ವಿಶ್ವಸಂಗೀತವೆಂಬ ಸುಳ್ಳು ಮತ್ತು ನಂಬಿಕೆ


Team Udayavani, Dec 10, 2017, 6:55 AM IST

nambike.jpg

ಹೀಗೊಂದು ಸಂಗೀತ ಕಛೇರಿಗೆ ನೀವು ಹೋಗುತ್ತೀರಿ. ಅಲ್ಲಿ ಮಂಗೋಲಿಯಾದ ಥ್ರೋಟ್‌ ಸಿಂಗರ್‌ ಅತೀ ಮಂದ್ರದಲ್ಲಿ ಮತ್ತು ಬಲಶಾಲಿಯಾದ ವಿಭಿನ್ನ ತಂತ್ರದಿಂದ ಹಾಡುತ್ತಿರುತ್ತಾನೆ. ಸಾಮಾನ್ಯವಾಗಿ ನಾಲ್ಕೈದು ಸ್ವರಗಳ ಚಲನೆಗಳಷ್ಟೆ ಆ ಕಲಾವಿದನ ಹಾಡಿನಲ್ಲಿರುತ್ತದೆ. ಆತ ಅತೀ ಮಂದ್ರದಲ್ಲಿ ತನ್ನ ಶಕ್ತಿಶಾಲಿಯಾದ ವರ್ಷಗಳ ರಿಯಾಜ್‌ನಿಂದ ಸಿದ್ಧಿಸಿಕೊಂಡ ಆ ಸ್ವರವನ್ನು ಹಚ್ಚಿದ ಕೂಡ‌ಲೇ ಮೊದಲ ಬಾರಿಗೆ ಆ ಬಗೆಯ ಸಂಗೀತವನ್ನು ಕೇಳುವ ಪ್ರೇಕ್ಷಕರೆಲ್ಲ ಬೆಚ್ಚಿಬೀಳುತ್ತಾರೆ. ಈ ಬಗೆಯ ಸಾಧನೆಯೂ ಸಾಧ್ಯವೇ ಎಂದು ಅಚ್ಚರಿಪಡುತ್ತಾರೆ. ಆ ಕಲಾವಿದನ ಪಕ್ಕ ನಮ್ಮ ಕರ್ನಾಟಕ ಸಂಗೀತ ವಯೋಲಿನ್‌ ವಾದಕರೊಬ್ಬರು ಕುಳಿತಿರುತ್ತಾರೆ. ಮಂಗೋಲಿಯಾದ ಆ ಹಾಡುಗಾರನ ಶ್ರುತಿಗೆ ತಮ್ಮ ವಯೋಲಿನ್‌ನ ತಂತಿಗಳನ್ನು ಹೊಂದಿಸಿಕೊಂಡು ಮೂಲ ಹಾಡಿನ ನಾಲ್ಕೇ ಸ್ವರಗಳಿಗೆ ಎಲ್ಲಿಯೂ ಅಪಚಾರವಾಗದಂತೆ ತಮ್ಮ ಮನಸ್ಸಿಗೆ ತೋಚಿದ, ಮತ್ತು ಅದೇ ರಿಯಾಜ್‌ನಿಂದ ಸಿದ್ಧಿಸಿಕೊಂಡ ರಾಗಗಳನ್ನು ನುಡಿಸುತ್ತಾರೆ. ಪಕ್ಕದಲ್ಲಿ ತಾಳವಾದ್ಯದವರು ರಾಗದ ಭಾವಕ್ಕೆ ಮತ್ತು ಛಾಯೆಗೆ ಹೊಂದುವಂತೆ ತಮ್ಮ ವಾದ್ಯಗಳಿಂದ ಸಣ್ಣಪುಟ್ಟ ನಾದಗಳನ್ನು ಹೊರಡಿಸುತ್ತ ತಾಳವಿಲ್ಲದ ಇಂಟ್ರೋ ಅಥವಾ ಆಲಾಪದಂಥ ಸಂದರ್ಭಕ್ಕೆ ಮತ್ತಷ್ಟು ಭಾವವನ್ನು ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ತುಂಬುತ್ತ ಹೋಗುತ್ತಾರೆ. ಅಲ್ಲೇ ಮತ್ತೂಂದು ಬದಿಗೆ ಪ್ರಖ್ಯಾತ ಸ್ಯಾಕೊÕàಫೊನ್‌ ವಾದಕರು ಜಾಜ್‌ ಶೈಲಿಯಲ್ಲಿ ರಾಗ ಅಥವಾ ಸ್ಕೇಲ್‌ ಪದ್ಧತಿಯ ಒಳಗೆ ಮತ್ತು ಹೊರಗೆ ನಿಂತು ಒಟ್ಟಾರೆ ಹೊಮ್ಮುತ್ತಿರುವ ನಾದಕ್ಕೆ ಹೊಸದೊಂದು ಆಯಾಮವನ್ನು ನೀಡುತ್ತಿದ್ದರೆ, ಇತ್ತ ವಯೋಲಿನ್‌ವಾದಕರು ಸಮರ್ಥವಾಗಿ ಜಾಜ್‌ ಸಂಗೀತದ ಆ ಕ್ಷೇತ್ರಕ್ಕೂ ತಮ್ಮ ಸ್ವರವ್ಯಾಪ್ತಿಯನ್ನು ಆಗಾಗ ವಿಸ್ತರಿಸುತ್ತ ಬಳಿಕ ವಾಪಸು ಬಂದು ತಮ್ಮ ಮಿತಿಯಲ್ಲಿ ಮತ್ತಷ್ಟು ವೈಶಿಷ್ಟ್ಯವನ್ನು ಪ್ರದರ್ಶಿಸುತ್ತಾರೆ. ಒಟ್ಟಿನಲ್ಲಿ ಆ ವೇದಿಕೆಯ ಆವರಣದಲ್ಲಿ ಒಂದು ಹೊಸಬಗೆಯ ಸಾಂಗೀತಿಕ ಆಮೋದವು ಸೃಷ್ಟಿಯಾಗುತ್ತಿದೆ. ಅದು ಆ ಹೊತ್ತಿನಲ್ಲಿ ಹುಟ್ಟುವ ಸಂಗೀತ.

