CONNECT WITH US  

ಸುನೀಲ್‌ ರಾವ್‌ ತುರ್ತು ನಿರ್ಗಮನ

ನಟ ಸುನೀಲ್‌ ರಾವ್‌ ಒಂದು ಗ್ಯಾಪ್‌ನ ನಂತರ ಮತ್ತೆ ಬಂದಿದ್ದಾರೆ. ಹೊಸ ಸಿನಿಮಾವೊಂದರಲ್ಲಿ ಅವರು ನಟಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಅವರ ಚಿತ್ರದ ಹೆಸರೇ ತುಂಬಾ ವಿಭಿನ್ನವಾಗಿದೆ. ಅದು "ತುರ್ತು ನಿರ್ಗಮನ'. ಈ ಸಿನಿಮಾವನ್ನು ಹೇಮಂತ್‌ ಕುಮಾರ್‌ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಚೊಚ್ಚಲ ಸಿನಿಮಾ. ಚಿತ್ರದಲ್ಲಿ "ಒಂದು ಮೊಟ್ಟೆಯ ಕಥೆ'ಯ ರಾಜ್‌ ಬಿ ಶೆಟ್ಟಿಗೂ ಪ್ರಮುಖ ಪಾತ್ರವಿದೆ.

ಇಲ್ಲಿ ಅವರು ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ. ನಿರ್ದೇಶಕ ಹೇಮಂತ್‌ ಹೇಳುವಂತೆ, ಇದೊಂದು ಫ್ಯಾಂಟಸಿ ಡ್ರಾಮಾ. ಜೀವನದಲ್ಲಿ ನಾವು ಊಹಿಸಿಕೊಳ್ಳಲಾಗದಂತಹ ಅಂಶಗಳು ನಡೆದರೆ ಏನಾಗಬಹುದೆಂಬ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರಂತೆ. "ನಾವು ಬೇರೆಯವರ ತರಹ ಇರಬೇಕೆಂದು ಬಯಸುತ್ತೇವೆ. ಆದರೆ, ನಮ್ಮನ್ನು ನಾವು ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ.

ಈ ತರಹದ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ' ಎನ್ನುವುದು ಹೇಮಂತ್‌ ಮಾತು. ಚಿತ್ರದಲ್ಲಿ ಸುನೀಲ್‌ ರಾವ್‌, ರಾಜ್‌ ಬಿ ಶೆಟ್ಟಿ, ಸುಧಾರಾಣಿ, ಅಚ್ಯುತ್‌ ಕುಮಾರ್‌, ಹಿತಾ ಚಂದ್ರಶೇಖರ್‌, ಸಂಯುಕ್ತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಧೀರೇಂದ್ರ ದಾಸ್‌ ಸಂಗೀತ, ಪ್ರಯಾಗ್‌ ಛಾಯಾಗ್ರಹಣವಿದೆ. ಭರತ್‌ ಕುಮಾರ್‌ ಜೊತೆ ಸೇರಿ ಹೇಮಂತ್‌ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. 


Trending videos

Back to Top