ಚಂಪಾ ತೆಗೆದ ಸಾಹಿತ್ಯ ಸಮ್ಮೇಳನದ ಮರ್ಯಾದೆ!


Team Udayavani, Nov 29, 2017, 4:42 AM IST

29-14.jpg

ಚಂಪಾ ಅವರ ಪ್ರಕಾರ ಕನ್ನಡಿಗರು ಬೆಂಬಲಿಸಬೇಕಾದ ರಾಜಕೀಯ ಪಕ್ಷ ಜಾತ್ಯತೀತವಾಗಿದ್ದರಷ್ಟೇ ಸಾಲದು, ಅದು ರಾಷ್ಟ್ರೀಯವೂ ಆಗಿರಬೇಕಂತೆ! ಅವರು ಈ ಷರತ್ತನ್ನು ಏಕೆ ಹಾಕುತ್ತಿದ್ದಾರೆಂಬುದು ಸ್ಪಷ್ಟ. ಏಕೆಂದರೆ ತಮ್ಮ ಬೆಂಬಲ ಜಾತ್ಯತೀತ ಜನತಾ ದಳಕ್ಕೂ ಎಲ್ಲಿ ಹಂಚಿಹೋಗುವುದೋ ಎಂಬ ಆತಂಕ ಅವರದ್ದು! ಈವರೆಗೆ ಈ ಪಕ್ಷಗಳ ನಾಯಕರ ಕಡೆಗೆಲ್ಲ ಕಣ್ಣು ಹೊಡೆದು ಸುಸ್ತಾದಂತೆ ಈಗ ಇಷ್ಟು ನಿರ್ದಿಷ್ಟ ಪಕ್ಷ ನಿಷ್ಠೆ ಅವರದ್ದು!

ಮೈಸೂರಿನಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ವಿವಿಧ ಗೋಷ್ಠಿಗಳ ವರದಿಗಳು ಬಂದಿವೆ. ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಪಾಟೀಲರು ಕನ್ನಡದ ಒಂದು ಪತ್ರಿಕೆಯ ಸುದ್ದಿ ತಲೆಬರಹವನ್ನೇ ಬಳಸಿ ಹೇಳುವುದಾದರೆ ಈ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ “ರಾಜಕೀಯ ಕಹಳೆ’ ಊದಿದ್ದಾರೆ. ಸಾಹಿತ್ಯ ಸಮ್ಮೇಳನಗಳ ವೇದಿಕೆ ರಾಜಕೀಯ ವೇದಿಕೆಯಾಗಿ ಪರಿವರ್ತಿತ ವಾಗಿರುವುದು ಇದು ಮೊದಲೇನಲ್ಲ. ಈ ಹಿಂದಿನ ಸಮ್ಮೇಳನಗಳ ಅನೇಕ ಗೋಷ್ಠಿಗಳ ಭಾಷಣಗಳು ರಾಜಕೀಯ ಗಮಲುಗಳಿಂದಲೇ ಕೂಡಿ ಜುಗುಪ್ಸೆ ಮೂಡಿಸುತ್ತಿದ್ದುದನ್ನು ನಾವೆಲ್ಲ ಗಮನಿಸಿದ್ದೇವೆ. ಆದರೆ ಸಮ್ಮೇಳನದ ಸರ್ವಾಧ್ಯಕ್ಷರೇ ಈ ಸಮ್ಮೇಳನದಲ್ಲಿ ಈ ಪ್ರವೃತ್ತಿಗೆ ರಾಜಾರೋಷವಾದ “ಕಹಳೆ ನಾಂದಿ’ಯ ಮರ್ಯಾದೆ ನೀಡಿರುವುದು ಇದೇ ಮೊದಲು. 