ಹಾಗೆ ಗಮನಿಸಿದರೆ ಅಲ್ಲಿ ವೇದಿಕೆಯ ಮೇಲಿರುವ ಪ್ರತೀ ಕಲಾವಿದನೂ ಹಲವಾರು ಕಾರಣಗಳಿಂದ ಭಿನ್ನನಾಗಿರುತ್ತಾನೆ. ಭೌಗೋಳಿಕ, ಭೌತಿಕ, ಸಾಂಸ್ಕೃತಿಕ ಮತ್ತು ಎಲ್ಲಕ್ಕೂ ಮುಖ್ಯವಾಗಿ ಜಗತ್ತಿನ ಯಾವುದೇ ಪ್ರಕಾರದ ಸಂಗೀತವೂ ಮುಖ್ಯವಾಗಿ ಬಯಸುವ ಅಲೌಕಿಕ ಹಿನ್ನೆಲೆ, ಹೀಗೆ ಬಹಳಷ್ಟು ಕಾರಣದಿಂದ ಪ್ರತಿಯೊಬ್ಬ ಕಲಾವಿದನೂ ಭಿನ್ನನಾಗಿರುತ್ತಾನೆ. ತೊಡುವ ಬಟ್ಟೆ , ತಿನ್ನುವ ಆಹಾರ, ಕುಡಿಯುವ ವೈನು ಮತ್ತು ಆಲೋಚನೆಯ ಭಾಷೆ ಹೀಗೆ- ಈ ಎಲ್ಲವೂ ಪ್ರತಿಯೊಬ್ಬ ಕಲಾವಿದನಲ್ಲಿ ಭಿನ್ನವಾಗಿರುತ್ತದೆ. ಇದಕ್ಕೆಲ್ಲ ಮಿಗಿಲಾದದ್ದು ಸಂಗೀತದ ಹಿನ್ನೆಲೆ. ಅಲ್ಲಿ ವೇದಿಕೆಯ ಮೇಲೆ ನಿಂತ ಪ್ರತಿಯೊಬ್ಬ ಕಲಾವಿದನಿಗೂ ತನ್ನದೆ ಆದ ಸಂಗೀತದ ಭಾಷೆಯಿರುತ್ತದೆ ಮತ್ತು ತನ್ನದೇ ಪದ್ಧತಿಯ ಆಲೋಚನಾಪ್ರಕಾರವಿರುತ್ತದೆ. ಇಷ್ಟಾಗಿ ಇದೆಲ್ಲವನ್ನೂ ಮೀರಿ ಅವರೆಲ್ಲ ಅಲ್ಲಿ ಒಟ್ಟಾಗಿ ನಿಂತು ಅದ್ಭುತವೆನ್ನಿಸುವಂಥ ಸಂಗೀತವನ್ನು ಹೊಮ್ಮಿಸಬಲ್ಲರು. ಅಂಥ ಕಛೇರಿಯೊಂದನ್ನು ಮೊದಲ ಬಾರಿ ಕೇಳಿದ ಕೆಲವರಿಗೆ ಈ ಎಲ್ಲ ಕಲಾವಿದರೂ ಬಹುಶಃ ಹಿಂದಿನ ದಿನದ ಸಂಜೆಯೋ ಅಥವಾ ಆ ದಿನದ ಬೆಳಿಗ್ಗೆಯಷ್ಟೆ ಭೆಟ್ಟಿಯಾಗಿರುತ್ತಾರೆ, ಕೆಲವೊಮ್ಮೆ ಅದು ಅವರ ಮೊದಲ ಭೆಟ್ಟಿಯಾಗಿರುತ್ತದೆ ಮತ್ತು ಸಂಜೆಯ ಕಛೇರಿಯ ಸಮಯದವರೆಗೆ ಹೊಟೇಲಿನ ಕೋಣೆಯಲ್ಲಿ ತಮ್ಮ ವಾದ್ಯದ ಅಥವಾ ಸಂಗೀತದ ನಿತ್ಯಾಭ್ಯಾಸವನ್ನು ಮಾಡುತ್ತ ಮಧ್ಯಾಹ್ನದ ನಿ¨ªೆಯಲ್ಲಿ ಸಮಯ ಕಳೆದಿರುತ್ತಾರೆ ಎಂಬುದು ನಿಜಕ್ಕೂ ಗೊತ್ತಿರಲಿಕ್ಕಿಲ್ಲ.  

