ಶನಿವಾರ ನಮ್ಮದು: ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್
Team Udayavani, May 20, 2022, 11:12 PM IST
ಮುಂಬಯಿ: ತಂಡ ಸರಿಯಾದ ಹೊತ್ತಿನಲ್ಲಿ ಗೆಲುವಿನ ಲಯಕ್ಕೆ ಮರಳಿದ್ದು, ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸುವ ವಿಶ್ವಾಸ ಇದೆ, ಶನಿವಾರ ನಮ್ಮದು ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
“ಶನಿವಾರದ ಪಂದ್ಯದಲ್ಲಿ ನಮ್ಮ ತಂಡ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ತಂಡದ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಕಳೆದೆರಡೂ ಪಂದ್ಯಗಳನ್ನು ಜಯಿಸಿದ್ದು, ಮೊದಲ ಸಲ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ್ದೇವೆ. ಮುಂಬೈ ವಿರುದ್ಧ ಗೆಲುವಲ್ಲದೇ ಬೇರೆ ಯೋಜನೆಯೇ ಇಲ್ಲ…’ ಎಂಬುದಾಗಿ ಆಸೀಸ್ ತಂಡದ ಮಾಜಿ ನಾಯಕ ಪಾಂಟಿಂಗ್ ಹೇಳಿದರು.
“ನಮ್ಮ ಪಾಲಿಗೆ ಇದು ಸಾಕಷ್ಟು ಏರಿಳಿತಗಳನ್ನು ಕಂಡ ಋತು. ಆದರೂ ನಾವು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಸರಿಯಾದ ಹೊತ್ತಿನಲ್ಲಿ ಮೇಲ್ಮುಖವಾಗಿ ಸಾಗುತ್ತಿದ್ದೇವೆ. ಟಾಪ್ ಆರ್ಡರ್ನಲ್ಲಿ ಡೇವಿ (ವಾರ್ನರ್) ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಕುಲದೀಪ್ ಬೌಲಿಂಗ್ ಬಗ್ಗೆ ಎರಡು ಮಾತಿಲ್ಲ. ಅಕ್ಷರ್ ಪಟೇಲ್ ರನ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಲಯ ಕಂಡುಕೊಂಡಿದ್ದಾರೆ. ಎಲ್ಲರನ್ನೂ ಮುಂದಿನ ಸವಾಲಿಗೆ ಅಣಿಯಾಗುವಂತೆ ಸಜ್ಜುಗೊಳಿಸಿದ್ದೇವೆ’ ಎಂಬುದು ಪಾಂಟಿಂಗ್ ಅವರ ವಿಶ್ವಾಸದ ಮಾತುಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