ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್‌ ರಾಯಲ್ಸ್‌

ಕ್ವಾಲಿಫೈಯರ್‌ನಲ್ಲಿ ಸೋತರೂ ಫೈನಲ್‌ಗೇರಲು ಸಂಜು ಸ್ಯಾಮ್ಸನ್‌ ಪಡೆಗೆ ಇನ್ನೊಂದು ಅವಕಾಶ

Team Udayavani, May 20, 2022, 11:28 PM IST

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್‌ ರಾಯಲ್ಸ್‌

ಮುಂಬೈ: ಅಗ್ರಸ್ಥಾನಿಯಾಗಿ ಐಪಿಎಲ್‌ ಪ್ಲೇಗೇರಲು ಶುಕ್ರವಾರದ ಪಂದ್ಯ ರಾಜಸ್ಥಾನ್‌ ರಾಯಲ್ಸ್‌ಗೆ ಮಹತ್ವದ್ದಾಗಿತ್ತು. ಇದರಲ್ಲಿ ರಾಜಸ್ಥಾನ್‌ ಯಶಸ್ಸು ಪಡೆದು 2ನೇ ಸ್ಥಾನಕ್ಕೇರಿದೆ. ಇದರಿಂದ ರಾಜಸ್ಥಾನ್‌ ಒಂದು ವೇಳೆ ಕ್ವಾಲಿಫೈಯರ್‌ನಲ್ಲಿ ಸೋತರೂ, ಫೈನಲ್‌ಗೇರಲು ಇನ್ನೊಂದು ಅವಕಾಶ ಪಡೆಯಲಿದೆ. ಲಕ್ನೋ 3ನೇ ಸ್ಥಾನಕ್ಕೆ ಕುಸಿದು ಈ ಅವಕಾಶ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಸೋತ ಚೆನ್ನೈ ಕಿಂಗ್ಸ್‌ಗೆ ಯಾವುದೇ ನಷ್ಟವಾಗಿಲ್ಲ.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್‌ ಗಳಿಸಿತು. ರಾಜಸ್ಥಾನ್‌ ಪರ ಯಶಸ್ವಿ ಜೈಸ್ವಾಲ್‌ (59), ಆರ್‌.ಅಶ್ವಿ‌ನ್‌ (40) ಅತ್ಯುತ್ತಮ ಬ್ಯಾಟಿಂಗ್‌ ಮಾಡಿದರು. ಚೆನ್ನೈ ಪರ ಪ್ರಶಾಂತ್‌ ಸೋಲಂಕಿ 20 ರನ್‌ ನೀಡಿ 2 ವಿಕೆಟ್‌ ಪಡೆದರು.

ಮಿಂಚಿದ ಮೊಯಿನ್‌ ಅಲಿ: ಮೊದಲು ಬ್ಯಾಟಿಂಗ್‌ ಚೆನ್ನೈ ಪರ ಮೊಯಿನ್‌ ಅಲಿ ಮಿಂಚಿದರು. ಅವರು 93 ರನ್‌ ಚಚ್ಚಿದರು. ಮೊದಲ 6 ಓವರ್‌ಗಳಲ್ಲಿ 75 ರನ್‌ ಸಿಡಿಸಿದ ಧೋನಿ ಪಡೆಗೆ, ಅನಂತರದ 75 ರನ್‌ ಗಳಿಸಲು 14 ಓವರ್‌ ಬೇಕಾಯಿತೆಂಬುದೊಂದು ವಿಪರ್ಯಾಸ. ರಾಜಸ್ಥಾನ್‌ ಬೌಲರ್ ಅಷ್ಟರ ಮಟ್ಟಿಗೆ ಬಿಗಿ ದಾಳಿ ಸಂಘಟಿಸಿ ಚೆನ್ನೈಗೆ ಕಡಿವಾಣ ಹಾಕಿ ಪಂದ್ಯಕ್ಕೆ ಮರಳಿದರು. ಸ್ಫೋಟಕ ಆರಂಭ ಒದಗಿಸಿದ ಮೊಯಿನ್‌ ಅಲಿಗೆ ಶತಕ ಒಲಿಯದೇ ಹೋಯಿತು. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಇವರ ವಿಕೆಟ್‌ ಉರುಳಿತು. 57 ಎಸೆತ ಎದುರಿಸಿದ ಅಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.