ಚಂಪಾ ಈ ವೇದಿಕೆಯಿಂದ “ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡಲು ಜಾತ್ಯತೀತ ರಾಷ್ಟ್ರೀಯ ಪಕ್ಷವೊಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಕನ್ನಡಿಗರಿಗೆ ಕರೆ ಕೊಟ್ಟಿದ್ದಾರೆ. ಯಾವಾಗಲೂ ನಿರ್ಭಿಡೆಯಿಂದ ನೇರವಾಗಿ ಮಾತಾಡುವ ಚಂಪಾ ಕಾಂಗ್ರೆಸನ್ನು ಬೆಂಬಲಿಸಿ ಎಂದು ಸರಳವಾಗಿ, ನೇರವಾಗಿ ಹೇಳ ಲೇಕೋ ಹಿಂಜರಿದಿದ್ದಾರೆ. ಅಷ್ಟರ ಮಟ್ಟಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯ “ಮರ್ಯಾದೆ’ಯನ್ನು ಅವರು ಉಳಿಸಿದ್ದಾರೆ! ಚಂಪಾ ಅವರ ಪ್ರಕಾರ ಕನ್ನಡಿಗರು ಬೆಂಬಲಿಸಬೇಕಾದ ರಾಜಕೀಯ ಪಕ್ಷ ಜಾತ್ಯತೀತವಾಗಿದ್ದರಷ್ಟೇ ಸಾಲದು, ಅದು ರಾಷ್ಟ್ರೀಯವೂ ಆಗಿರ ಬೇಕಂತೆ! ಅವರು ಈ ಷರತ್ತನ್ನು ಏಕೆ ಹಾಕುತ್ತಿದ್ದಾರೆಂಬುದು ಸ್ಪಷ್ಟ. ಏಕೆಂದರೆ ತಮ್ಮ ಬೆಂಬಲ ಜಾತ್ಯತೀತ ಜನತಾದಳಕ್ಕೂ ಎಲ್ಲಿ ಹಂಚಿಹೋಗುವುದೋ ಎಂಬ ಆತಂಕ ಅವರದ್ದು! ಈವರೆಗೆ ಈ ಪಕ್ಷಗಳ ನಾಯಕರ ಕಡೆಗೆಲ್ಲ ಕಣ್ಣು ಹೊಡೆದು ಸುಸ್ತಾದಂತೆ ಈಗ ಇಷ್ಟು ನಿರ್ದಿಷ್ಟ ಪಕ್ಷ ನಿಷ್ಠೆ ಅವರದ್ದು!

ಇಂತಹ ಅಪ್ಪಟ, ರಾಜಕೀಯ ಭಾಷಣ ಹಿಂದೆಂದೂ ಈ ವೇದಿಕೆಯಿಂದ ಯಾರೂ ಮಾಡಿರಲಿಲ್ಲ. ನಿರ್ಲಜ್ಜ ಏಕೆಂದರೆ ಅವರಿಗೆ ತಾವು ನಿಂತ ವೇದಿಕೆಯ ಲಜ್ಜೆ ಎಂಬುದೇ ಇಲ್ಲವಾಗಿದೆ. ಅಂದರೆ, ಎಲ್ಲ ತೆರೆನ ರಾಜಕೀಯ ನಿಷ್ಠೆಗಳ ಜನ ಆ ನಿಷ್ಠೆಗಳನ್ನು ಮರೆತು ತಮ್ಮನ್ನು ಈ ವೇದಿಕೆಯ ಮೇಲಿನ ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂಬ ಪ್ರಜ್ಞೆಯೇ ಅವರಿಗಿಲ್ಲವಾಗಿದೆ. ಕನ್ನಡ ಸಾಹಿತ್ಯ ಲೋಕ ಬಹುಮಟ್ಟಿಗೆ ರಾಜಕೀಯ ಪುಢಾರಿಗಳ ಲೋಕವೇ ಆಗಿಬಿಟ್ಟಿದ್ದು ಅದರ ಚೇಲಾಗಿರಿ ಪಾತಾಳ ಮುಟ್ಟಿರುವ ಸೂಚನೆ ಇದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೆಚ್ಚು ಸಾಂಸ್ಕೃತಿಕ ಘನತೆಯಿಂದ ಮಾತಾಡಿದ್ದು, ಅವರು ಕೂಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಇಂತಹ ದುರ್ಬಳಕೆಯನ್ನು ಮತ್ತು ಇಂತಹ ರಾಜಕೀಯ ಚೇಲಾಗಿರಿಯನ್ನು ತಮ್ಮ ಪಕ್ಷಕ್ಕೆ ನೀಡಿದ ಬೆಂಬಲವೆಂದು ಭಾವಿಸದೆ, ಇದನ್ನೆಲ್ಲ ಜುಗುಪ್ಸೆಯಿಂದಲೇ ನೋಡುವರು ಎಂದು ಭಾವಿಸಬಹುದು.

