Udayavni Special

ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ


Team Udayavani, Aug 2, 2021, 6:00 AM IST

ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ

ನಮ್ಮಲ್ಲಿ ಬಹುತೇಕರು ದೇಹ ಅಂದರೆ ನೋವು ಅನ್ನುವ ನಿರ್ಧಾರಕ್ಕೆ ಬಂದುಬಿಟ್ಟಿ ದ್ದೇವೆ. ನಿಜ ಹೇಳುವುದಾದರೆ, ನಮ್ಮ ಈ ದೇಹವು ಒಂದು ಅತ್ಯದ್ಭುತ ಸೃಷ್ಟಿ. ನಾವು ಅದನ್ನು ಎಷ್ಟು ಚೆನ್ನಾಗಿ ಇರಿಸಿಕೊಳ್ಳ ಬಹುದು ಎಂದರೆ, ಅದನ್ನು ನಾವು ಹೊತ್ತು ತಿರುಗಾಡಬೇಕಾಗಿಲ್ಲ; ಅದೇ ನಮ್ಮ ಜತೆಗೆ ತೇಲಾಡುತ್ತ ಬರುತ್ತದೆ. ಸರಿಯಾದ ಆಹಾರ, ಸರಿಯಾದ ಅಭ್ಯಾಸಗಳು, ನಮ್ಮ ನಡವಳಿಕೆಯಲ್ಲಿ ಒಂಚೂರು ಬದಲಾವಣೆ – ಇಷ್ಟು ಸಾಕು; ನಮ್ಮ ದೇಹ ಒಂದು ಪವಾಡ ವಾಗುತ್ತದೆ. ನಮ್ಮ ದೇಹವನ್ನು ಒಂದು ಯಂತ್ರವಾಗಿ ನೋಡಿ ದರೆ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಅತ್ಯುತ್ಕೃಷ್ಟ ಯಂತ್ರ ಇದು ಎಂಬುದರಲ್ಲಿ ಸಂಶಯವೇ ಇಲ್ಲ. ಜಗತ್ತಿನ ಎಲ್ಲ ಸೂಪರ್‌ ಕಂಪ್ಯೂಟರ್‌ಗಳನ್ನು ಒಟ್ಟು ಸೇರಿಸಿದರೂ ನಮ್ಮ ಈ ದೇಹವನ್ನು ಅವು ಸರಿಗಟ್ಟಲಾರವು. ನಮ್ಮ ವಂಶವಾಹಿ ಯೊಳಗಣ ಒಂದು ಕಣವು ಈ ಭೂಮಿಯ ಮೇಲಿರುವ ಅತ್ಯಂತ ಹೆಚ್ಚು ಶಕ್ತಿಶಾಲಿ ಕಂಪ್ಯೂಟರ್‌ಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ, ಹೆಚ್ಚು ಕೆಲಸ ಗಳನ್ನು ನಿರ್ವಹಿಸಬಲ್ಲುದಾಗಿದೆ.

ಈ ದೇಹವು ಸೃಷ್ಟಿಯು ನಮಗೆ ನೀಡಿರುವ ಮೊತ್ತಮೊದಲ ಉಡುಗೊರೆ. ನಮ್ಮ ಸೃಷ್ಟಿಕರ್ತ ಯಾರೇ ಆಗಿರಲಿ; ಅವರು ಈ ಅತ್ಯದ್ಭುತ ದೇಹವನ್ನು ನಮಗಾಗಿ ಸೃಷ್ಟಿಸಿಕೊಟ್ಟಿದ್ದಾರೆ. ಈ ಮೊದಲ ಉಡುಗೊರೆಯನ್ನು ನಾವು ಸರಿಯಾಗಿ ಇರಿಸಿಕೊಳ್ಳದಿದ್ದರೆ, ಅದನ್ನು ಕೆಟ್ಟದಾಗಿ ನಡೆಸಿಕೊಂಡರೆ ಅಥವಾ ಹಾಳುಮಾಡುತ್ತಿರುವುದನ್ನು ಕಂಡರೆ ಸೃಷ್ಟಿ ಇನ್ನಷ್ಟು ಉಡುಗೊರೆಗಳನ್ನು ಹೇಗೆ, ಯಾಕೆ ತಾನೇ ಕೊಟ್ಟಿàತು! ಹಾಗಾಗಿ ದೇಹವನ್ನು ಚೆನ್ನಾಗಿ, ಆರೋಗ್ಯವಾಗಿ, ಉತ್ತಮವಾಗಿ ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ದೇಹ ಸಂತೋಷವಾಗಿದ್ದರೆ ನಮಗೆ ಮುಂದೆ ಹೋಗಲು ಸಾಧ್ಯವಾಗುತ್ತದೆ.

