CONNECT WITH US  

ಪ್ರೊ| ಬಿ. ಸುರೇಂದ್ರ ರಾವ್‌ಗೆ ಗೋವಿಂದ ಪೈ ಸ್ಮಾರಕ ಪ್ರಶಸ್ತಿ

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವತಿಯಿಂದ ಪ್ರತಿವರ್ಷ ನೀಡುವ ವಿಮಲಾ ಪೈ ಪ್ರಾಯೋಜಿಸಿದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ಮಂಗಳೂರು ವಿ.ವಿ. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ| ಡಾ| ಬಿ. ಸುರೇಂದ್ರ ರಾವ್‌ ಅವರಿಗೆ ನೀಡುವುದೆಂದು ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಸ್ತಿ ವಾಮನ ಶೆಣೈ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್‌ ಅವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 6ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ.

ಸುರೇಂದ್ರ ರಾವ್‌ ಅವರು 1973ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅಧ್ಯಾಪನ, 1982ರಿಂದ ಮಂಗಳೂರು ವಿ.ವಿ.ಯಲ್ಲಿ ಇತಿಹಾಸದ ರೀಡರ್‌, 1993ರಿಂದ 2008ರ ವರೆಗೆ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಆಧುನಿಕ ಭಾರತೀಯ ಇತಿಹಾಸ, ಇತಿಹಾಸ ತಣ್ತೀಶಾಸ್ತ್ರ, ಇತಿಹಾಸಶಾಸ್ತ್ರ ಇವು ಅವರ ವಿಶೇಷ ಅಧ್ಯಯನ ವಿಷಯಗಳು. ರಾವ್‌ ಮಾರ್ಗದರ್ಶನದಲ್ಲಿ 12 ಮಂದಿ ಸಂಶೋಧಕರು ಪಿ.ಎಚ್‌.ಡಿ. ಹಾಗೂ 6 ಮಂದಿ ಎಂ.ಫಿಲ್‌. ಪದವಿ ಪಡೆದಿದ್ದಾರೆ. ಗ್ರಂಥಕರ್ತರಾಗಿಯೂ ಪ್ರೊ| ರಾವ್‌ ಅನೇಕ ಪುಸ್ತಕಗಳನ್ನು ಹೊರತಂದಿದ್ದಾರೆ. ಅನೇಕ ಗ್ರಂಥ ಪರಿಚಯಾತ್ಮಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮದರಾಸು ವಿ.ವಿ., ಮೈಸೂರು ವಿ.ವಿ., ಕಲಬುರ್ಗಿ ವಿ.ವಿ.ಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡಿರುವ ರಾವ್‌ ಕೋಲ್ಕತಾದಲ್ಲಿ ನಡೆದ ಆಧುನಿಕ ಭಾರತೀಯ ಇತಿಹಾಸ ಅಧಿವೇಶನದಲ್ಲಿ ಒಂದು ಗೋಷ್ಠಿ, 2001ರ ಇಂಡಿಯನ್‌ ಹಿಸ್ಟರಿ ಕಾಂಗ್ರೆಸಿನ ಒಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾರೆ. ಹಂಪಿ ವಿ.ವಿ., ಹೈದರಾಬಾದಿನ ಕೇಂದ್ರೀಯ ವಿ.ವಿ.ಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಆಮಂತ್ರಿಸಲ್ಪಟ್ಟಿದ್ದಾರೆ.

Trending videos

Back to Top