ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ


Team Udayavani, Nov 12, 2020, 1:17 PM IST

ಐಪಿಎಲ್‌ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ

ಐಪಿಎಲ್‌ ಅಂದರೆ ಅದು ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಸಾಮರ್ಥ್ಯ ಪ್ರದರ್ಶನಕ್ಕೊಂದು ವೇದಿಕೆ. ಅನಾಮಧೇಯ ಕ್ರಿಕೆಟಿಗರೆಲ್ಲ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡುವುದು, ರಾಷ್ಟ್ರೀಯ ತಂಡವನ್ನು ಪ್ರವೇಶಿಸುವುದು, ಇಲ್ಲವೇ ದೇಶಿ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸುವುದೆಲ್ಲ ಐಪಿಎಲ್ ಆರಂಭದಿಂದಲೂ ಕಂಡುಬಂದಿದೆ.

ಅರಬ್‌ ನಾಡಿನಲ್ಲಿ ನಡೆದ 2020ರ ಐಪಿಎಲ್‌ ಪಂದ್ಯಾವಳಿ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗೆ ನೋಡಹೋದರೆ ಇಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯ ಯುವ ಪ್ರತಿಭೆಗಳು ಹೊರಹೊಮ್ಮಿದವೆಂದೇ ಹೇಳಬೇಕು. ಇವರಲ್ಲಿ ಐವರು ಇಲ್ಲಿದ್ದಾರೆ.

ಬ್ಯಾಟಿಂಗ್‌ ಪರಾಕ್ರಮಿ ಪಡಿಕ್ಕಲ್‌

ನೀಳಕಾಯದ ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್‌ ಈ ಬಾರಿ ಎಲ್ಲರನ್ನೂ ಮೋಡಿಗೈದ ಕ್ರಿಕೆಟಿಗ. ಕೇವಲ ಕೊಹ್ಲಿ, ಎಬಿಡಿ ಅವರನ್ನೇ ನಂಬಿ ಕುಳಿತ್ತಿದ್ದ ಆರ್‌ಸಿಬಿ ಬ್ಯಾಟಿಂಗ್‌ ಸರದಿಗೆ ಹೊಸ ಶಕ್ತಿ ತುಂಬಿದ ಆಟಗಾರ. ಸಾಧನೆಯಲ್ಲಿ ಇವರಿಬ್ಬರನ್ನೂ ಮೀರಿಸಿದ ಪಡಿಕ್ಕಲ್‌ 5 ಅರ್ಧ ಶತಕ, 473 ರನ್‌ ಬಾರಿಸಿ ಟೀಮ್‌ ಇಂಡಿಯಾದ ಭವಿಷ್ಯದ ಆರಂಭಕಾರನಾಗುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

ಕಿಶನ್‌; ಕೀಪರ್‌ ಕಂ ಸ್ಟ್ರೋಕ್‌ ಮೇಕರ್‌

ಮುಂಬೈಯ ಕೀಪರ್‌ ಹಾಗೂ ಎಡಗೈ ಆಟಗಾರನಾಗಿರುವ ಇಶಾನ್‌ ಕಿಶನ್‌ ಹಿಂದಿನ ಋತುಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದರು. ಆದರೆ ಈ ಬಾರಿ 483 ರನ್‌ ಪೇರಿಸಿ ಪ್ರಚಂಡ ಪ್ರದರ್ಶನ ನೀಡಿದ್ದಾರೆ. ಜತೆಗೆ “ಸಿಕ್ಸರ್‌ ಕಿಂಗ್‌’ ಕೂಡ ಎನಿಸಿದ್ದಾರೆ. ಧೋನಿ ನಿವೃತ್ತಿ, ಪಂತ್‌ ವೈಫ‌ಲ್ಯವನ್ನೆಲ್ಲ ಪರಿಗಣಿಸುವಾಗ ಇಶಾನ್‌ ಕಿಶನ್‌ ಭಾರತ ತಂಡವನ್ನು ಪ್ರವೇಶಿಸುವ ದಿನ ದೂರ ಇಲ್ಲ ಎಂದೇ ಹೇಳಬೇಕು

