ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಮುಂಬೈ ಗೆದ್ದರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಟಿಕೆಟ್‌ ಅವಕಾಶದ ನಿರೀಕ್ಷೆಯಲ್ಲಿ ಅರ್ಜುನ್‌ ತೆಂಡುಲ್ಕರ್‌

Team Udayavani, May 21, 2022, 7:00 AM IST

ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಮುಂಬಯಿ: ಪ್ಲೇ ಆಫ್ ಪ್ರವೇಶಿಸಲಿರುವ 4ನೇ ತಂಡ ಯಾವುದು? ಡೆಲ್ಲಿಯೋ, ಆರ್‌ಸಿಬಿಯೋ? ಕ್ರಿಕೆಟ್‌ ಅಭಿ ಮಾನಿಗಳ ಈ ಕೌತುಕಕ್ಕೆ ಶನಿವಾರ ರಾತ್ರಿ ತೆರೆ ಬೀಳಲಿದೆ. ಇದಕ್ಕೆ ಸಾಕ್ಷಿಯಾಗಲಿರುವುದು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ನಿರ್ಣಾಯಕ ಮುಖಾಮುಖಿ.

ಗುಜರಾತ್‌ ಟೈಟಾನ್ಸ್‌ಗೆ ಸೋಲುಣಿಸುವ ಮೂಲಕ ಆರ್‌ಸಿಬಿ 4ನೇ ಸ್ಥಾನಕ್ಕೆ ನೆಗೆದಿದ್ದು, 16 ಅಂಕಗಳೊಂದಿಗೆ ಪ್ಲೇ ಆಫ್ನತ್ತ ಮುಖ ಮಾಡಿದೆ. ಡೆಲ್ಲಿ 14 ಅಂಕ ಹೊಂದಿದ್ದು, ಮುಂಬೈಯನ್ನು ಸಣ್ಣ ಅಂತರದಿಂದ ಮಣಿಸಿದರೂ ಮುಂದಿನ ಸುತ್ತು ಪ್ರವೇಶಿಸಲಿದೆ.

ಕಾರಣ, ಡೆಲ್ಲಿಯ ರನ್‌ರೇಟ್‌. ಅದು ಆರ್‌ಸಿಬಿಗಿಂತ ಬಹಳ ಮೇಲಿದೆ. ಮುಂಬೈ ಗೆದ್ದರಷ್ಟೇ ಬೆಂಗ ಳೂರು ಫ್ರಾಂಚೈಸಿಗೆ ಪ್ಲೇ ಆಫ್ ಟಿಕೆಟ್‌ ಸಿಗಲಿದೆ ಎಂಬುದು ಅಂತಿಮ ಲೆಕ್ಕಾಚಾರ. ಆರ್‌ಸಿಬಿ ಅಭಿಮಾನಿಗಳೆಲ್ಲ ಈಗ ಮುಂಬೈ ಗೆಲುವನ್ನು, ಡೆಲ್ಲಿ ಸೋಲನ್ನು ಹಾರೈಸಿ ಕುಳಿತಿದ್ದಾರೆ!

ಇದರ ಬಳಿಕ ರವಿವಾರ ಹೈದರಾ ಬಾದ್‌-ಪಂಜಾಬ್‌ ನಡುವೆ ಅಂತಿಮ ಲೀಗ್‌ ಹಣಾಹಣಿ ನಡೆಯಲಿದೆ. ಇದೊಂದು ಲೆಕ್ಕದ ಭರ್ತಿಯ ಪಂದ್ಯ. ಗುಜರಾತ್‌ ವಿರುದ್ಧ ಆರ್‌ಸಿಬಿ ಸಾಧಿಸಿದ ಗೆಲುವಿನ ಬಳಿಕ ಈ ತಂಡಗಳೆರಡೂ ಕೂಟ ದಿಂದ ಹೊರಬಿದ್ದಿವೆ. ಹೀಗಾಗಿ ಮುಂಬೈ-ಡೆಲ್ಲಿ ಪಂದ್ಯಕ್ಕೆ “ವರ್ಚುವಲ್‌ ಕ್ವಾರ್ಟರ್‌ ಫೈನಲ್‌’ ಮಹತ್ವ ಲಭಿಸಿದೆ.

