CONNECT WITH US  

ಕೇರಳದ ಪರ ಹ್ಯಾರಿಸ್‌ ವಾದ: ಅಸಮಾಧಾನ

ಬೆಂಗಳೂರು: ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌. ಎ. ಹ್ಯಾರೀಸ್‌ ಬುಧವಾರ ಕೇರಳದ ನಿಯೋಗದೊಂದಿಗೆ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ, ಸಭೆಯಲ್ಲಿ ಬಂಡೀಪುರ ಅರಣ್ಯದಲ್ಲಿನ ರಸ್ತೆ ಸಂಚಾರ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ವಾದ ಮಂಡಿಸಲು ಮುಂದಾಗಿದ್ದು, ರಾಜ್ಯದ ವನ್ಯಜೀವಿ ಪ್ರೇಮಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಸಭೆಯಲ್ಲಿ ಹ್ಯಾರೀಸ್‌ ಕೇರಳದ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹಾಗೂ ಅವರ ತಂಡದೊಂದಿಗೆ ಆಸೀನರಾಗಿದ್ದರು. ಅಲ್ಲದೆ, ಚರ್ಚೆ ನಡೆಯುವಾಗ ಒಂದೆರಡು ಬಾರಿ ನಿರ್ಬಂಧ ಸಡಿಲಿಸಬೇಕು ಎಂದು ಕೋರಲು ಮುಂದಾದರು. ಆದರೆ, ಇದನ್ನು ಸಿಎಂ ಸಿದ್ದರಾಮಯ್ಯ ಅವರು ನಿರ್ಲಕ್ಷಿಸಿ, ಹ್ಯಾರೀಸ್‌ ಹೆಚ್ಚಿನ ಆಗ್ರಹ ಮಾಡದಂತೆ ತಡೆದರು ಎನ್ನಲಾಗಿದೆ.

Trending videos

Back to Top