ಚೆನ್ನೈ ಸ್ಫೋಟಕ ಆರಂಭ: ಟಾಸ್‌ ಗೆದ್ದ ಚೆನ್ನೈ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಮೊದಲ ಓವರ್‌ನಲ್ಲೇ ಋತುರಾಜ್‌ ಗಾಯಕ್ವಾಡ್‌ (2) ಅವರನ್ನು ಕಳೆದುಕೊಂಡಿತು. ಟ್ರೆಂಟ್‌ ಬೌಲ್ಟ್ ವಿಕೆಟ್‌ ಟೇಕರ್‌. ಪ್ರಸಿದ್ಧ್ ಕೃಷ್ಣ ಅವರ ಮೊದಲ ಓವರ್‌ ಕೂಡ ಬಿಗಿಯಾಗಿತ್ತು. 2 ಓವರ್‌ಗಳಲ್ಲಿ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು ಮೂರೇ ರನ್‌.

ಮುಂದಿನದ್ದೆಲ್ಲ ಮೊಯಿನ್‌ ಅಲಿ ಆರ್ಭಟ. ಇವರಿಗೆ ಡೆವೋನ್‌ ಕಾನ್ವೆ ಉತ್ತಮ ಬೆಂಬಲವಿತ್ತರು. ರನ್‌ ಪ್ರವಾಹದ ರೀತಿಯಲ್ಲಿ ಹರಿದು ಬರತೊಡಗಿತು. ಬೌಲ್ಟ್ ಅವರ ದ್ವಿತೀಯ ಓವರ್‌ನಲ್ಲಿ ಕಾನ್ವೆ 12 ರನ್‌ ಬಾರಿಸಿದರು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ 18 ರನ್‌ ಸೋರಿಹೋಯಿತು. ಮೊಯಿನ್‌ ಅಲಿ 3 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದರು. ಆರ್‌. ಅಶ್ವಿ‌ನ್‌ ಅವರ ಸ್ಪಿನ್‌ ಕೂಡ ನಡೆಯಲಿಲ್ಲ. ಅವರ ಮೊದಲ ಓವರ್‌ನಲ್ಲಿ ಬರೋಬ್ಬರಿ 16 ರನ್‌ ಬಂತು.

ಬೌಲ್ಟ್ ಅವರ 3ನೇ ಓವರ್‌ನಲ್ಲಂತೂ 26 ರನ್‌ ಸಿಡಿಯಲ್ಪಟ್ಟಿತು. ಎಲ್ಲವೂ ಅಲಿ ಬ್ಯಾಟ್‌ನಿಂದಲೇ ಬಂತು. ಮೊದಲ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದ ಅಲಿ, ಬಳಿಕ ಸತತ 5 ಬೌಂಡರಿ ಬಾರಿಸಿ ಮೆರೆದರು. 19 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ತಿಗೊಂಡಿತು. ಪವರ್‌ ಪ್ಲೇಯಲ್ಲಿ ಚೆನ್ನೈ ಒಂದಕ್ಕೆ 75 ರನ್‌ ಗಳಿಸಿ ಬೃಹತ್‌ ಮೊತ್ತದ ಸೂಚನೆ ನೀಡಿತು. ಕಾನ್ವೆ-ಅಲಿ ದ್ವಿತೀಯ ವಿಕೆಟಿಗೆ 6.3 ಓವರ್‌ಗಳಿಂದ 83 ರನ್‌ ಪೇರಿಸಿ ರಾಜಸ್ಥಾನವನ್ನು ನಡುಗಿಸಿದರು. ಆದರೆ ಇಲ್ಲಿಂದ ಮುಂದೆ ರಾಜಸ್ಥಾನ್‌ ಬೌಲರ್‌ಗಳ ಹಿಡಿತ ಬಿಗಿಗೊಂಡಿತು.

