ಗುಜರಾತ್‌ ಟೈಟಾನ್ಸ್‌- ಲಕ್ನೋ ಸೂಪರ್‌ ಜೈಂಟ್ಸ್‌: ನೂತನ ತಂಡಗಳ ರಂಗಪ್ರವೇಶ


Team Udayavani, Mar 28, 2022, 8:10 AM IST

ಗುಜರಾತ್‌ ಟೈಟಾನ್ಸ್‌- ಲಕ್ನೋ ಸೂಪರ್‌ ಜೈಂಟ್ಸ್‌: ನೂತನ ತಂಡಗಳ ರಂಗಪ್ರವೇಶ

ಮುಂಬಯಿ: ಸೋಮವಾರದ ಐಪಿಎಲ್‌ ಪಂದ್ಯ ವಿಶೇಷ ಕಾರಣದಿಂದ ಸುದ್ದಿಯಲ್ಲಿದೆ. ಇಲ್ಲಿ ಐಪಿಎಲ್‌ನ ನೂತನ ತಂಡಗಳಾದ ಗುಜರಾತ್‌ ಟೈಟಾನ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ಮುಖಾಮುಖಿ ಆಗಲಿವೆ. ಹೊಸ ತಂಡಗಳೆರಡೂ ಮೊದಲ ಪಂದ್ಯದಲ್ಲೇ ಎದುರಾಗುತ್ತಿರುವುದು ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಗುಜರಾತ್‌ ತಂಡವನ್ನು ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ. ಅವರಿಗೆ ಇದು ಐಪಿಎಲ್‌ ಕ್ಯಾಪ್ಟನ್ಸಿಯ ಮೊದಲ ಅನುಭವ. ಲಕ್ನೋಗೆ ಸಾರಥಿಯಾಗಿರುವವರು ಕನ್ನಡಿಗ ಕೆ.ಎಲ್‌. ರಾಹುಲ್‌. ಈಗಾಗಲೇ ಪಂಜಾಬ್‌ ಕಿಂಗ್ಸ್‌ ನಾಯಕತ್ವದ ಅನುಭವ ಹೊಂದಿರುವ ಅವರಿಗೆ ಅಲ್ಲಿ ಅದೃಷ್ಟ ಕೈಹಿಡಿದಿರಲಿಲ್ಲ. ಹೊಸ ತಂಡ ಲಕ್‌ ತಂದೀತೇ ಎಂಬುದೊಂದು ನಿರೀಕ್ಷೆ.

ಪಾಂಡ್ಯ ಅದೃಷ್ಟ ಪರೀಕ್ಷೆ
ಹಾರ್ಡ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಎನಿಸಿದರೂ ಬದ್ಧತೆಯ ಕೊರತೆ ಹಾಗೂ ತುಸು ನಿರ್ಲಕ್ಷ್ಯದಿಂದಾಗಿ ಟೀಮ್‌ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಹೆಚ್ಚು ಜವಾಬ್ದಾರಿ ಯುತವಾಗಿ ವರ್ತಿಸುವುದು ಅನಿವಾರ್ಯ. ಇಲ್ಲಿ ಯಶಸ್ಸು ಕಂಡರಷ್ಟೇ ಅವರಿಗೆ ಭಾರತ ತಂಡದಲ್ಲಿ ಮರಳಿ ಸ್ಥಾನ ಎಂಬುದು ಸದ್ಯದ ಸ್ಥಿತಿ.

ಕೆಕೆಆರ್‌ ತಂಡದಿಂದ ಬಂದ ಶುಭಮನ್‌ ಗಿಲ್‌ ಮತ್ತು ಅಫ್ಘಾನಿಸ್ಥಾನದ ರಹಮಾನುಲ್ಲ ಗುರ್ಬಜ್‌ ಗುಜರಾತ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌, ಸಾಹಾ, ರಾಹುಲ್‌ ತೇವಟಿಯಾ, ವಿಜಯ್‌ ಶಂಕರ್‌, ಅಭಿನವ್‌ ಮನೋಹರ್‌, ಲಾಕಿ ಫ‌ರ್ಗ್ಯುಸನ್‌ ಅವರನ್ನು ತಂಡ ನೆಚ್ಚಿಕೊಂಡಿದೆ.

ಲಕ್ನೋ ಹೆಚ್ಚು ಬಲಿಷ್ಠ
ಗುಜರಾತ್‌ಗೆ ಹೋಲಿಸಿದರೆ ಲಕ್ನೋ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ರಾಹುಲ್‌, ಕ್ವಿಂಟನ್‌ ಡಿ ಕಾಕ್‌, ಎವಿನ್‌ ಲೆವಿಸ್‌, ಮನೀಷ್‌ ಪಾಂಡೆ, ಕೈಲ್‌ ಮೇಯರ್, ಆ್ಯಂಡ್ರೂé ಟೈ, ಮಾರ್ಕಸ್‌ ಸ್ಟೋಯಿನಿಸ್‌, ಆಲ್‌ರೌಂಡರ್‌ಗಳಾದ ದೀಪಕ್‌ ಹೂಡಾ, ಕೃಣಾಲ್‌ ಪಾಂಡ್ಯ, ಜೇಸನ್‌ ಹೋಲ್ಡರ್‌, ಕೆ. ಗೌತಮ್‌ ಅವರೆಲ್ಲ ತಂಡದ ಪ್ರಮುಖ ಆಟಗಾರರು.