ಚಂಪಾ ತಮ್ಮ ಭಾಷಣದಲ್ಲಿ ಕನ್ನಡ ಸಾಹಿತ್ಯದಲ್ಲಿ ದಲಿತ- ಬಂಡಾಯ ಆರಂಭವಾದ ಮೇಲೆ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸ್ವರೂಪವೇ ಬದಲಾಗಿದೆ ಎಂದಿದ್ದಾರೆ. ಅವರ ಮಾತು ನಿಜ. ಆ ಬದಲಾವಣೆಯ ಅಂತಿಮ ಫಲ ಸ್ವರೂಪವೇ ಇವರ ಸರ್ವಾಧ್ಯಕ್ಷತೆಯ ಭಾಷಣ. ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಸಾಹಿತ್ಯ ಪರಿಷತ್‌ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಆರಂಭವಾದದ್ದು ನಾಡು ನುಡಿಗಳ ರಕ್ಷಣೆ ಮತ್ತು ಪೋಷಣೆಗಾಗಿಯೇ. ಆದರೆ ಅದು ಆಗಬೇಕಾದದ್ದು ಸಾಹಿತಿಗಳ ಘನತೆವೆತ್ತ ಮಾರ್ಗದರ್ಶನದಲ್ಲಿ, ಸಾಹಿತ್ಯದ ಮರ್ಯಾದೆಯ ಪರಿಧಿಯಲ್ಲಿ. ಹಾಗಾಗಿಯೇ ಈ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರು (ಸರ್ವಾಧ್ಯಕ್ಷತೆ ಎಂಬುದು ಆಧ್ಯಕ್ಷತೆ ಎಂಬುದರ ಮರ್ಯಾದೆ ಕೆಡಿಸಿದ ಅನಂತರ ಅದಕ್ಕೆ ಮರ್ಯಾದೆಯನ್ನು ಮರಳಿ ತರಲು ಮಾಡಿದ ಹತಾಶ ಪ್ರಯತ್ನದ ಫಲವಷ್ಟೆ!) ಹೆಚ್ಚಾಗಿ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಸಮಸ್ಯೆಗಳ ಬಗ್ಗೆ ಮತ್ತು ಅವನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಮಾತಾಡಿ, ಕ್ವಚಿತ್ತಾಗಿ ಇದಕ್ಕೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಮಾತನಾಡುತ್ತಿದ್ದರು. ಆಳುವವರಿಗೆ ಎಚ್ಚರಿಕೆ ನೀಡುತ್ತಿದ್ದರು. ಮಿಕ್ಕಂತೆ ಗೋಷ್ಠಿಗಳು ನೇರವಾಗಿ ಸಾಹಿತ್ಯ-ಸಂಸ್ಕೃತಿಗಳಿಗೆ ಸಂಬಂಧಿಸಿರುತ್ತಿದ್ದವು. ಒಂದು ಕವಿಗೋಷ್ಠಿ ಇರುತ್ತಿತ್ತು.

