CONNECT WITH US  

ತರಕಾರಿ ಸಹಕಾರಿ: ಬದನೆ ಮರೆತು ನಿರಾಶರಾಗಬೇಡಿ

ಪಲ್ಯ, ಚಟ್ನಿ, ಸಾಂಬಾರ್‌, ವಾಂಗಿಬಾತ್‌ - ಹೀಗೆ ತರಹೇವಾರಿ ಪದಾರ್ಥಗಳನ್ನು ಬದನೆಯಲ್ಲಿ ಮಾಡಬಹುದು. ಖಡಕ್‌ ರೊಟ್ಟಿಗೆ ಎಷ್ಟೊಂದು ಪಲ್ಯವಿದ್ದರೂ ಬದನೆಯಿಂದ ತಯಾರಿಸಿದ ಎಣಗಾಯಿ ಇಲ್ಲದಿದ್ದರೆ ಉತ್ತರ ಕರ್ನಾಟಕದ ಮಂದಿಗೆ ಹಿಡಿಸದು. ಧಾರ್ಮಿಕವಾಗಿಯೂ ಬದನೆಗೆ ಮಹತ್ವವಿದೆ. ಉಡುಪಿ ಶ್ರೀ ಕೃಷ್ಣಮಠದಲ್ಲಿ ಮಟ್ಟು ಗುಳ್ಳವಿಲ್ಲದೆ ಪರ್ಯಾಯ ಮಹೋತ್ಸವವೇ ನಡೆಯದಲ್ಲ. ಸೊಲನೆಸ್‌ ಸಸ್ಯ ಕುಟುಂಬಕ್ಕೆ ಸೇರಿದ ಬದನೆ, ಸಾಮಾನ್ಯವಾಗಿ ಹೆಚ್ಚು ಜನ ಬಳಕೆಯಲ್ಲಿರುವಂಥದ್ದು. ತರಕಾರಿ ಹೆಚ್ಚು ಬಳಕೆಯಾಗುವಂಥದ್ದು. ಇದು ಮೂಲತಃ ಭಾರತ ಮತ್ತು ಶ್ರೀಲಂಕಾದಿಂದ ಬಂದದ್ದು. ಬದನೆಕಾಯಿಯನ್ನು ನಂಜು ಎಂದು ಬಳಸದವರೂ ಇದ್ದಾರೆ. ಪ್ರತಿ ತರಕಾರಿಯಲ್ಲೂ ಏನಾದರೂ ಒಂದು ದೋಷವಿರುತ್ತದೆ. ನಾವು ಒಂದು ದೋಷಕ್ಕಾಗಿ ಆ ತರಕಾರಿಯನ್ನೇ ಬಳಸದಿದ್ದರೆ ಅದರಿಂದ ಉಳಿದ 99 ಸತ್ವಗಳನ್ನು ಕಳೆದುಕೊಂಡಂತಾಗುತ್ತದೆ. ಈ ಮಾತು ಬದನೆಗೂ ಅನ್ವಯವಾಗುತ್ತದೆ.

ಬದನೆಯಲ್ಲಿ ದುಂಡನೆಯ, ಉದ್ದ ಮತ್ತು ಸಪೂರ ಬದನೆಯ ಹಲವು ವಿಧದ ತಳಿಗಳಿದ್ದು, ವಿಶ್ವದ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕುಲಾಂತರಿ ಬದನೆ ತಳಿಗಳೂ ಈಗ ಬಳಕೆಯಲ್ಲಿವೆ. ಯಾವುದೇ ಆದರೂ ತರಕಾರಿಗಳು ಸಾವಯವ ಗೊಬ್ಬರದಿಂದ ಬೆಳೆದ ದೇಶೀ ತಳಿಗಳಲ್ಲಿ ಹೆಚ್ಚು ಸಣ್ತೀವಿರುತ್ತದೆ ಎಂಬುದು ಹಿರಿಯರ ಅನುಭವದ ಮಾತು. ಬದನೆಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಹಾಗೂ ಹಲವು ಸಂದರ್ಭಗಳಲ್ಲಿ ಮದ್ದಾಗಿ ಬಳಸುವ ಕ್ರಮವಿದೆ.

ಉಪಯೋಗಗಳು
ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ ಏಟು ಬಿದ್ದ ಗಾಯದ ಮೇಲೆ ಕಟ್ಟಿದರೆ ನೋವು ಕಡಿಮೆಯಾಗುತ್ತದೆ. 

ಮೈ ತುರಿಕೆಯಿಂದ ಕೂಡಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ಅನಂತರ ಸ್ನಾನ ಮಾಡಬೇಕು. 

ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕನಾಗಿ ಕೆಲಸ ಮಾಡುತ್ತವೆ. 

ಬದನೆ ರೋಗ ನಿರೋಧಕ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುತ್ತದೆ.

ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗುವ ಸಿ ಜೀವ ಸತ್ವ ಹೊಂದಿದೆ.

ಕಡು ನೀಲಿ ಬಣ್ಣವಿರುವ ಬದನೆ ದೇಹಕ್ಕೆ ಚೈತನ್ಯ ನೀಡುತ್ತದೆ. ಇದು ಆರೋಗ್ಯಕ್ಕೆ ಉತ್ತಮ. ಮನಸ್ಸನ್ನು ಉಲ್ಲಾಸಗೊಳಿಸಬಲ್ಲದು.

ಉಪ್ಪಿನ ಕಾಯಿಯಲ್ಲಿ ಬದನೆಯನ್ನು ಹುರಿದು ತಿನ್ನುವುದರಿಂದ ಮೂಗಿಗೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆಯಾಗುತ್ತವೆ.

ಬದನೆ ಕಾಯಿ ಮತ್ತು ಟೊಮೊಟೊ ಬಳಸಿ ಸೂಪ್‌ ತಯಾರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಬದನೆ ಕಾಯಿ ಸೇವನೆಯಿಂದ ಆರಂಭಿಕ ಹಂತದ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆ ನಿವಾರಣೆಯಾಗುತ್ತದೆ. 

ಅಂಗೈ ಬೆವರುತ್ತಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಬೇಕು. ಒಂದು ಗಂಟೆ ಬಿಟ್ಟು ಸ್ಥಾನ ಮಾಡಬೇಕು.

ಇಂದು ಹೆಚ್ಚು ಓದಿದ್ದು

Trending videos

Back to Top