ಬಗೆಬಗೆಯ ಸಂಗೀತಪ್ರಕಾರಗಳಲ್ಲಿ ಆಸಕ್ತಿಯಿರುವವರು ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಾಶ್‌ ಟ್ಯಾಗ್‌ ಮಾಡಿದ ಡಿಟ್ಟlಛ ಞusಜಿc ಎಂಬ ಪದವನ್ನು ಗಮನಿಸಿರುತ್ತೀರಿ. ಈ ಶಬ್ದದ್ವಯವು ಅದನ್ನು ಬಳಸುವ ಅಥವಾ ಬಳಸಿದ ಕಾರಣದಿಂದಾಗಿ ದ್ವಂದ್ವದಲ್ಲಿ ನಿಂತುಬಿಡುತ್ತದೆ. ಸರಿಯಾಗಿ ಗಮನಿಸಿದರೆ ಯಾವುದೇ ಪ್ರಕಾರದ ಸಂಗೀತವು ತನ್ನ ವ್ಯಾಪ್ತಿಯ ಒಳಗೆ ಮತ್ತು ಹೊರಗೆ ತೋರಿಸುವ ದರ್ಶನಕ್ಕೆ ಮಿತಿ ಅಥವಾ ಸೀಮೆಯೆಂಬುದು ಇಲ್ಲವೇ ಇಲ್ಲ.

ಯುರೋಪಿನ ಹಾರ್ಮೋನಿಯಮ್ಮು ಮತ್ತು ವಯೋಲಿನ್ನುಗಳು ಭಾರತೀಯ ಸಂಗೀತವನ್ನು ಆಕ್ರಮಿಸಿದ್ದಲ್ಲ, ಹಸನುಗೊಳಿಸಿದ್ದು. ಅಂಥ ಬಹಳಷ್ಟು ಉದಾಹರಣೆಗಳನ್ನು ಗಮನದಲ್ಲಿಟ್ಟುಕೊಂಡು ಕಲೆ ಮತ್ತು ಕಲಾವಿದನ ಶಕ್ತಿಯ ಕಾಲ ಮತ್ತು ಪ್ರಯತ್ನದಂಥ ಯಾದೃಚ್ಛಿಕ ವಿಷಯಗಳ ಮುಂದೆ ಸಂಗೀತಪ್ರಕಾರಗಳ ನಡುವಿನ ಎಲ್ಲ ಬಗೆಯ ಗೋಡೆಗಳು ಒಡೆದುಹೋಗುತ್ತವೆ. ಹಾಗೆ ನೋಡಿದರೆ “ವಿಶ್ವಸಂಗೀತ’ ಎಂಬ ಶಬ್ದಪ್ರಯೋಗವೇ ಸರಿಯಲ್ಲ ಎನ್ನಿಸಿಬಿಡುತ್ತದೆ.

