲ್‌ಗ‌ಳನ್ನು ಜೊಡಣೆ ಮಾಡಲು ತೊಂದರೆ.
4. ಸಮಯ ಅಥವಾ ಸ್ಥಳಗಳಲ್ಲಿ ಗೊಂದಲ.
ಉದಾ.: ಅವರು ದಿನಾಂಕಗಳನ್ನು, ಕಾಲಗಳನ್ನು ಮತ್ತು ಸಮಯವನ್ನು ಗಮನದಲ್ಲಿಟ್ಟುಕೊಳ್ಳುವಲ್ಲಿ ವಿಫ‌ಲರಾಗುವುದು. ಅವರಿಗೆ ಆಯಾ ದಿನದ ಸಮಯ, ತಾರೀಕು ಅಥವಾ ತಿಂಗಳುಗಳನ್ನು ಹೇಳಲು ಸಾಧ್ಯವಾಗದಿರುವುದು.
5. ಮಾತನಾಡಲು ಅಥವಾ ಬರೆಯಲು ತೊಂದರೆ.
ಉದಾ.: ಅವರಿಗೆ ತಿಳಿದಿರುವ ವಸ್ತುವಿಗೆ ಪದಗಳನ್ನು ಹುಡುಕುವಲ್ಲಿ ತೊಂದರೆಯುಂಟಾಗುವುದು, ಮಾತಿನ ಸಂಭಾಷಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆಯಾಗುವುದು.
6. ಕೆಲವು ವಸ್ತುಗಳನ್ನು ತಪ್ಪಾದ ಜಾಗದಲ್ಲಿಡುವುದು ಮತ್ತು ಅದನ್ನು ಮತ್ತೆ ಮೊದಲಿನ ಹಂತಕ್ಕೆ ಜೋಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಉದಾ.: ಅವರು ಯಾವುದೇ ಒಂದು ವಸ್ತುವನ್ನು ಕಳೆದುಕೊಳ್ಳಬಹುದು ಮತ್ತು ಅವುಗಳನ್ನು ಹುಡುಕಲು ಹೋದ ದಾರಿಯಲ್ಲಿ ಅವರಿಗೆ ಹಿಂದಿರುಗಿ ಬರಲು ಸಾಧ್ಯವಾಗದಿರುವುದು, ಅದನ್ನು ಇತರರು ಕದ್ದಿದ್ದಾರೆ ಎಂದು ಆರೋಪಿಸುವುದು.
7. ಯೋಜನೆಗಳನ್ನು ರೂಪಿಸುವಲ್ಲಿ ಅಥವಾ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ತೀರ್ಪನ್ನು ನೀಡುವಲ್ಲಿ ತೊಂದರೆಗೀಡಾಗುವುದು. ಇದರ ಪರಿಣಾಮವಾಗಿ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದು ಅಥವಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು. ಅದರಲ್ಲೂ ವಿಶೇಷವಾಗಿ ಹಣಕಾಸು ಅಥವಾ ಸುರಕ್ಷತೆಯ ಸಂದರ್ಭದಲ್ಲಿ.
8. ಮನಸ್ಥಿತಿ ಮತ್ತು ವ್ಯಕ್ತಿತ್ವದಲ್ಲಿನ ಬದಲಾವಣೆಗಳು. ಅವರು ಗೊಂದಲಕ್ಕೀಡಾ ಗುವುದು, ಅನುಮಾನಗಳು ಉಂಟಾಗುವುದು, ಖನ್ನತೆಗೆ ಒಳಗಾಗುವುದು, ಭಯಭೀತರಾಗುವುದು ಅಥವಾ ಆತಂಕಕ್ಕೊಳಗಾಗುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವಾ ಸುಲಭವಾಗಿ ಅಸಮಾಧಾನಗೊಳ್ಳುವುದು.