ನಾವು ದೇಹವನ್ನು ಚೆನ್ನಾಗಿ, ಆರೋಗ್ಯ ವಾಗಿ, ಹಿತವಾಗಿ ಮತ್ತು ಸಂತುಷ್ಟವಾಗಿ ಇರಿಸುವುದು ಸಾಧ್ಯ; ಇದಕ್ಕಾಗಿ ನಾವು ದೊಡ್ಡ ಕ್ರೀಡಾಪಟು ಆಗಬೇಕಾಗಿಲ್ಲ. ದೇಹ ಆರೋಗ್ಯವಾಗಿರುವುದು ಮುಖ್ಯ; ಇಲ್ಲವಾದರೆ ನಾವು ಎಲ್ಲೇ ಹೋಗಲಿ, ಯಾವುದೇ ಕೆಲಸಕ್ಕೆ ಮುಂದಾಗಲಿ – ಅದು ಸುಲಭವಾಗಿ ಕೈಕೊಡಬಹುದು. ಒಳ್ಳೆಯ ಮಳೆ ಬಂದ ಮೇಲೆ ಹೊರಗೆ ದೃಷ್ಟಿ ಹರಿಸಿ. ಗಿಡ ಮರಗಳು ತೋಯ್ದು ಹಸುರಾಗಿ ನಳ ನಳಿಸುತ್ತ ಸಂತೋಷ ವಾಗಿರುವುದು ಕಾಣು ತ್ತದೆ. ನಮ್ಮ ದೇಹವೂ ಹಾಗೆಯೇ ಖುಷಿಯಾಗಿ ಇರ ಬಲ್ಲುದು.

ದೇಹ ಹಾಗೆ ಸಂತೋಷವಾಗಿ ಇರ ಬೇಕೆಂದರೆ ನಾವು ಅದನ್ನು ಚೆನ್ನಾಗಿ ನೋಡಿ ಕೊಳ್ಳಬೇಕು. ಅದಕ್ಕೆ ಸರಿಯಾದುದನ್ನು ಕೊಡಬೇಕು. ಅದರ ಬೇಕು-ಬೇಡಗಳತ್ತ ಗಮನ ಹರಿಸಬೇಕು. ಕೆಲವು ಬಗೆಯ ಆಹಾರಗಳನ್ನು ಸೇವಿಸಿದಾಗ ಹೊಟ್ಟೆಗೆ ಹಿತವಾಗುತ್ತದೆ, ದೇಹ ಉಲ್ಲಸಿತವಾಗಿರು ತ್ತದೆ. ಕೆಲವು ಬಗೆಯ ಆಹಾರಗಳನ್ನು ತಿಂದುಂಡ ಮೇಲೆ ದೇಹ ಜಡವಾಗುತ್ತದೆ, ನಿದ್ದೆಯ ಅವಧಿ ಹೆಚ್ಚುತ್ತದೆ. ನಾವು ದಿನಕ್ಕೆ ಎಂಟು ತಾಸು ನಿದ್ರಿಸುತ್ತೇವೆ ಎಂದಿಟ್ಟು ಕೊಳ್ಳೋಣ. ನಮ್ಮ ಆಯುಷ್ಯ ಅರುವತ್ತು ವರ್ಷಗಳು ಎಂದಾದರೆ ಇಪ್ಪತ್ತು ವರ್ಷ ಗಳ ಅವಧಿ ನಿದ್ದೆಯಲ್ಲಿ ಕಳೆದಂತಾಗುತ್ತದೆ. ಅಂದರೆ ಜೀವಿತದ ಮೂರನೇ ಒಂದು ಭಾಗ ನಿದ್ದೆ. ಉಳಿದ ಮೂವತ್ತರಿಂದ ನಲುವತ್ತು ಶೇಕಡಾ ಊಟ, ಶೌಚ ಮತ್ತಿ ತರ ಚಟುವಟಿಕೆಗಳಲ್ಲಿ ಕಳೆಯುತ್ತದೆ. ಹಾಗಾದರೆ ಬದುಕಲು ಉಳಿದದ್ದೆಷ್ಟು?