ಇನ್ನು “ವಿಶ್ವಸಂಗೀತ’ ಎಂಬ ಶಬ್ದದ ಕುರಿತಾದ ಎರಡನೆಯ ಬಗೆ. ಭಾರತದ ಕಲಾವಿದರೊಬ್ಬರು ಅಮೆರಿಕದಲ್ಲಿ ನಡೆದ ತಮ್ಮ ಶಾಸ್ತ್ರೀಯ ಸಂಗೀತ ಕಛೇರಿಯ ಚಿತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಗೆಳೆಯರ ಹೆಸರಿಗೆ ಸಿಕ್ಕಿಸಿ ಹಂಚುವಾಗ ಕೆಳಗೆ ಹಾಶ್‌ಟ್ಯಾಗ್‌ ಮುಂದೆ “ವಿಶ್ವಸಂಗೀತ’ ಎಂಬ ಶಬ್ದವನ್ನು ಟಂಕಿಸಿರುತ್ತಾರೆ. ಆ ಕಲಾವಿದರು ಇಷ್ಟು ದೂರದಿಂದ ಅಲ್ಲಿಯವರೆಗೆ ಸಂಗೀತದ ಕಾರಣದಿಂದ ಪ್ರಯಾಣಿಸಿದ್ದರಿಂದ ಅವರಿಗೆ ಹಾಗನ್ನಿಸಿರುತ್ತದೆ.

ಮತ್ತೂಂದು ಬಗೆಯದ್ದು, ಮೇಲೆ ಹೇಳಿದಂಥ ಬಗೆಬಗೆಯ ಸಂಗೀತದ ಹಿನ್ನೆಲೆಯ ಕಲಾವಿದರ ಸಮ್ಮಿಲಿತ ಸಂಗೀತ. ಇದನ್ನೂ “ವಿಶ್ವಸಂಗೀತ’ ಎನ್ನುತ್ತಾರೆ. ಹಾಗಿದ್ದರೆ ನಿಜಕ್ಕೂ “ವಿಶ್ವಸಂಗೀತ’ ಎಂದರೇನು ಎಂಬ ಪ್ರಶ್ನೆ ಹುಟ್ಟುತ್ತದಾ ಎಂದು ಕೇಳಿದರೆ ಸಂಗೀತವೇ ವಿಶ್ವ ಎಂದು ಉತ್ತರಿಸುವುದು ಸರಿಯೇನೋ ಎನ್ನಿಸುತ್ತದೆ. ಯಾಕೆಂದರೆ, ಶಾಸ್ತ್ರೀಯ ಸಂಗೀತವನ್ನು ಬೌದ್ಧಿಕ ಸಂಗೀತವನ್ನಾಗಿ ಮಾಡುವ ಅದೇ ಕಲಾವಿದ ಸುಗಮಸಂಗೀತವನ್ನಾಗಿಯೂ ಪರಿವರ್ತಿಸಬಲ್ಲ.

ಸುಗಮಸಂಗೀತದಲ್ಲಿ ಬೌದ್ಧಿಕ ಕಸರತ್ತುಗಳಿಗೆ ಅಲ್ಲಲ್ಲಿ ಜಾಗ ಕೊಟ್ಟು ಯಶಸ್ವಿಯಾಗಬಲ್ಲ ಮತ್ತು ಅಂಥ ಅನಿವಾರ್ಯತೆ ನಮ್ಮಲ್ಲಿ ಜಾಗತೀಕರಣದ ಪ್ರಭಾವದಿಂದ ಅನೇಕ ವೇದಿಕೆಗಳಲ್ಲಿ ಸೃಷ್ಟಿಯಾಗಿಬಿಟ್ಟಿದೆ. ರಿಯಾಲಿಟಿ ಶೋ ಒಂದರಲ್ಲಿ ಮು¨ªಾದ ಪ್ರತಿಭೆಯ ಪುಟಾಣಿಯೊಬ್ಬಳು ಜಾಜ್‌ ಪ್ರಭಾವದ ಕಳ್ಳ ಚಂದಮಾಮನಂಥ ಹಾಡುಗಳನ್ನು ಹಾಡುತ್ತಾಳೆ, ಗಜಲ್‌ ಪ್ರಭಾವದ ತೀವ್ರಭಾವಗೀತೆಯನ್ನೂ ಹಾಡುತ್ತಾಳೆ ಜನಪದ ಗೀತೆಯನ್ನೂ ಹಾಡುತ್ತಾಳೆ. ಹಾಗೆ ಜನಪದ ಗೀತೆಯನ್ನು ಹಾಡುವಾಗ ರಾಜಸ್ಥಾನೀ ಶೈಲಿಯಲ್ಲಿ ಸಣ್ಣದೊಂದು ಆಲಾಪವನ್ನು ತಾರಸಪ್ತಕದಲ್ಲಿ ಝಲಕ್‌ ನಂತೆ ತೋರಿಸಿ ದಂಗುಬಡಿಸುತ್ತಾಳೆ. ಮತ್ತದೇ ಮಗುವಿನ ಫೇಸ್‌ಬುಕ್‌ ಪೇಜಿನಲ್ಲಿ ಆಕೆ ಹಾಡಿದ ಜನಪ್ರಿಯ ಪಾಪ್‌ ಶೈಲಿಯ ಹಾಡೊಂದು ವೈರÇÉಾಗಿರುತ್ತದೆ ಮತ್ತು ಇಂಥ ಅನೇಕ ಉದಾಹರಣೆಗಳು ನಾವು ಇಂದು ಮತ್ತು ಮುಂದಿನ ಸಂಗೀತದ ಜಗತ್ತನ್ನು ಅವಲೋಕಿಸುವ ವಿಧಾನಕ್ಕೆ ಹೊಸ ಆಯಾಮವನ್ನು ನೀಡುತ್ತವೆ.  