ಮುಂಬೈ-ಡೆಲ್ಲಿ ಪ್ರಸಕ್ತ ಋತುವಿನಲ್ಲಿ ಮುಖಾಮುಖಿ ಆಗುತ್ತಿರುವುದು ಇದೇ ಮೊದಲು. ಈ ಕಾರಣಕ್ಕಾಗಿಯೂ ಪಂದ್ಯದ ಕುತೂ ಹಲ ಹೆಚ್ಚಿದೆ. ಇನ್ನೊಂದು ಸಂಗತಿ ಯೆಂದರೆ, ಈ ಪಂದ್ಯದ ಮೂಲಕ ವಾದರೂ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಪದಾರ್ಪಣೆ ಮಾಡಿ ಯಾರೇ ಎಂಬುದು. ಎರಡು ಋತುಗಳ 27 ಪಂದ್ಯಗಳಲ್ಲಿ ಜೂನಿಯರ್‌ ತೆಂಡುಲ್ಕರ್‌ಗೆ ಆಡುವ ಅವಕಾಶ ಲಭಿಸಿಲ್ಲ. ಹಾಗೆಯೇ ಕೆಲವು ಹೊಸ ಮುಖಗಳನ್ನು ಆಡಿಸುವ ಸಾಧ್ಯತೆಯೂ ಇಲ್ಲದಿಲ್ಲ. ಈವರೆಗಿನ 13 ಲೀಗ್‌ ಪಂದ್ಯಗಳಲ್ಲಿ ಮುಂಬೈ 22 ಆಟಗಾರರನ್ನು ಆಡಿಸಿದ್ದು, ಬಹಳಷ್ಟು ಮಂದಿ ಕಾಯುತ್ತಿದ್ದಾರೆ.

ಡೆಲ್ಲಿಗೆ ಗೆಲುವು ಅನಿವಾರ್ಯ
ಸದ್ಯ 5ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾಗಿದೆ. 13 ಪಂದ್ಯಗಳಲ್ಲಿ ಏಳನ್ನಷ್ಟೇ ಜಯಿಸಿದೆ. ಇನ್ನೇನು ಹೊರ ಬೀಳಲಿದೆ ಎಂಬ ಹಂತದಲ್ಲಿ ಮೊದಲ ಸಲ ಸತತ 2 ಪಂದ್ಯಗಳನ್ನು ಗೆದ್ದಿದೆ. ಹಿಂದಿನೆರಡು ಪಂದ್ಯಗಳಲ್ಲಿ ರಾಜಸ್ಥಾನ್‌ ಮತ್ತು ಪಂಜಾಬ್‌ ವಿರುದ್ಧ 8 ವಿಕೆಟ್‌ ಹಾಗೂ 17 ರನ್ನುಗಳಿಂದ ಗೆದ್ದು ಪ್ಲೇ ಆಫ್ಗೆ ಹತ್ತಿರವಾಗಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸಬೇಕಾದರೆ ಅದು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾಗುತ್ತದೆ.

ಡೆಲ್ಲಿ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ ಪ್ರಮುಖನೆಂದರೆ ಆರಂಭ ಕಾರ ಡೇವಿಡ್‌ ವಾರ್ನರ್‌. ಅವರು 427 ರನ್‌ ಹೊಡೆದಿದ್ದಾರೆ. ಆದರೆ ಹಿಂದಿನ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದಾರೆ. ಇವರ ಜತೆಗಾರ ಯಾರು ಎಂಬ ಪ್ರಶ್ನೆ ಇದೆ. ಪೃಥ್ವಿ ಶಾ ಅನಾರೋಗ್ಯದಿಂದ ಚೇತರಿಸಿಕೊಂಡರೂ ಇನ್ನೂ ಆಡ ಲಿಳಿದಿಲ್ಲ. ಈ ನಡುವೆ ಇನ್ನಿಂಗ್ಸ್‌ ಆರಂಭಿಸಿದ ಶ್ರೀಕರ್‌ ಭರತ್‌, ಮನ್‌ದೀಪ್‌ ಸಿಂಗ್‌ ವಿಫ‌ಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಸಫ‌ìರಾಜ್‌ ಖಾನ್‌ 32 ರನ್‌ ಮಾಡಿದರೂ ವಾರ್ನರ್‌ ಸೊನ್ನೆ ಸುತ್ತಿದರು.

