ಝಾಗ್ರೆಬ್ ಓಪನ್ ಕುಸ್ತಿ ಚಾಂಪಿಯನ್ಶಿಪ್: ಕಂಚು ಗೆದ್ದ ಆಶು
Team Udayavani, Feb 5, 2023, 11:30 PM IST
ಝಾಗ್ರೆಬ್: ಝಾಗ್ರೆಬ್ ಓಪನ್ ರ್ಯಾಂಕಿಂಗ್ ಸೀರಿಸ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಆಶು ಕಂಚಿನ ಪದಕ ಜಯಿಸಿದ್ದಾರೆ. 67 ಕೆಜಿ ವಿಭಾಗದ ಗ್ರೀಕೊ ರೋಮನ್ ಸ್ಪರ್ಧೆಯಲ್ಲಿ ಅವರು ಲಿಥುವೇನಿಯಾದ ಅಡೋಮಸ್ ಗ್ರಿಗಲಿಯುನಾಸ್ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರು.
23 ವರ್ಷದ, ಏಷ್ಯನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಆಶು ಅವರಿಂದ ಭಾರತಕ್ಕೆ ಎರಡನೇ ಕಂಚಿನ ಪದಕ ಒಲಿಯಿತು. ಇದಕ್ಕೂ ಮುನ್ನ ಪುರುಷರ ಅಂಡರ್-23 ವಿಭಾಗದಲ್ಲಿ ಫ್ರೀಸ್ಟೈಲ್ ರೆಸ್ಲರ್ ಅಮಾನ್ ಸೆಹ್ರಾವತ್ ಕೂಡ ಕಂಚಿನ ಪದಕ ಜಯಿಸಿದ್ದರು (57 ಕೆಜಿ ವಿಭಾಗ).
ಅರ್ಹತಾ ಸುತ್ತಿನಲ್ಲಿ ಆಶು ಇರಾನ್ನ ರೆಝಾ ಮೆಹದಿ ಅಬ್ಟಾಸಿ ವಿರುದ್ಧ 9-0 ಅಂತರದಿಂದ ಸೋಲನುಭವಿಸಿದ್ದರು. ಆದರೆ ರೆಪಿಶಾಜ್ ಸುತ್ತಿನಲ್ಲಿ ತಿರುಗಿ ಬಿದ್ದು ಹಂಗೇರಿಯ ಆ್ಯಡಂ ಫೋಯಿಲೆಕ್ ಅವರನ್ನು 8-0, ನಾರ್ವೆಯ ಹಾವರ್ಡ್ ಜಾರ್ಜೆನ್ಸೆನ್ ಅವರನ್ನು 9-0 ಅಂತರದಿಂದ ಮಣಿಸಿ ಕಂಚಿನ ಸುತ್ತಿನ ಪದಕ ಸುತ್ತನ್ನು ಪ್ರವೇಶಿಸಿದರು.
ಮತ್ತೋರ್ವ ಗ್ರೀಕೊ ರೋಮನ್ ರೆಸ್ಲರ್ ಸಾಗರ್ (63 ಕೆಜಿ) ರೆಪಿಶಾಜ್ ಸುತ್ತಿನಲ್ಲಿ ಆಸ್ಟ್ರಿಯಾದ ಸ್ಪರ್ಧಿಗೆ ಸೋತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