ಆದಾಗ್ಯೂ, ಡಿಮೆನ್ಶಿಯಾದ ಆರಂಭಿಕ ರೋಗ ಚಿಹ್ನೆಗಳು ಮತ್ತು ಲಕ್ಷಣಗಳು ವಯಸ್ಸಾದವರಲ್ಲಿ ಸಾಮಾನ್ಯವಾದುದು ಎಂದು ತಪ್ಪಾಗಿ ಗ್ರಹಿಸಲ್ಪಡುತ್ತದೆ ಮತ್ತು ಕಡೆಗಣಿಸಲಾಗುತ್ತದೆ ಅಥವಾ ನಿರ್ಲಕ್ಷಿಸಲ್ಪಡುತ್ತದೆ. ಇದರ ಪರಿಣಾಮವಾಗಿ ಅವರು ಸಹಾಯ ಪಡೆಯುವ ಅಥವಾ ವೈದ್ಯರ ಬಳಿ ಬರುವ ಹೊತ್ತಿಗೆ ಈ ಡಿಮೆನ್ಶಿಯಾವು ಗಣನೀಯವಾಗಿ ಮುಂದುವರಿದಿರುತ್ತದೆ. ಆದ್ದರಿಂದ ಒಬ್ಬ ಸಾಮಾನ್ಯ ಅಥವಾ ವಯಸ್ಸಾದ ವ್ಯಕ್ತಿ ಮತ್ತು ಡಿಮೆನ್ಶಿಯಾದ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆ ವಿಶಿಷ್ಟ ವಯಸ್ಸಿಗೆ ಸಂಬಂಧಿಸಿದಂತೆ ಮೆದುಳಿನ ಬದಲಾವಣೆ, ಅದೇ ರೀತಿ ದಿನವನ್ನು ಮರೆತುಬಿಡುವುದು, ಪಾವತಿ ಮಾಡಲು ಮರೆತುಹೋಗುವುದು, ಅವರ ವಸ್ತುಗಳನ್ನು ಹುಡುಕುವಲ್ಲಿ ತೊಂದರೆಯಾಗುವುದು ಇದೇ ಮುಂತಾದ ಕೆಲವು ಸಮಸ್ಯಗಳು ಇರಬಹುದು. ಆದರೆ ಈ ಸಮಸ್ಯೆಗಳು ಯಾವತ್ತಿಗೋ ಒಮ್ಮೆ ಸಂಭವಿಸುತ್ತವೆ ಮತ್ತು ಅದು ಸಂಭವಿಸಿದಲ್ಲಿ ಅವರು ಅದನ್ನು ಪರಿಹರಿಸಲು ಸಾಧ್ಯವಾಗುವುದು. ಉದಾ: ಅವರು ಯಾವುದೇ ಒಂದು ವಸ್ತುವನ್ನು ತಪ್ಪಾದ ಜಾಗದಲ್ಲಿ ಇರಿಸಿದ್ದಲ್ಲಿ, ಅದನ್ನು ಅವರು ಮತ್ತೆ ಹಿಂಪಡೆಯಲು ಸಾಧ್ಯವಾಗುವುದು.

ಪ್ರತಿಯೊಬ್ಬರು ಈ ಕನಿಷ್ಠ ಅರಿವಿನ ದುರ್ಬಲತೆಯ (ಮೈಲ್ಡ್‌ ಕಾಗ್ನಿನೆಟೀವ್‌ ಇಂಪೇರ್‌ವೆುಂಟ್‌) ಬಗ್ಗೆ ತಿಳಿದಿರಬೇಕಾದುದು ಇನ್ನೊಂದು ಅಂಶವಾಗಿದೆ. ಇದು ವಯಸ್ಸಾದವರಿಗೆ ನೆನಪಿನ ಶಕ್ತಿಯ ಸಮಸ್ಯೆಯಿದ್ದು, ಉಳಿದ ಅರಿವಿನ ಕಾರ್ಯಗಳು ಸ್ಥಿರವಾಗಿರುವ ಒಂದು ಸ್ಥಿತಿಯಾಗಿರುತ್ತದೆ. ಕೆಲವೊಮ್ಮೆ, ಆದರೆ ಯಾವಾಗಲೂ ಅಲ್ಲ, ಈ ಕನಿಷ್ಠ ಅರಿವಿನ ದುರ್ಬಲತೆಯನ್ನು ಹೊಂದಿರುವ ಹಿರಿಯರು ಡಿಮೆನ್ಶಿಯಾದಿಂದ ಹೊರಬರಲೂಬಹುದು. ಆದ್ದರಿಂದ ನೆನಪಿನ ಶಕ್ತಿಯ ಸಮಸ್ಯೆಯನ್ನು ಹೊಂದಿರುವ ವೃದ್ಧರು ಆದಷ್ಟು ಬೇಗ ವೈದ್ಯರ ಬಳಿ ಹೋಗಿ ಸರಿಯಾದ ಮೌಲ್ಯಮಾಪನಕ್ಕೆ ಒಳಪಡಬೇಕಾಗಿದೆ.