ಆಸ್ಟ್ರೇಲಿಯದ ಮತ್ತೋರ್ವ ಆಟಗಾರ ಮಿಚೆಲ್‌ ಮಾರ್ಷ್‌ ಕೂಡ ಉತ್ತಮ ಲಯದಲ್ಲಿದ್ದಾರೆ (257 ರನ್‌). ವಿಕೆಟ್‌ ಕೂಡ ಕೀಳಬಲ್ಲರು. ನಾಯಕ ರಿಷಭ್‌ ಪಂತ್‌ (301 ರನ್‌), ರೋವ¾ನ್‌ ಪೊವೆಲ್‌ (207 ರನ್‌) ನಿರ್ಣಾಯಕ ಪಂದ್ಯದಲ್ಲಿ ಸಿಡಿದು ನಿಲ್ಲಬೇಕಿದೆ.

ಬೌಲಿಂಗ್‌ ಹೀರೋಗಳೆಂದರೆ ಕುಲದೀಪ್‌ ಯಾದವ್‌ (20 ವಿಕೆಟ್‌), ಖಲೀಲ್‌ ಅಹ್ಮದ್‌ (16 ವಿಕೆಟ್‌) ಮತ್ತು ಶಾರ್ದೂಲ್ ಠಾಕೂರ್ (13 ವಿಕೆಟ್‌). ಮುಸ್ತಫಿಜುರ್‌, ಅಕ್ಷರ್‌ ಪಟೇಲ್‌, ಲಲಿತ್‌ ಯಾದವ್‌ ವಿಕೆಟ್‌ ಬೇಟೆಯಲ್ಲಿ ಅಷ್ಟೇನೂ ಕ್ಲಿಕ್‌ ಆಗಿಲ್ಲ. ಆದರೆ ಎದು ರಾಳಿ  ಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮುಂಬೈಗೆ ಒತ್ತಡವೇನಿಲ್ಲ…
5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಬಾರಿ ಗೆಲುವಿನ ಖಾತೆ ತೆರೆದದ್ದೇ 9ನೇ ಪಂದ್ಯದಲ್ಲಿ. ಹರಾಜು ವೇಳೆ ಮಾಡಿಕೊಂಡ ಕೆಲವು ಎಡವಟ್ಟಿನಿಂದಾಗಿ ರೋಹಿತ್‌ ಪಡೆಗೆ ಈ ಸ್ಥಿತಿ ಎದುರಾಗಿದೆ ಎಂಬುದು ರಹಸ್ಯವೇನಲ್ಲ. ಅದೇನೇ ಇದ್ದರೂ ಮುಂಬೈ ಯಾವುದೇ ಒತ್ತಡವಿಲ್ಲದೆ ಡೆಲ್ಲಿಯನ್ನು ಎದುರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಡೆಲ್ಲಿಗೆ ಇಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಹೀಗಾಗಿ ಪಂತ್‌ ಪಡೆ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.

ಟಾಪ್ ನ್ಯೂಸ್

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ 

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ 

1-sad

ಧಾರಾಕಾರ ಮಳೆ: ಭಾರೀ ನೆರೆಗೆ ನಲುಗಿದ ನಾವುಂದ; ನೂರಾರು ಮನೆಗಳು ಜಲಾವೃತ

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

shashi-taroor

ನಾನು ಟ್ವೀಟ್ ಮಾಡುವುದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ : ಶಶಿ ತರೂರ್

17ashok

ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ, ಹಾನಿಗೆ 50 ಸಾವಿರ ಪರಿಹಾರ; ಆರ್‌ ಅಶೊಕ್‌

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ಸಂತೆ ಮೈದಾನ ಕಬಳಿಸುವ ಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ

ಸಂತೆ ಮೈದಾನ ಕಬಳಿಸುವ ಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ

money 1

ವಿದ್ಯುತ್‌ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ

ದೇಶದ ಪ್ರಬುದ್ಧ ರಾಜಕಾರಣಿಯಾಗಿದ್ದ ಬಾಬೂಜಿ; ಜಿಲ್ಲಾಧಿಕಾರಿ

ದೇಶದ ಪ್ರಬುದ್ಧ ರಾಜಕಾರಣಿಯಾಗಿದ್ದ ಬಾಬೂಜಿ; ಜಿಲ್ಲಾಧಿಕಾರಿ

ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಬಂಧನ

ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.