ನಿದ್ದೆಯಿಂದ ಯಾರೂ ಸಂತೋಷ ವಾಗಿರಲು ಸಾಧ್ಯವಿಲ್ಲ. ನಿದ್ದೆಯಲ್ಲಿ ನಿಮ್ಮ ಅಸ್ತಿತ್ವವೇ ಇರುವುದಿಲ್ಲ. ನಮಗೆ ನಿಜ ವಾಗಿಯೂ ಬೇಕಾದದ್ದು ವಿಶ್ರಾಂತಿ. ದೇಹಕ್ಕೆ ಚೆನ್ನಾದ ವಿಶ್ರಾಂತಿ – ನಾವು ಅದನ್ನು ಸಂತೋಷಿಸುತ್ತೇವೆ. ನಮ್ಮ ದೇಹಕ್ಕೆ ದಣಿವು ನಿಜವಾಗಿಯೂ ಆಗು ವುದು ಕೆಲಸದಿಂದಲ್ಲ; ಆಹಾರ ಬಹಳ ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಸರಿ ಯಾದ ಆಹಾರ ಸೇವಿಸಿದರೆ ದೇಹ ನಾವು ಹೇಳಿದ ಹಾಗೆ ಕೇಳುತ್ತದೆ, ಅಸಮ ರ್ಪಕ ಆಹಾರ ಸೇವಿಸಿದರೆ ನಾವು ಬೇತಾಳನನ್ನು ಹೊತ್ತುಕೊಂಡ ವಿಕ್ರಮಾ ದಿತ್ಯನ ಹಾಗೆ ದೇಹವನ್ನು ಹೊತ್ತು ತಿರುಗಬೇಕಾಗುತ್ತದೆ.      ( ಸಾರ ಸಂಗ್ರಹ)

ಟಾಪ್ ನ್ಯೂಸ್

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು

ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು

ನೆಲದ ಜತೆಗೆ  ಸಮರಸದ ಬದುಕು

ನೆಲದ ಜತೆಗೆ  ಸಮರಸದ ಬದುಕು

ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು

ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು

ಪ್ರಕೃತಿಯ ಅಗಾಧ ಶಕ್ತಿಯನ್ನರಿತು ನಾವು ಧನ್ಯರಾಗೋಣ

ಪ್ರಕೃತಿಯ ಅಗಾಧ ಶಕ್ತಿಯನ್ನರಿತು ನಾವು ಧನ್ಯರಾಗೋಣ

MUST WATCH

udayavani youtube

ಆಡು ಸಾಕಾಣೆಯಿಂದ ಬದುಕು ಕಟ್ಟಿಕೊಂಡ ಪದವೀಧರೆ

udayavani youtube

ಆಟೋ ಚಾಲಕನಿಗೆ ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

udayavani youtube

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

udayavani youtube

ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

udayavani youtube

ಹಿಮಾಲಯ ಮುಳುಗುತ್ತಾ ?

ಹೊಸ ಸೇರ್ಪಡೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.