
Watch Live; ಚಂದಿರನ ಅಂಗಳದಲ್ಲಿ ಇಸ್ರೋ ಐತಿಹಾಸಿಕ ಸಾಧನೆಯ ಹೆಜ್ಜೆ
Team Udayavani, Sep 6, 2019, 6:18 PM IST

ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ 2 ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಜುಲೈ 22ರಂದು ಯಶಸ್ವಿಯಾಗಿ ಉಡ್ಡಯನವಾಗಿತ್ತು. ಇದೀಗ ಇಸ್ರೋದ ಐತಿಹಾಸಿಕ ಸಾಧನೆಯತ್ತ ದಾಪುಗಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವೀಕ್ಷಣೆ ನಡೆಸುತ್ತಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣಿನಿಂದ ಎದುರು ನೋಡುತ್ತಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯಲಿರುವ ನೇರ ಪ್ರಸಾರ ವೀಕ್ಷಿಸಿ…
ಟಾಪ್ ನ್ಯೂಸ್