ಆದರೆ ದಲಿತ- ಬಂಡಾಯಗಳೆಂಬವು ಬಂದ ಮೇಲೆ ನುಡಿಯ ಕಳಕಳಿ ಹಿನ್ನೆಲೆಗೆ ಸರಿದು, ನಾಡಿನ ಹಿತದ ಹೆಸರಿನಲ್ಲಿ ನೆಲ-ಜಲ- ಸಮಾಜ-ಇತಿಹಾಸಗಳ ಹೆಸರಲ್ಲಿ ಸಾಹಿತ್ಯೇತರ ಗೋಷ್ಠಿಗಳು ಆರಂಭವಾದವು. ಇಂತಹ ಗೋಷ್ಠಿಗಳಿಗೆ ವೇದಿಕೆ ಗಿರಾಕಿಗಳು ಜಾಸ್ತಿಯಾದುದರಿಂದ ಸಮಾನಾಂತರ ವೇದಿಕೆ ಎಂಬ ಹೆಸರಿನಲ್ಲಿ ಮತ್ತಷ್ಟು “ಸಾಮಾಜಿಕ ಕಳಕಳಿ’ಯ ಗೋಷ್ಠಿಗಳು ಆರಂಭವಾದವು. ಇದರ ಜತೆಗೇ ಒಂದು-ಎರಡು- ಮೂರು-ನಾಲ್ಕು ಕವಿಗೋಷ್ಠಿ ಗಳೂ ಆರಂಭವಾದವು. ಇದರ ಪರಿಣಾಮ ಸಾಹಿತ್ಯ ಸಮ್ಮೇಳನವೆಂಬುದು ಒಳ್ಳೆಯ ಅರ್ಥದಲ್ಲಿ ಜಾತ್ರೆ ಎಂಬಂತಿದ್ದುದು ಈಗ ಕೆಟ್ಟ ಅರ್ಥದ ಸಂತೆಯಾಗಿ ಹೋಗಿ, ಸಾಹಿತ್ಯ ಹಿನ್ನೆಲೆಗೆ ಸರಿಯಿತು. ಸಾಹಿತ್ಯ ಹಿನ್ನೆಲೆಗೆ ಸರಿದಂತೆ ಗೋಷ್ಠಿಗಳ ಮರ್ಯಾದೆಯೂ ಇಲ್ಲವಾಯಿತು. ರಾಜಕೀಯ ಪುಢಾರಿಗಳೆಲ್ಲ ಸಾಹಿತ್ಯ ಸಮ್ಮೇಳನಗಳಿಗೆ ಬಂದು ತಮ್ಮ ಬಡಾಯಿ ಭಾಷಣಗಳನ್ನೂ, ದಂಡಿ ದಂಡಿಯಾಗಿ ರಾಜಕೀಯ ಕ್ಲೀಷೆಗಳ ಕವಿತಾ ವಾಚನಗಳನ್ನೂ ಆರಂಭಿಸುವಂತಾಯಿತು. 

ಇದೆಲ್ಲ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲೇ ಏಕೆ ಎಂದು ಈಗ ಯಾರೂ ಕೇಳುವುದಿಲ್ಲ! ಕೇಳಿದರೆ ಅಪ್ಪಟ ಸಾಹಿತ್ಯವೆಂಬುದು ಎಲ್ಲೂ ಇಲ್ಲ ಎಂಬ ಅಸಂಬದ್ಧ ಉತ್ತರ ಬರುತ್ತದೆ. ಆದರೆ ಈ ಪ್ರಶ್ನೆಯನ್ನು ಏಕೆ ಕೇಳಬೇಕಾಗಿದೆ ಎಂಬುದನ್ನು ಚಂಪಾ ಅವರ ಅಧ್ಯಕ್ಷ ಭಾಷಣ ಸ್ಪಷ್ಟಪಡಿಸುವಂತಿದೆ. ಅಪ್ಪಟ ಸಾಹಿತ್ಯವೆಂಬುದಿಲ್ಲ ನಿಜ. ಹಾಗೆಂದು ಅದರ ಅರ್ಥವನ್ನು ಅಸಂಬದ್ಧವಾಗಿ ವಿಸ್ತರಿಸುತ್ತಾ ಹೋದರೆ, ಅದರ ಅರ್ಥ ಔಚಿತ್ಯ ಮೀರಿ ಹೀಗೆ ಅಶ್ಲೀಲವಾಗುತ್ತಾ ಹೋಗುತ್ತದೆ. ಸಾಹಿತ್ಯ ಎಂಬುದು ಸಂಸ್ಕೃತಿ ಎಂಬ ಪರಿಕಲ್ಪನೆಯ ವ್ಯಾಪ್ತಿಗೆ ಬರುವಂತಹದ್ದು. ಹಾಗಾಗಿ ಅದು ಸಾಹಿತ್ಯದ ಅರ್ಥವನ್ನು ಎಷ್ಟರವರೆಗೆ ವಿಸ್ತರಿಸಬಹುದು ಎಂಬುದನ್ನು ಸೂಚಿಸುತ್ತದೆ. ಕುವೆಂಪು-ಕಾರಂತ-ಅಡಿಗ-ಅನಂತಮೂರ್ತಿ-ತೇಜಸ್ವಿ-ಲಂಕೇಶ್‌-ದೇವನೂರ ಮಹಾದೇವ ಅವರ ವರೆಗೆ ಸಾಹಿತ್ಯದಲ್ಲಿ ರಾಜಕೀಯ ಪ್ರಜ್ಞೆ ಇಣುಕುವ ಪರಿಯನ್ನು ಕನ್ನಡಿಗರು ಗಮನಿಸಿದ್ದಾರೆ; ಮೆಚ್ಚಿದ್ದಾರೆ. ಅಲ್ಲಿ ಅದು ಸಾಹಿತ್ಯದ ಮರ್ಯಾದೆಯನ್ನು ಮೀರದೆ, ಸಗಟು ರಾಜಕೀಯ ಪರಿಭಾಷೆಗೆ ಹೊರಳದೆ ತನ್ನ ಸಾಂಸ್ಕೃತಿಕ ಘನತೆಯನ್ನು ಕಾಪಾಡಿಕೊಂಡಿದೆ. ಚಂಪಾ ಅವರ ಭಾಷಣವೋ ನೇರವಾಗಿ ಚುನಾವಣಾ ರಾಜಕೀಯ ಪರಿಭಾಷೆಗೇ ಇಳಿದುಬಿಟ್ಟಿದೆ.

