CONNECT WITH US  

ಬೇಜವಾಬ್ದಾರಿ ಶಾಲಾ ವಾಹನಗಳ ಪರವಾನಗಿ ರದ್ದು

ವಿಧಾನಪರಿಷತ್‌: ಶಾಲಾ ವಾಹನಗಳು ಪದೇ ಪದೇ ನಿಯಮ ಉಲ್ಲಂ ಸಿದರೆ ಅಂತಹ ವಾಹನಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಬಿಜೆಪಿ ಸದಸ್ಯೆ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸುರಕ್ಷತಾ ನಿಯಮ ಪಾಲಿಸದೆ ನಿಬಂಧನೆ ಉಲ್ಲಂ ಸಿರುವ ಶಾಲಾ ವಾಹನಗಳ ಬಗ್ಗೆ ರಾಜ್ಯಾದ್ಯಂತ ತಪಾಸಣೆ ನಡೆಸಿ ನ್ಯೂನತೆಗಳಿರುವ 849 ಶಾಲಾ ವಾಹನಗಳನ್ನು ಪತ್ತೆಹಚ್ಚಲಾಗಿದೆ. ಅವುಗಳ ವಿರುದ್ಧ ಪ್ರಕರಣ ದಾಖಲಿಸಿ 4.24 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಈ ಉತ್ತರಕ್ಕೆ ಸಮಾಧಾನಗೊಳ್ಳದ ವಿಮಲಾಗೌಡ, ಶಾಲಾ ವಾಹನಗಳಲ್ಲಿ ನಿಯಮ ಉಲ್ಲಂಘನೆ ಮುಂದುವರಿದಿದೆ. ಆಟೋಗಳಲ್ಲೂ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಹೀಗಿದ್ದರೂ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದಾಗ ಮಧ್ಯೆಪ್ರವೇಶಿಸಿದ ಸಚಿವರು, ಪದೇ ಪದೇ ನಿಯಮ ಉಲ್ಲಂ ಸುವ ಶಾಲಾ ವಾಹನಗಳ ಪರವಾನಗಿ ರದ್ದುಗೊಳಿಸಲಾಗುವುದು. ಅದೇ ರೀತಿ ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾ ಗುವುದು ಎಂದು ಹೇಳಿದರು.

ನಂಬರ್‌ ಪ್ಲೇಟಲ್ಲಿ ಸಂಖ್ಯೆ ಬಿಟ್ಟು ಬೇರೇನೇ ಬರೆದರೂ ಕ್ರಮ: ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ತಮ್ಮ ಇಲಾಖೆ, ಹುದ್ದೆ ಮತ್ತಿತರ ವಿವರಗಳನ್ನು ಬರೆಯುವ ಜನ ಸಾಮಾನ್ಯರು ಮಾತ್ರವಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧವೂ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದು, ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಳೆದ ವಾರ ಕಬ್ಬನ್‌ಪಾರ್ಕ್‌ ಸುತ್ತಮುತ್ತ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಾಹನಗಳ ನಂಬರ್‌ ಪ್ಲೇಟ್‌ಗಳ ಮೇಲೆ ತಮ್ಮ ಪದನಾಮ, ಕರ್ನಾಟಕ ಸರ್ಕಾರ, ಶಾಸಕರು ಎಂದೆಲ್ಲಾ ಬರೆದಿದ್ದ ವಾಹನಗಳಿಗೆ ನೋಟಿಸ್‌ ಜಾರಿ ಮಾಡಿದ್ದು, ವಾಹನ ನೋಂದಣಿ ಸಂಖ್ಯೆ ಹೊರತುಪಡಿಸಿ ಬೇರೆ ಎನೂ ಬರೆಯಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಮುಂದೆಯೂ ಈ ಕಾರ್ಯಾಚರಣೆ ತೀರ್ವಗೊಳಿ ಸಲಾಗುವುದು. ಈಗಾಗಲೇ ನೋಟಿಸ್‌ ಪಡೆದವರು ಇದನ್ನು ಸರಿಪಡಿಸಿಕೊಳ್ಳದಿದ್ದರೆ ಸಾರಿಗೆ ನಿಯಮಾವಳಿಗಳಡಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಬಿಜೆಪಿ ಸದಸ್ಯೆ ತಾರಾ ಅನೂರಾಧ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

Trending videos

Back to Top