ಕಾನ್ವೆ ಬೆನ್ನಲ್ಲೇ ಜಗದೀಶನ್‌ (1), ಅಂಬಾಟಿ ರಾಯುಡು (3) ಪೆವಿಲಿಯನ್‌ ಸೇರಿಕೊಂಡರು. 10 ರನ್‌ ಅಂತರದಲ್ಲಿ 3 ವಿಕೆಟ್‌ ಬಿತ್ತು. 7ರಿಂದ 10ನೇ ಓವರ್‌ ಅವಧಿಯಲ್ಲಿ ಚೆನ್ನೈ ಗಳಿಸಿದ್ದು ಕೇವಲ 19 ರನ್‌. 15 ಓವರ್‌ ಮುಕ್ತಾಯಕ್ಕೆ 4ಕ್ಕೆ 117 ರನ್ನಷ್ಟೇ ಆಗಿತ್ತು. ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಅಲಿಗೆ ನಾಯಕ ಧೋನಿ ಜತೆಯಾದರು. ಆದರೆ ಆರಂಭದ ಅಬ್ಬರ ಕಂಡುಬರಲಿಲ್ಲ. ಅಲಿ ಹಾಗೂ ಚೆನ್ನೈಗೆ ಕಡಿವಾಣ ಹಾಕುವಲ್ಲಿ ರಾಜಸ್ಥಾನ್‌ ಬೌಲರ್ ಧಾರಾಳ ಯಶಸ್ಸು ಕಂಡಿದ್ದರು. 5ನೇ ವಿಕೆಟಿಗೆ 51 ರನ್‌ ಬಂತಾದರೂ ಇದಕ್ಕೆ 52 ಎಸೆತ ಬೇಕಾಯಿತು. ಅಲಿ ಹೊರತುಪಡಿಸಿದರೆ 26 ರನ್‌ ಮಾಡಿದ ಧೋನಿ ಅವರದೇ ಹೆಚ್ಚಿನ ಗಳಿಕೆ. ರಾಜಸ್ಥಾನ್‌ ಪರ ಮೆಕಾಯ್‌ ಮತ್ತು ಚಹಲ್‌ ಅಮೋಘ ದಾಳಿ ಸಂಘಟಿಸಿದರು.

ದುಬೆ ಬದಲು ರಾಯುಡು: ಎರಡೂ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಆಡಲಿಳಿದವು. ಚೆನ್ನೈ ಪರ ಅಂಬಾಟಿ ರಾಯುಡು ಅವಕಾಶ ಪಡೆದರು. ಶಿವಂ ದುಬೆ ಹೊರಗುಳಿದರು. ಕೆಕೆಆರ್‌ ಶಿಮ್ರಾನ್‌ ಹೆಟ್‌ಮೈರ್‌ ಅವರನ್ನು ಸೇರಿಸಿಕೊಂಡಿತು. ಇವರಿಗಾಗಿ ಜಾಗ ಬಿಟ್ಟವರು ಜಿಮ್ಮಿ ನೀಶಮ್‌.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಕಿಂಗ್ಸ್‌ 20 ಓವರ್‌, 150/6 (ಮೊಯಿನ್‌ ಅಲಿ 93, ಚಹಲ್‌ 26ಕ್ಕೆ 2, ಒಬೆದ್‌ ಮೆಕಾಯ್‌ 20ಕ್ಕೆ 2). ರಾಜಸ್ಥಾನ್‌ 20 ಓವರ್‌, 19.4 ಓವರ್‌, 151/5 (ಜೈಸ್ವಾಲ್‌ 59, ಆರ್‌.ಅಶ್ವಿ‌ನ್‌ 40, ಪ್ರಶಾಂತ್‌ ಸೋಲಂಕಿ 20ಕ್ಕೆ 2)

ಟಾಪ್ ನ್ಯೂಸ್

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.