ಆದರೆ ಚಂಪಾರನ್ನು ಕೇಳಿ ನೋಡಿ. ಜನ ತಮ್ಮ ನಾಡು-ನುಡಿಯ ಹಿತದೃಷ್ಟಿಯಿಂದ ರಾಜಕೀಯವಾಗಿ ಯಾರನ್ನು ಆಯ್ಕೆ ಮಾಡಿ ಕೊಳ್ಳಬೇಕೆಂದು ಸೂಚಿಸುವ ಹಕ್ಕು ಸಮ್ಮೇಳನಾಧ್ಯಕ್ಷರಿಗೆ ಇದೆ ಎಂದು ಘಂಟಾಘೋಷವಾಗಿ ಹೇಳಿಯಾರು! ಆ ಧೈರ್ಯ, ವಿಶ್ವಾಸ ಅವರಿಗೆ ಬಂದಿರುವುದೇ ಅವರೇ ಹೇಳುವಂತೆ, ಬಂಡಾಯ- ದಲಿತ ಚಳವಳಿಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ರಾಜಕೀಯ ಸಮ್ಮೇಳನಗಳನ್ನಾಗಿ ಪರಿವರ್ತಿ ಸುತ್ತಾ ಬಂದಿರುವ ಚಾಳಿಯಿಂದಾಗಿ. ಇದಕ್ಕೆ ಕಾರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಗುಣಮಟ್ಟವೂ ಕುಸಿದಿರುವುದೂ ಆಗಿದೆ. ಇದಕ್ಕೆ ಮತ್ತೆ ಕಾರಣ ಈ ಸಂಸ್ಥೆ ಬುಡದಿಂದ ತುದಿಯವರೆಗೆ ಸಾಹಿತ್ಯೇತರ ಶಕ್ತಿಗಳ ಕೈವಶವಾಗಿರುವುದು.

ನಾನು ಬಹಳ ಬಾರಿ ಹೇಳಿರುವಂತೆ ಈ ಬಂಡಾಯ-ದಲಿತ ಎಂಬ ಹಣೆಪಟ್ಟಿಯ ಸಾಹಿತ್ಯ ಚಳವಳಿಗಳು ಎಂದೂ ಸಾಹಿತ್ಯ ಚಳವಳಿಗಳೇ ಆಗಿರಲಿಲ್ಲ. ಅವು ಮೂಲತಃ ಸಾಹಿತ್ಯವನ್ನು “ಬಳಸಿ’ ಕೊಳ್ಳಲು ಬಯಸಿದ ರಾಜಕೀಯ ಚಳವಳಿಗಳು. ಹಾಗಾಗಿಯೇ ಈ ಚಳವಳಿ ಕನ್ನಡದ ಜನ ನೆನಪಿಟ್ಟುಕೊಳ್ಳಬಹುದಾದ ಒಂದು ಕೃತಿಯನ್ನೂ ನೀಡಲಾಗಿಲ್ಲ. (ಈ ಚಳವಳಿ ಆರಂಭವಾಗುವ ಮುನ್ನವೇ ಶ್ರೇಷ್ಠ ಕೃತಿಗಳನ್ನು ಬರೆದ ಕೆಲ ಲೇಖಕರನ್ನು-ಉದಾ: ದೇವನೂರ ಮಹಾದೇವ ಮತ್ತು ಸಿದ್ದಲಿಂಗಯ್ಯ-ಇವುಗಳ ವ್ಯಾಪ್ತಿಗೆ ಸೇರಿಸಿಕೊಂಡು ಇವುಗಳ ಮರ್ಯಾದೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆಯಾದರೂ!) ಒಂದು ಕಾಲದಲ್ಲಿ ನಾವೆಲ್ಲ ಗೌರವಿಸುತ್ತಿದ್ದ ನಿಜವಾದ ಸಾಹಿತಿಯೇ ಆಗಿದ್ದ ಚಂಪಾ, ಬಂಡಾಯ ಸಾಹಿತ್ಯ “ಸಂಘಟನೆ’ಯ ರಾಜಕಾರಣದಲ್ಲಿ ಜನಪ್ರಿಯ ನಾಯಕತ್ವದ ಹಪಾಹಪಿಗೆ ಬಿದ್ದು ಅಂತಿಮವಾಗಿ ಹೀಗೆ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅದರ ಮರ್ಯಾದೆಗೆ ಭಂಗ ತರುವ ಹಂತ ತಲುಪಿದ್ದಾರೆ. ಇದು ನಿಜವಾದ ಸಾಹಿತ್ಯದ ದುರಂತ. 