ಲಕ್ನೋ ಬೌಲಿಂಗ್‌ ವಿಭಾಗ ಘಾತಕವಾಗೇನೂ ಗೋಚರಿಸದಿದ್ದರೂ ವೈವಿಧ್ಯಮಯವಾಗಿದೆ. ಆವೇಶ್‌ ಖಾನ್‌, ರವಿ ಬಿಷ್ಣೋಯಿ, ದುಷ್ಮಂತ ಚಮೀರ, ಶಬಾಜ್‌ ನದೀಂ, ಅಂಕಿತ್‌ ರಜಪೂತ್‌ ಬೌಲಿಂಗ್‌ ಭಾರವನ್ನು ಹೊರಬೇಕಿದೆ.

ತಂಡಗಳು
ಗುಜರಾತ್‌: ಹಾರ್ದಿಕ್‌ ಪಾಂಡ್ಯ (ನಾಯಕ), ಶುಭಮನ್‌ ಗಿಲ್‌, ಅಭಿನವ್‌ ಮನೋಹರ್‌ , ರಹಮಾನುಲ್ಲ ಗುರ್ಬಜ್‌, ಡೊಮಿನಿಕ್‌ ಡ್ರಾಕ್ಸ್‌, ವಿಜಯ್‌ ಶಂಕರ್‌, ಜಯಂತ್‌ ಯಾದವ್‌, ರಾಹುಲ್‌ ತೇವಟಿಯಾ, ರಶೀದ್‌ ಖಾನ್‌, ಆರ್‌. ಸಾಯಿ ಕಿಶೋರ್‌, ನೂರ್‌ ಅಹ್ಮದ್‌, ಕಾಲಂ ಫ‌ರ್ಗ್ಯುಸನ್‌, ಮೊಹಮ್ಮದ್‌ ಶಮಿ, ದರ್ಶನ್‌ ನಲ್ಕಂಡೆ, ಯಶ್‌ ದಯಾಳ್‌, ಪ್ರದೀಪ್‌ ಸಂಗ್ವಾನ್‌, ಮ್ಯಾಥ್ಯೂ ವೇಡ್‌, ವೃದ್ಧಿಮಾನ್‌ ಸಾಹಾ, ಡೇವಿಡ್‌ ಮಿಲ್ಲರ್‌, ಗುರುಕೀರತ್‌ ಸಿಂಗ್‌, ವರುಣ್‌ ಆರೋನ್‌, ಬಿ. ಸಾಯಿ ಸುದರ್ಶನ್‌, ಅಲ್ಜಾರಿ ಜೋಸೆಫ್.

ಲಕ್ನೋ: ಕೆ.ಎಲ್‌. ರಾಹುಲ್‌ (ನಾಯಕ), ಮನನ್‌ ವೋಹ್ರ, ಮನೀಷ್‌ ಪಾಂಡೆ, ಕ್ವಿಂಟನ್‌ ಡಿ ಕಾಕ್‌, ಮಾರ್ಕಸ್‌ ಸ್ಟೋಯಿನಿಸ್‌, ಕೆ. ಗೌತಮ್‌, ದೀಪಕ್‌ ಹೂಡಾ, ಕೃಣಾಲ್‌ ಪಾಂಡ್ಯ, ಜೇಸನ್‌ ಹೋಲ್ಡರ್‌, ಆ್ಯಂಡ್ರೂé ಟೈ, ರವಿ ಬಿಷ್ಣೋಯಿ, ದುಷ್ಮಂತ ಚಮೀರ, ಶಾಬಾಜ್‌ ನದೀಮ್‌, ಅಂಕಿತ್‌ ರಜಪೂತ್‌, ಆವೇಶ್‌ ಖಾನ್‌, ಮೊಹ್ಸಿನ್‌ ಖಾನ್‌, ಆಯುಷ್‌ ಬದಾನಿ, ಕೈಲ್‌ ಮೇಯರ್, ಕರಣ್‌ ಶರ್ಮ, ಎವಿನ್‌ ಲೆವಿಸ್‌, ಮಾಯಾಂಕ್‌ ಯಾದವ್‌.

ಇಂದಿನ ಪಂದ್ಯ
ಗುಜರಾತ್‌-ಲಕ್ನೋ
ಸ್ಥಳ: ಮುಂಬಯಿ ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.