ರಾಹುಲ್ Vs ಸ್ಮಿತ್:  ರಾಜಸ್ಥಾನಕ್ಕೆ ಬಟ್ಲರ್‌ ಬಲ; ಪಂಜಾಬ್‌ ನಿರಾಳ


Team Udayavani, Sep 27, 2020, 7:44 AM IST

ರಾಹುಲ್ Vs ಸ್ಮಿತ್:  ರಾಜಸ್ಥಾನಕ್ಕೆ ಬಟ್ಲರ್‌ ಬಲ; ಪಂಜಾಬ್‌ ನಿರಾಳ

ಶಾರ್ಜಾ: ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾದ ಕಿಂಗ್ಸ್‌ ಇಲೆವೆನ್‌ ತಂಡಗಳು ರವಿವಾರ ಶಾರ್ಜಾದಲ್ಲಿ ಸೆಣಸಾಟ ನಡೆಸಲಿವೆ. ಹಿಂದಿನ ಪಂದ್ಯಗಳಲ್ಲಿ ಎರಡೂ ತಂಡಗಳು ತೋರ್ಪಡಿಸಿದ ಸ್ಫೋಟಕ ಬ್ಯಾಟಿಂಗ್‌ ಪರಾಕ್ರಮದಿಂದ ಈ ಮುಖಾಮುಖೀ ತೀವ್ರ ಕುತೂಹಲ ಕೆರಳಿಸಿದೆ.

ಚೆನ್ನೈ ವಿರುದ್ಧ 216 ರನ್‌ ಪೇರಿಸಿ ಮೆರೆದಾಡಿದ್ದ ರಾಜಸ್ಥಾನ್‌ ಪಾಲಿಗೆ ರವಿವಾರ ಶುಭ ಸಮಾಚಾರವೊಂದು ಕಾದಿದೆ. ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಅವರ ಕ್ವಾರಂಟೈನ್‌ ಅವಧಿ ಮುಗಿದಿದ್ದು, ಪಂಜಾಬ್‌ ಎದುರಿನ ಪಂದ್ಯಕ್ಕೆ ಲಭ್ಯರಾಗುತ್ತಾರೆ. ಅವರು ಯಶಸ್ವಿ ಜೈಸ್ವಾಲ್‌ ಜತೆ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಆಗ, ಸ್ಟೀವನ್‌ ಸ್ಮಿತ್‌ ಮಧ್ಯಮ ಕ್ರಮಾಂಕಕ್ಕೆ ವಾಪಸಾಗಲಿದ್ದಾರೆ.

ಜಾಸ್‌ ಬಟ್ಲರ್‌ ಅವರಿಗಾಗಿ ಡೇವಿಡ್‌ ಮಿಲ್ಲರ್‌ ಜಾಗ ಖಾಲಿ ಮಾಡುವ ಸಾಧ್ಯತೆ ಇದೆ. ಕೀಪಿಂಗ್‌ ಜವಾಬ್ದಾರಿ ಬಟ್ಲರ್‌ ಹೆಗಲೇರಿದರೆ, ಸಂಜು ಸ್ಯಾಮ್ಸನ್‌ ಇನ್ನಷ್ಟು ಬಿಂದಾಸ್‌ ಆಗಿ ಬ್ಯಾಟ್‌ ಬೀಸಬಹುದು.

ಹರಿತಗೊಳ್ಳಬೇಕಿದೆ ರಾಜಸ್ಥಾನ್‌ ಬೌಲಿಂಗ್‌

ಚೆನ್ನೈ ವಿರುದ್ಧ ಸಿಡಿದು ನಿಂತ ಸಂಜು ಸ್ಯಾಮ್ಸನ್‌ ಕೇವಲ 32 ಎಸೆತಗಳಿಂದ 74 ರನ್‌ ಸಿಡಿಸಿ ಈಗಾಗಲೇ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಸ್ಪಿನ್‌ ಎಸೆತಗಳನ್ನು ಕಣ್ಣುಮುಚ್ಚಿ ಬಾರಿಸಿದ ಸ್ಯಾಮ್ಸನ್‌ ಬರೋಬ್ಬರಿ 9 ಸಿಕ್ಸರ್‌ ಸಿಡಿಸಿದ್ದರು. ಪಂಜಾಬ್‌ ವಿರುದ್ಧವೂ ಅವರು ಇದೇ ಆಟವನ್ನು ಪುನರಾವರ್ತಿಸಿದರೆ ರಾಜಸ್ಥಾನಕ್ಕೆ ಲಾಭ ಖಚಿತ. ಸ್ಮಿತ್‌ ಕೂಡ 69 ರನ್‌ ಬಾರಿಸಿ ಕಪ್ತಾನನ ಜವಾಬ್ದಾರಿಯನ್ನು ಚೊಕ್ಕವಾಗಿ ನಿಭಾಯಿಸಿದ್ದರು. ಕೊನೆಯಲ್ಲಿ ಜೋಫ್ರಾ ಆರ್ಚರ್‌ 8 ಎಸೆತಗಳಿಂದ 4 ಸಿಕ್ಸರ್‌ ಸಿಡಿಸಿದ್ದನ್ನು ಮರೆಯಲಾಗದು.

