ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಮಹಿಳೆಯ ಡ್ಯಾನ್ಸ್!-ವಿಡಿಯೋ ವೈರಲ್
Team Udayavani, Jan 20, 2022, 7:55 AM IST
ಸುದ್ದಿ ವಾಹಿನಿಗಳಲ್ಲಿ ಪ್ಯಾನೆಲ್ ಚರ್ಚೆ ಎಷ್ಟು ಗಂಭೀರವಾಗಿರುತ್ತದೆ ಎನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಚರ್ಚೆಯಲ್ಲಿ ಭಾಗಿಯಾದ ಗಣ್ಯ ಮಹಿಳೆಯೊಬ್ಬರು ಮಾತನಾಡುವ ಬದಲು ಡ್ಯಾನ್ಸ್ ಮಾಡಿದ್ದಾರೆ!
ಯಾವುದೋ ಗಂಭೀರ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಮಹಿಳೆಗೆ ಪ್ಯಾನೆಲ್‌ನಲ್ಲಿದ್ದ ಇತರೆ ಗಣ್ಯರು ಹಲವು ಬಾರಿ ತಡೆಯೊಡ್ಡಿದ್ದಾರೆ. ಕೊಂಚ ಕಾಲ ತಾಳ್ಮೆಯಿಂದ ನೋಡಿದ ಅವರು, ಮಾತನಾಡಲು ಅವಕಾಶ ಸಿಗದ್ದಕ್ಕೆ ಚರ್ಚೆಯಲ್ಲೇ ಡ್ಯಾನ್ಸ್ ಮಾಡಿಬಿಟ್ಟಿದ್ದಾರೆ.
ತೀರಾ ತಮಾಷೆಯೆನಿಸುವಂತಿರುವ 12 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
See what the participant in green kurti does when not given a fair chance to speak! 😂😂😂 pic.twitter.com/M58kKkbpxB
— Elizabeth (@Elizatweetz) January 16, 2022