ಚಂಪಾ ಕನ್ನಡಕ್ಕೆ ಸಂಬಂಧಪಟ್ಟ ಜ್ವಲಂತ ಸಮಸ್ಯೆಯಾದ ಕನ್ನಡ ಮಾಧ್ಯಮದ ಬಗ್ಗೆಯೂ ತಮ್ಮ ಭಾಷಣದಲ್ಲಿ ವಿವರವಾಗಿ ಮಾತಾ ಡಿದ್ದಾರೆ. ಇದನ್ನೆಲ್ಲ ಇವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣಕ್ಕೆಂದೇ ಮೀಸಲಾಗಿಟ್ಟುಕೊಂಡು ಈವರೆಗೆ ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದರೆ? ಇವರೇಕೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನಂತರದ ದಿನಗಳಲ್ಲಿ ಈ ಬಗ್ಗೆ ಒಂದೂ ಸೊಲ್ಲೆತ್ತಿಲ್ಲ? ಸರಕಾರ ನಾಡು-ನುಡಿಗಳಿಗೆ ಸಂಬಂಧಿಸಿದಂತೆ ಕರೆಯುವ ಸಭೆಗಳಿಗೆ ಸದಾ ಹಾಜರಾಗುವ ಇವರು ಇಂತಹ ಸಭೆಗಳಲ್ಲಿ ಕನ್ನಡ ಮಾಧ್ಯಮ ಜಾರಿಗೆ ತರುವ ತುರ್ತಿನ ಬಗ್ಗೆ ಎಷ್ಟು ಬಾರಿ ಮಾತಾಡಿದ್ದಾರೆ? ಅವರೇ ಒಮ್ಮೆ ಹೇಳಿಕೊಂಡಂತೆ, ಅವರು ಕನ್ನಡದ ನಿರಂತರ ಹೋರಾಟಗಾರರು. ಇವರ ಈ ಹೋರಾಟದ ನಿರಂತರತೆಗೆ ಕನ್ನಡದ ಸಮಸ್ಯೆಗಳು ಉಳಿದು ಬೆಳೆಯಬೇಕಿವೆ!

ಈ ಸಂಬಂಧದಲ್ಲಿ ಇದೆಲ್ಲದಕ್ಕಿಂತ ಕೆಟ್ಟ ಸುದ್ದಿಯೆಂದರೆ, ಸಮ್ಮೇಳನದ ಸಮಾರೋಪದ ಮಾತುಗಳನ್ನಾಡಿದ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರು ಚಂಪಾ ಅವರ ರಾಜಕೀಯ ಭಾಷಣವನ್ನು ಸಮರ್ಥಿಸಿರುವುದು. 

(ಮುಕ್ತ ಚರ್ಚೆಗೆ ಆಹ್ವಾನ. ಇತ್ತೀಚೆಗೆ ತೆರೆಕಂಡ 83ನೇ ಕನ್ನಡ ಸಾಹಿತ್ಯ ಸಮ್ಮೇಳನ “ಸಾಹಿತ್ಯ ರಾಜಕಾರಣ’ದ ಮರುಜಿಜ್ಞಾಸೆಗೆ ಕಾರಣವಾಗಿದೆ. ಸಾಹಿತ್ಯಕ್ಕೆ ರಾಜಕಾರಣ ಅನಿವಾರ್ಯವೇ? ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ)

ಡಿ.ಎಸ್‌. ನಾಗಭೂಷಣ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.