CONNECT WITH US  

ಡಾ| ನಾ. ಮೊಗಸಾಲೆ ಅವರಿಗೆ ಕೊ.ಅ. ಉಡುಪ ಪ್ರಶಸ್ತಿ

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ.ಅ. ಉಡುಪ ಸಂಸ್ಮರಣಾರ್ಥ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಸಾಹಿತಿ, ವೈದ್ಯ ಡಾ| ನಾ. ಮೊಗಸಾಲೆ ಆಯ್ಕೆಯಾಗಿದ್ದಾರೆ.

ಜು. 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

ಡಾ| ಮೊಗಸಾಲೆ ಅವರು 1966ರಲ್ಲಿ ಕಾಂತಾವರ ರೈತ ಯುವಕ ಸಂಘದ ಸ್ಥಾಪನೆ, 1976ರಲ್ಲಿ ಕಾಂತಾವಾರ ಕನ್ನಡ ಸಂಘದ ಸ್ಥಾಪನೆ, 1978ರಲ್ಲಿ ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠದ ಸ್ಥಾಪನೆ, 2003ರಲ್ಲಿ ಕನ್ನಡ ಭವನ ನಿರ್ಮಾಣ, 2008ರಲ್ಲಿ ಅಲ್ಲಮ ಪ್ರಭು ಪೀಠದ ಸ್ಥಾಪನೆ ಮಾಡಿ ಜನಮೆಚ್ಚುಗೆ ಗಳಿಸಿದವರು.

ಕವನ, ಕಥೆ, ಕಾದಂಬರಿ, ಲೇಖನ, ವೈದ್ಯಕೀಯ ಲೇಖನ ಸಹಿತ ಅವರ ಸುಮಾರು 60ಕ್ಕೂ ಮಿಕ್ಕಿ ಕೃತಿಗಳು ಪ್ರಕಟಗೊಂಡಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.

Trending videos

Back to Top