ಈ ರೋಗಲಕ್ಷಣವನ್ನು ಸಾಮಾನ್ಯವಾಗಿ ನರಶಾಸ್ತ್ರಜ್ಞರು ಅಥವಾ ಮನೋವೈದ್ಯರು ನಿರ್ಧರಿಸುತ್ತಾರೆ. ಡಿಮೆನ್ಶಿಯಾ ರೋಗವನ್ನು ಪತ್ತೆ ಹಚ್ಚಲು ಒಂದೇ ಪರೀಕ್ಷೆಯಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಗುರುತಿಸಲು ಸಹಾಯವಾಗುವ ಹಲವಾರು ಪರೀಕ್ಷೆಗಳನ್ನು ವೈದ್ಯರು ನಡೆಸುವ ಸಾಧ್ಯತೆಗಳಿರುತ್ತದೆ. ಡಿಮೆನ್ಶಿಯಾ ರೋಗ ನಿರ್ಣಯಕ್ಕೆ ಸಾಕಷ್ಟು ನ್ಯುರೋಸೈಕಾಲಜಿ ಪರೀಕ್ಷೆ, ಮೆದುಳಿನ ಸ್ಕಾನಿಂಗ್‌, ಕ್ಲಿನಿಕಲ್‌ ಪರೀಕ್ಷೆಗಳು ಮುಂತಾದ ತಪಾಸಣೆಗಳಿರುತ್ತವೆ. ಒಟ್ಟಾರೆಯಾಗಿ ಡಿಮೆನ್ಶಿಯಾದ ನಿರ್ವಹಣೆಯಲ್ಲಿ ಅದರ ಪ್ರಗತಿಯನ್ನು ನಿಯಂತ್ರಿಸಲು, ಅದರ ಆರಂಭಿಕ ಹಂತದ ಗುರುತಿಸುವಿಕೆ ಮತ್ತು ಹಸ್ತಕ್ಷೇಪಕ್ಕೆ ಬಲವಾದ ಒತ್ತು ನೀಡಲಾಗುತ್ತದೆ.

ಈ ಲೇಖನವು ಡಿಮೆನ್ಶಿಯಾದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ನಡೆಯುತ್ತಿರುವ ಸಂಶೋಧನ ಯೋಜನೆಯ ಭಾಗದ ಸರಣಿಯಾಗಿದೆ. ಈ ಯೋಜನೆಯು ಭಾರತೀಯ ವೈದ್ಯಕೀಯ ಮಂಡಳಿಯ ಧನ ಸಹಯೋಗದೊಂದಿಗೆ ನಡೆಯುತ್ತಿರುವ ಇಂಡೋ-ಸ್ವೀಡಿಶ್‌ ಸಂಶೋಧನೆಯಾಗಿದೆ. “ಡಿಮೆನ್ಶಿಯಾದಲ್ಲಿ ಸಮಯದ ನಿರ್ವಹಣೆ’ ಎಂಬ ಈ ಶೀರ್ಷಿಕೆಯ ಯೋಜನೆಯು ಡಿಮೆನ್ಶಿಯಾವನ್ನು ಹೊಂದಿರುವ ಹಿರಿಯರಿಗೆ ಮತ್ತು ಅವರ ಆರೈಕೆದಾರರಿಗೆ ಸಹಾಯ ಮಾಡಲು ವೈದ್ಯಕೀಯೇತರ ತಂತ್ರಗಳ (ಸಹಾಯಕ ಸಾಧನಗಳು) ಬಳಕೆಯ ಅಧ್ಯಯನವನ್ನು ಒಳಗೊಂಡಿರುತ್ತದೆ. ಈ ಯೋಜನೆಯ ಉದ್ದೇಶ ಸಹಾಯಕ ಸಾಧನವು ಅವರ ಸಮಯದ ದೃಷ್ಟಿಕೋನವನ್ನು ಸುಧಾರಿಸುತ್ತದೆಯೇ, ಅವರ ದೈನಂದಿನ ದಿನಚರಿ, ಪ್ರಮುಖ ಕೆಲಸ ಗಳನ್ನು ಮಾಡಲು ಅಥವಾ ಅರ್ಥಪೂರ್ಣ ಚಟುವಟಿಕೆಗಳನ್ನು ಸಮಂಜಸವಾಗಿ ಮಾಡಲು ಮತ್ತು ಕುಟುಂಬ ಸದಸ್ಯರಿಂದ ಅಲ್ಪಾವಧಿಯ ಸಹಕಾರವನ್ನು ಪಡೆದು ಕೆಲಸ ವನ್ನು ಮಾಡಲು ಅವರಿಗೆ ಸಹಾಯ ಮಾಡಬಹುದೇ ಎಂಬುದನ್ನು