ಆದರೆ ರಾಜಸ್ಥಾನ್‌ ಬೌಲಿಂಗ್‌ ಇನ್ನಷ್ಟು ಹರಿತಗೊಳ್ಳಬೇಕಿದೆ. ಪಂಜಾಬ್‌ ಬ್ಯಾಟಿಂಗ್‌ ಸರದಿ ಚೆನ್ನೈಗಿಂತ ಬಲಿಷ್ಠವಾಗಿರುವುದೇ ಇದಕ್ಕೆ ಕಾರಣ.

ಚಳಿ ಹಿಡಿಸಿದ ರಾಹುಲ್‌

ಚಳಿ ಹಿಡಿಸಿದ ರಾಹುಲ್‌

ಆರ್‌ಸಿಬಿ ಎದುರಿನ ಮುಖಾಮುಖೀಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಕೆ.ಎಲ್‌.ರಾಹುಲ್‌ ಈಗ ಪಂಜಾಬ್‌ ತಂಡದ ದೈತ್ಯ ಶಕ್ತಿಯಾಗಿ ಬೆಳೆದಿದ್ದು, ಎದುರಾಳಿಗಳಿಗೆಲ್ಲ ಚಳಿ ಹಿಡಿಸಿದ್ದಾರೆ. ಜತೆಗೆ ಮತ್ತೋರ್ವ ಬಿಗ್‌ ಹಿಟ್ಟರ್‌ ಕ್ರಿಸ್‌ ಗೇಲ್‌ ಕೂಡ ರೇಸ್‌ನಲ್ಲಿದ್ದಾರೆ. ಮೂರನೇ ಪಂದ್ಯದಲ್ಲಾದರೂ “ಯುನಿವರ್ಸ್‌ ಬಾಸ್‌’ ಆಡಬಹುದೇ ಎಂಬ ನಿರೀಕ್ಷೆ ಎಲ್ಲರದು. ಅವರು ನಿಕೋಲಸ್‌ ಪೂರಣ್‌ ಜಾಗಕ್ಕೆ ಬರಬಹುದು. ಪೂರಣ್‌ ಕೂಡ ಈವರೆಗೆ ಪರಿಪೂರ್ಣ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದಾರೆ.

ಆಲ್‌ರೌಂಡರ್‌ ಜಿಮ್ಮಿ ನೀಶಮ್‌ ತಂಡದ ಮತ್ತೋರ್ವ ಅಪಾಯಕಾರಿ ಆಟಗಾರ. ಜತೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿದು ನಿಲ್ಲುವುದನ್ನೂ ತಂಡ ನಿರೀಕ್ಷಿಸುತ್ತಿದೆ.

ಆರ್‌ಸಿಬಿಯನ್ನು ದಿಕ್ಕಾಪಾಲು ಮಾಡಿದ ಶಮಿ, ಕಾಟ್ರೆಲ್‌, ಬಿಶ್ನೋಯ್‌, ಮುರುಗನ್‌ ಅಶ್ವಿ‌ನ್‌, ಟೆವಾಟಿಯಾ ಅವರನ್ನೊಳಗೊಂಡ ಬೌಲಿಂಗ್‌ ಪಡೆ ರಾಜಸ್ಥಾನ ವಿರುದ್ಧವೂ ಮೇಲುಗೈ ಸಾಧಿಸೀತೇ ಎಂಬುದು ಮತ್ತೂಂದು ಕೌತುಕ.

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌  ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಏರಿಕೆ

ಐಪಿಎಲ್‌ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಏರಿಕೆ

ರಾಹುಲ್‌-ಕುಂಬ್ಳೆ ಜೋಡಿ ಉಳಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ ಉತ್ಸುಕ

ರಾಹುಲ್‌-ಕುಂಬ್ಳೆ ಜೋಡಿ ಉಳಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ ಉತ್ಸುಕ

ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ

ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ

ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

ಕಿರಿಯ ನಾಯಕನ ದೊಡ್ಡ ಸಾಧನೆ

ಕಿರಿಯ ನಾಯಕನ ದೊಡ್ಡ ಸಾಧನೆ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