ಯಾರ್ಕರ್‌ ಮೆಶಿನ್‌ ನಟರಾಜನ್‌

ತಮಿಳುನಾಡಿನ ಟಿ. ನಟರಾಜನ್‌ ಈ ಐಪಿಎಲ್‌ ಕಂಡ ಅತ್ಯಂತ ಅಪಾಯಕಾರಿ ಬೌಲರ್‌. ಸೀಸನ್‌ನಲ್ಲಿ ಅತ್ಯಧಿಕ ಯಾರ್ಕರ್‌ ಎಸೆದ ದಾಖಲೆ ಇವರದು. ಎಡಗೈ ಬೌಲರ್‌ ಆದ ಕಾರಣ ಸ್ಕೋಪ್‌ ಜಾಸ್ತಿ. ಸನ್‌ರೈಸರ್ ತಂಡದ ಪ್ಲೇ ಆಫ್ ಪ್ರವೇಶದಲ್ಲಿ ನಟರಾಜನ್‌ ಪಾತ್ರ ಮಹತ್ವದ್ದು. ಈಗಾಗಲೇ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಆರಿಸಲಾದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮ್ಯಾಚ್‌ ವಿನ್ನರ್‌ ಋತುರಾಜ್‌

ಋತುರಾಜ್‌ ಗಾಯಕ್ವಾಡ್‌ ಸರಣಿ ಯನ್ನು ಸಕಾರಾತ್ಮಕವಾಗಿ ಆರಂಭಿಸದೇ ಇರ ಬಹುದು, ಆದರೆ ಕೋವಿಡ್ ಗೆದ್ದ ಈ ಬ್ಯಾಟ್ಸ್‌ಮನ್‌ ಬಳಿಕ ಪಂದ್ಯವನ್ನೂ ಗೆಲ್ಲಿಸಬಲ್ಲೆ ಎಂಬುದನ್ನು ನಿರೂಪಿಸಿದ್ದು ಮಾತ್ರ ಸುಳ್ಳಲ್ಲ. ಚೆನ್ನೈಬೇಗನೇ ರಿಟರ್ನ್ ಟಿಕೆಟ್‌ ಪಡೆದರೂ ಗಾಯಕ್ವಾಡ್‌ ಕೊನೆಯ 3 ಪಂದ್ಯಗಳನ್ನು ಗೆಲ್ಲಿಸಿ, ತಂಡದ ಕೊನೆಯ ಸ್ಥಾನದ ಅವಮಾನವನ್ನು ತಪ್ಪಿಸಿದ್ದನ್ನು ಮರೆಯುವಂತಿಲ್ಲ.

ಮೋಡಿಗೈದ ತೆವಾಟಿಯಾ

ಈ ಬಾರಿ ಎಲ್ಲ ಕ್ರಿಕೆಟ್‌ ಅಭಿಮಾನಿಗಳನ್ನೂ ಮೋಡಿಗೈದ ಒಂದು ಹೆಸರೆಂದರೆ ರಾಹುಲ್‌ ತೆವಾಟಿಯಾ. ರಾಜಸ್ಥಾನ್‌ನ ಈ ಲೆಗ್‌ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೆಳ ಕ್ರಮಾಂಕದಲ್ಲಿ ಬಂದು ಹೊಡಿಬಡಿ ಆಟದ ಮೂಲಕ ಎದುರಾಳಿಗಳನ್ನು ಬೆಚ್ಚಿಬೀಳಿಸಿದರು. ಪಂಜಾಬ್‌ ವಿರುದ್ಧ ಸಿಡಿದು ನಿಂತು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಬಳಿಕ ತೆವಾಟಿಯಾ ಹೆಸರು ಮನೆಮಾತಾಗಿದೆ.

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.