ಗುರುತಿಸುವುದಾಗಿದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಡಿಮೆನ್ಶಿಯಾದಿಂದ (ಕನಿಷ್ಠತೆಯಿಂದ ಮಧ್ಯಮದ ಹಂತ) ಬಳಲುತ್ತಿರುವ ಹಿರಿಯರು ಮತ್ತು ಅವರ ಆರೈಕೆದಾರರು ಈ ಅಧ್ಯಯನದಲ್ಲಿ ಭಾಗವಹಿಸಬಹುದು. ಯಾರು ಈ ಅಧ್ಯಯನದ ನಿಯಮಗಳಿಗೆ ಒಳಪಡುತ್ತಾರೋ ಅಂಥವರನ್ನು ಈ ಅಧ್ಯಯನದಲ್ಲಿ ಸೇರಿಸಲಾಗುವುದು. ಅವರನ್ನು ಲಿಖೀತ ಪರೀಕ್ಷೆಯೊಂದಿಗೆ ಸಂದರ್ಶಿಸಲಾಗುವುದು ಮತ್ತು ಮೌಲ್ಯಮಾಪನ ಮಾಡಲಾಗುವುದು. ಅನಂತರ ಅವರಿಗೆ ತರಬೇತಿಯೊಂದಿಗೆ ಉಚಿತವಾಗಿ ಸಮಯ ಸಹಾಯಕ ಸಾಧನಗಳನ್ನು ಒದಗಿಸಲಾಗುತ್ತದೆ. ಈ ಸಾಧನಗಳನ್ನು ಅವರು ಮೂರು ತಿಂಗಳ ಅವಧಿಗೆ ಬಳಸಬೇಕಾಗುತ್ತದೆ. ಅನಂತರ ಅವರನ್ನು ಮರುಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವರ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಯೋಜನೆಯು ಪ್ರಸ್ತುತ ಕಾರ್ಯರೂಪದಲ್ಲಿದ್ದು, ಉಡುಪಿ ಮತ್ತು ಮಂಗಳೂರಿನ ಪ್ರದೇಶದಲ್ಲಿ ವಾಸವಾಗಿರುವ ಡಿಮೆನ್ಶಿಯಾದಿಂದ (ಕನಿಷ್ಠತೆಯಿಂದ ಮಧ್ಯಮದ ಹಂತ) ಬಳಲುತ್ತಿರುವ ಹಿರಿಯರು ಮತ್ತು ಅವರ ಆರೈಕೆದಾರರು ಈ ಅಧ್ಯಯನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಸಂಶೋಧನಾಧಿಕಾರಿಗಳನ್ನು ಸಂಪರ್ಕಿಸಬಹುದು.

ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ, ಪ್ರಾಥಮಿಕ ತನಿಖಾಧಿಕಾರಿ
ದೂರವಾಣಿ ಸಂಖ್ಯೆ: 0820 – 2937305
ಕ್ಷಮಾ ಬಂಗೇರ, ಸಹಾಯಕ ಸಂಶೋಧಕರು,
ದೂರವಾಣಿ ಸಂಖ್ಯೆ – 8762379439

ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ
ಪ್ರೊಫೆಸರ್‌, ಅಕ್ಯುಪೇಶನಲ್‌ ಥೆರಪಿ ವಿಭಾಗ, ಸಂಯೋಜಕರು, ಹಿರಿಯರ ಆರೋಗ್ಯಕರ ಅಧ್ಯಯನ ಕೇಂದ್ರ, ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನ್ಸ್‌, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.