CONNECT WITH US  

ಅಕ್ಷರ ಲೋಕದ ಅಂಗಳದಲ್ಲಿ...

ಓದಬೇಕಾದ ಪುಸ್ತಕಗಳು

ಕನ್ನಡ ಪುಸ್ತಕ ಓದುಗರ ಸಂಖ್ಯೆ ಕಮ್ಮಿಯಾಗುತ್ತಿದೆ ಎಂಬ ಭಯ ಒಂದೆಡೆಯಾದರೆ ಯಾವುದನ್ನು ಓದಬೇಕು ಅಂತ ಗೊತ್ತಾಗುತ್ತಿಲ್ಲ ಅನ್ನುವವರ ಬೇಸರ ಮತ್ತೂಂದೆಡೆ. ಅಂಥಾ ಓದುಗರಿಗೆ "ಐ ಲವ್‌ ಬೆಂಗಳೂರು' ಆಯ್ಕೆ ಈ ಪುಸ್ತಕಗಳು.

ಶ್ರೀರಂಗ ಸಂಪದ: 
ಲೇ: ಎಚ್‌. ವೆಂಕಟಸುಬ್ಬಯ್ಯ  
ಪ್ರ: ನವಕರ್ನಾಟಕ ಪ್ರ: ಸಿರಿವರ ಪ್ರಕಾಶನ, ಲಕ್ಷ್ಮಿನಾರಾಯಣಪುರ, ಬೆಂಗಳೂರು

ಶ್ರೀರಂಗರ ಮೂಲನಾಮ ಆರ್‌. ಜಾಗೀರದಾರ. ಅಧ್ಯಾಪಕ ವೃತ್ತಿಯಲ್ಲಿದ್ದರು. ಜೀವನಚರಿತ್ರೆ, ಕಥೆ, ಕಾವ್ಯ, ಹರಟೆ, ಪ್ರಬಂಧ ನಾಟಕ ಭಾಷಾಜ್ಞಾನದ ಬಗ್ಗೆ ಪುಸ್ತಕಗಳನ್ನು ಬರೆದರು. ವಿಮಶಾì ಪ್ರಪಂಚಕ್ಕೂ ಅವರ ಕೊಡುಗೆ ಬಹಳ ದೊಡ್ಡದು. ಇಂಗ್ಲಿಷ್‌ನಲ್ಲೂ ವಿಪುಲವಾಗಿ ಬರೆದಿದ್ದಾರೆ. ಅಕ್ಷರಲೋಕಕ್ಕೆ, ರಂಗಭೂಮಿಗೆ ಮತ್ತು ಕನ್ನಡ ಚಳವಳಿಗೆ ಅವರ ಕೊಡುಗೆ ಬಹಳ ದೊಡ್ಡದು. ಅವರು ತೀರಿಕೊಂಡೇ 32 ವರ್ಷಗಳಾಗಿವೆ.

ಈ ಕೃತಿಯಲ್ಲಿ ಅವರ ಬಗ್ಗೆ ನಾಲ್ಕು ತಲೆಮಾರಿನ ರಂಗಕರ್ಮಿಗಳ, ವಿಮರ್ಶಕರ ಮತ್ತು ವಿಚಾರವಂತರ ನೆನಕೆ, ಪ್ರತಿಕ್ರಿಯೆ ವಿಮರ್ಶೆ ವಿಶ್ಲೇಷಣೆಗಳನ್ನು ಸಂಪಾದಿಸಲಾಗಿದೆ. ಉಜ್ವಲ ಪ್ರತಿಭೆಯ ಸಾಂಸ್ಕೃತಿಕ ಲೋಕದ ಒಂದು ನೋಟ ಇದಾಗಬಹುದೆಂಬುದು ಸಂಪಾದಕರ ಆಶಯ. ಶ್ರೀರಂಗರ ಸಮಗ್ರ ಕೃತಿಗಳ ಸಿಂಹಾವಲೋಕನ ಇಲ್ಲಿವೆ. 

