
ಸರಳವಾಗಿ ನಡೆದ ನಟ ಯಶ್ ಬರ್ತ್‌ಡೇ
Team Udayavani, Jan 9, 2021, 11:02 AM IST

ನಟ ರಾಕಿಂಗ್‌ಸ್ಟಾರ್ ಯಶ್‌ಗೆ ಶುಕ್ರವಾರ ಜನ್ಮದಿನದ ಸಂಭ್ರಮ. ಕೋವಿಡ್ ಕಾರಣದಿಂದ, ಈ ಬಾರಿ ಯಶ್ ಸರಳವಾಗಿ ಜನ್ಮದಿನ
ಆಚರಿಸಿಕೊಂಡರು. ಅಭಿಮಾನಿಗಳು ಈ ಬಾರಿ ಎಲ್ಲಿದ್ದೀರೋ ಅಲ್ಲಿಂದನೇ ವಿಶ್ ಮಾಡಿ ಎಂದು ಅಭಿಮಾನಿಗಳಲ್ಲಿ ಕೆಲ ದಿನಗಳ ಹಿಂದಷ್ಟೇ ಯಶ್ ಮನವಿ ಮಾಡಿಕೊಂಡಿದ್ದರು.
ಹೀಗಾಗಿ ಯಶ್ ಹುಟ್ಟುಹಬಕ್ಕೆ ಮನೆಯ ಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳ ಸಂಖ್ಯೆ ಕೂಡ ಈ ಬಾರಿ ಕಡಿಮೆಯಿತ್ತು. ಹಾಗಾಗಿ ಯಶ್ ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಸರಳವಾಗಿ ಈ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
“ಕೆಜಿಎಫ್-2′ ಚಿತ್ರತಂಡದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಯಶ್ ಜನ್ಮದಿನದ ಪ್ರಯುಕ್ತ “ಕೆಜಿಎಫ್-2′ ಚಿತ್ರತಂಡ,
ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ, ವಿಶೇಷ ಉಡುಗೊರೆಯಾಗಿ ನೀಡಿದೆ.
ಇದನ್ನೂ ಓದಿ:ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ: ಮೊದಲ ಹಂತದಲ್ಲಿ 8,405 ಕೋವಿಡ್ ಯೋಧರಿಗೆ ಲಸಿಕೆ
ಇನ್ನು ಯಶ್ ಜನ್ಮದಿನಕ್ಕೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಶುಭಾಶಯ ಗಳ ಮಹಾಪೂರವೇ ಹರಿದು ಬಂದಿತು. ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್‌ಡೇಗೆ ಶುಭ
ಕೋರಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