ಇಂಥ ಸ್ಥಿತಿಯಲ್ಲಿ ವಿಶ್ವದ ವಿಭಿನ್ನ ಸಂಗೀತ ಪ್ರಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಕೂಡಿಕೊಳ್ಳುವ ವೇಗವು ಹಿಂದಿಗಿಂತ ಪ್ರಖರವಾಗಿ ಸಾಗುತ್ತಿದೆ. ಮತ್ತು ಹೀಗೆ ವಿಶ್ವಸಂಗೀತ ಎಂಬ ಪ್ರಕಾರವೊಂದು ಸದ್ದಿಲ್ಲದೆ ಕಳೆದ ಕೆಲವು ದಶಕಗಳಿಂದ ಮುಂದುವರೆಯುತ್ತಿರುವ  ಟೆಕ್ನಾಲಜಿಯ ಶಕ್ತಿಯಿಂದ ಹದವಾಗಿ ಮೇಳೈಸುತ್ತ ವಿಕಾಸವಾಗುತ್ತಿದೆ ಎಂಬುದು ನಿಜಕ್ಕೂ ಕುತೂಹಲಕಾರಿ.

ಒಂದು  ರಾಬರ್ಟ್‌ ಮುಗಾಬೆಯ ನಂತರ ಜಿಂಬಾಬ್ವೆಯ ಕಲಿಂಬಾ, ಇಂಬೀರದಂಥ ವಾದ್ಯಗಳು ಈ ವಿಶ್ವಸಂಗೀತದ ನಾದೋಪಾಸನೆಗೆ ಹೊಸ ಸಾಧ್ಯತೆಗಳನ್ನೂ ಅವಕಾಶವನ್ನೂ ಕಲ್ಪಿಸಲಿ ಮತ್ತು ಸಂಗೀತವು  ರಂಜನೆಯ ಜೊತೆಗೆ ಬಾಂಧವ್ಯಕ್ಕೂ ಕಾರಣವಾಗಲಿ ಎಂದು ದಕ್ಷಿಣ ಆಫ್ರಿಕಾದ ಗಿಟಾರ್‌ ವಾದಕನೊಬ್ಬ ಇತ್ತೀಚೆಗೆ ನನ್ನೆದುರು ಕಪ್ಪು ಕಾಫಿ ಕುಡಿಯುತ್ತ ಹೇಳಿದಾಗ ಆ ಬಿಳೀ ಹಬೆಯ ಘಮಕ್ಕೆ ನಿಜಕ್ಕೂ ಒಂದು ಹಸನಾದ ಹದವಿತ್ತು!
(ಲೇಖಕರು ಕತೆಗಾರ, ಆಯುರ್ವೇದ ವೈದ್ಯ. ಸಂಗೀತದ ಮೂಲಕ ರೋಗನಿದಾನದ ಸಾಧ್ಯತೆಯ ಪ್ರಯೋಗಗಳನ್ನು ದೇಶ-ವಿದೇಶದ ಹಲವೆಡೆಗಳಲ್ಲಿ ನಡೆಸಿದ್ದಾರೆ)

– ಕಣಾದ ರಾಘವ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.