 *****
ಕತೆ ಹೇಳುವೆ
ಲೇ: ಗುರುರಾಜ ಬೆಣಕಲ್‌, 
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪಿಕರ್‌ ಬೀದಿ, ಹುಬ್ಬಳ್ಳಿ.

ಮಕ್ಕಳಿಗೆ ಕತೆಗಳೆಂದರೆ ಪ್ರಾಣ. ಮಕ್ಕಳನ್ನು ಒಲಿಸಿಕೊಳ್ಳುವ ಸಾಧನ ಕತೆ ಎಂದರೂ ತಪ್ಪಿಲ್ಲ. ಎಆನಾದರೂ ಕೆಲಸವಾಗಬೇಕಿದ್ದಾಗ ಕತೆಯ ಲಂಚದ ಆಸೆ ತೋರಿಸಿ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುವ ಹಿರಿಯರೂ ಇದ್ದಾರೆ. ಮಕ್ಕಳ ಮನಸ್ಸಿನ ಮೇಲೆ ಕತೆಗಳು ಬೀರುವ ಪ್ರಭಾವ ಅಗಾಧ. ಕತೆಗಳು ನಡತೆಯನ್ನು ಸಂಸ್ಕೃತಿಯನ್ನು ಕಲಿಸುತ್ತದೆ ಎಂದರೆ ತಪ್ಪಾಗಲಾರದು. ಹಾಗೆಂದು ಕತೆಗಳು ದೀರ್ಘ‌ವಾಗಿರಬಾರದು. ಕ್ಲಿಷ್ಟವಾಗಿರಬಾರದು. ಮಕ್ಕಳ ಕತೆಗಳು ನಾಜೂಕಾಗಿ ಸರಳವಾಗಿ ಹಾಸ್ಯಭರಿತವಾಗಿ ಇದ್ದರೆ ಮಕ್ಕಳು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತವೆ. ಈ ಸಂಕಲನದಲ್ಲಿ ಅಂತಹ 39 ಕತೆಗಳು ಇವೆ. ಎಲ್ಲವೂ ಮಕ್ಕಳಿಗೆ ಇಷ್ಟವಾಗುವಂಥದ್ದು. 

*****
ವಚನ ದರ್ಶನ
ಲೇ: 
ಕೆ. ಸಿ. ಶಿವಪ್ಪ 
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪಿಕರ್‌ ಬೀದಿ, ಹುಬ್ಬಳ್ಳಿ.

ವ‌ಚನ ಸಾಹಿತ್ಯ ಎರವಲು ತಂದದ್ದಲ್ಲ. ಅದು ಕನ್ನಡದ ಸ್ವಾರ್ಜಿತ ಸ್ವತ್ತು. ಮರ್ತ್ಯಲೋಕದ ಮನದ ಮೈಲಿಗೆ ಕಳೆಯುವ ಏಕೈಕ ಸಾಧನ ವಚನ. ಓದಿದಷ್ಟೂ ಹೊಸ ಹೊಸ ಅರ್ಥಗಳ ಕೊಡುವ ಸಂಜೀನಿ. "ವಚನ ಎಂದರೆ ಪ್ರತಿಜ್ಞೆ, ಆತ್ಮಸಾಕ್ಷಿ. ಶುದ್ಧ ದೇಸೀ ಮನೋಭೂಮಿಕೆಯಲ್ಲಿ ಈ ವಚನಗಳು ರೂಪತಳೆದಿವೆ.

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂಬ ಭಾವದಲ್ಲಿ ವಚನಕಾರರು ತಮ್ಮ ಅನಿಸಿಕೆಗಳಿಗೆ ವಾಕ್‌ ಶಕ್ತಿಯನ್ನು ಧಾರೆ ಎರೆದರು. ವಚನ ಬರಿ ಬುದ್ಧಿಯ ವಿಷಯವಲ್ಲ. ಅನುಭವದ ಸಂಗತಿ. ಆತ್ಮತೃಪ್ತಿಯ ಅರಿವಿನ ಸಾಧನ. ಸಿದ್ಧರಾಮನ ದೃಷ್ಟಿಯಲ್ಲಿ ವಚನಗಳೆಂದರೆ ಈಶ್ವರನನ್ನು ಬೆಳಗುವ ಜ್ಯೋತಿ. ಇಲ್ಲಿ ವಿವಿಧ ವಚನಕಾರರ ವಚನಗಳು ಅದರ ಕುರಿತಾದ ವಿವರಣೆಯನ್ನೂ ಸರಳಗನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. 

* ವೀಣಾ ಚಿಂತಾಮಣಿ

Trending videos

Back to Top