CONNECT WITH US  

ವಿಜಯಾ ದಬ್ಬೆ ಸಾಹಿತ್ಯದಲ್ಲಿ ಮಹಿಳಾ ಪರ ಚಿಂತನೆ

ಬೇಲೂರು : ಮಹಿಳಾಪರ ಹೊರಾಟಗಾರ್ತಿಯಾಗಿ, ಮಹಿಳೆಯರ ನೋವು, ಸಂಕಷ್ಟಗಳನ್ನು ಸಾಹಿತ್ಯದ ಮೂಲಕ ಎಳೆ ಎಳೆಯಾಗಿ ತೋರಿಸಿ ಕೊಟ್ಟವರು ಸಾಹಿತಿ ವಿಜಯದಬ್ಬೆಯವರು ಎಂದು ಸಕಲೇಶಪುರ ಸಾರಿಗೆ ಅಧಿಕಾರಿ ಡಾ||ಕೇಶವಧರಣಿ ಹೇಳಿದರು.ಾಲ್ಲೂಕಿನ ಕಾಫಿ ಬೆಳೆಗಾರ ಮತ್ತು ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯರ ತೋಟದಲ್ಲಿ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇಧಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮನೆ ಮನೆ ಕವಿಗೋಷ್ಠಿಯನ್ನು ಉಧಾ^ಟಿಸಿ ಮಾತನಾಡಿದ ಅವರು ಸಾವಿರಾರು ಜನ ಸಾಹಿತಿಗಳು ಮತ್ತು ಲೇಖಕರುಗಳು ಇದ್ದಾರೆ. ಆದರೆ ವಿಜಯ ದಬ್ಬೆಯವರು ಅಪರೂಪದ ಜಾತ್ಯಾತೀತ ಲೇಖಕಿಯಾಗಿದ್ದು, ಇವರ ಧರ್ಮ, ಜಾತಿ ದೂರದ ಸಾಹಿತ್ಯ ಹಾಗು ಮನಸ್ಸು ಎಂಬ ಕೃತಿಗಳ 6 ಸಂಪೂಟ ಸಿದ್ದಗೊಂಡಿದ್ದು ಅವುಗಳನ್ನು ಮನೆ ಮತ್ತು ಮನಗಳಿಗೆ ತಲುಪಿಸುವಂತಹ ಕೆಲಸವಾಗ ಬೇಕಿದೆ. ಮತ್ತು ಹೆಣ್ಣು ಮಕ್ಕಳು ತಮ್ಮ ಬದುಕನ್ನು ಹಸನು ಮಾಡಿಕೊಳ್ಳ ಬೇಕೆಂದರೆ ಕುವೆಂಪು ಹಾಗೂ ವಿಜಯ ದಬ್ಬೆಯವರ ಸಾಹಿತ್ಯವನ್ನು ಓದಬೇಕೆಂದು ಮತ್ತೂಬ್ಬ ಸಾಹಿತಿ ಹೇಳಿದ್ದನ್ನು ಸ್ಮರಿಸಿದ ಅವರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಂತಾಗ ಬೇಕು ಎಂದು ತಿಳಿಸಿದರು.

ಜಾ.ಹೋ.ನಾರಾಯಣಸ್ವಾಮಿ ಮಾತನಾಡಿದ ಸಾಹಿತ್ಯದ ಮೂಲಕ ಮನುಷ್ಯನಲ್ಲಿನ ಸುಪ್ತ ಪ್ರತಿಭೆ ಹೊರ ಹೊಮ್ಮಲಿದ್ದು, ಸಮಾನತೆ ಬಗ್ಗೆ ಮಾತನಾಡುವ ನಾವುಗಳು ಮನಸ್ಸಿನಲ್ಲಿ ಅದನ್ನು ಒಪ್ಪಿ$ಕೊಳ್ಳುವುದಿಲ್ಲ. ನಾವುಗಳು ಇಂದು ಸ್ವಾರ್ಥದ ಮೂಲಕ ಕೀಳು ಮಟ್ಟಕ್ಕಿಳಿಯುತಿದ್ದೇವೆ ಎಂದ ಅವರು ದೈವತ್ವ, ರೀತಿ, ನೀತಿ, ಸಂಪ್ರದಾಯಗಳ ಹೆಸರಿನಲ್ಲಿ ದೇಹವನ್ನು ಬಿನ್ನ ಮಾಡುತಿದ್ದೇವೆ. ಭೂಮಿ ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿದೆ. ಧರ್ಮಾಂದತೆಯ ದೈತ್ಯಕುಲದಿಂದ ವಿಶ್ವ ಅವನತಿಯತ್ತ ಸಾಗುತ್ತಿದೆ ಎಂದರು.ೇ ಸಂದರ್ಬದಲ್ಲಿ ಸಾಹಿತಿ ಬೇಲೂರು ನವಾಬ್‌, ಅದ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ, ತೋಚ.ಅನಂತಸುಬ್ಬರಾಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ||ವಿಜಯದಬ್ಬೆ, ಜಾ.ಹೋ.ನಾರಾಯಣಸ್ವಾಮಿ, ಸಾಹಿತಿ ಬೇಲೂರು ನವಾಬ್‌ರವರನ್ನು ಸನ್ಮಾನಿಸಲಾಯಿತು. ಮ.ಶಿವಮೂರ್ತಿ, ಸಿದ್ದೇಗೌಡ, ಕುಮಾರಸ್ವಾಮಿ ಇನ್ನಿತರರಿದ್ದರು.

Trending videos

Back to Top