Election Commission;ಎಲ್ಲ ಬೂತ್‌ಗಳ ಮಾಹಿತಿ ಪ್ರಕಟ ಅಸಾಧ್ಯ: ಏನಿದು ಫಾರ್ಮ್ 17-ಸಿ?

ಆಯೋಗದ ಹೇಳಿಕೆಗೆ ವಿಪಕ್ಷಗಳು ಆಕ್ಷೇಪ

Team Udayavani, May 24, 2024, 6:45 AM IST

voter

ಹೊಸದಿಲ್ಲಿ: ಮತದಾನ ನಡೆಯುವ ದಿನ ಸಂಪೂರ್ಣ ಮಾಹಿತಿ ಹೊಂದಿರುವ ಫಾರ್ಮ್ 17 ಸಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡ ಬೇಕು ಎಂಬ ಮನವಿಗೆ ಚುನಾವಣ ಆಯೋಗ ವಿರೋಧ ವ್ಯಕ್ತಪಡಿಸಿದೆ. ಇದು ಜನರಲ್ಲಿ ಗೊಂದಲ ಉಂಟು ಮಾಡಬಹುದು ಎಂದು ಹೇಳಿದೆ.

ಮತದಾನದ ಬಳಿಕ ಫಾರ್ಮ್ 17-ಸಿ ಯ ನ್ನು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡುವಂತೆ ಸೂಚಿಸಬೇಕು ಎಂದು ಕೋರಿ ಎಡಿಆರ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಗೆ ಉತ್ತರ ನೀಡಿರುವ ಆಯೋಗ, ಈ ಮಾಹಿತಿ ಹಂಚಿಕೊಳ್ಳಲು ವಿರೋಧ ವ್ಯಕ್ತಪಡಿಸಿದೆ. ಫಾರ್ಮ್ 17-ಸಿಯನ್ನು ಮತಗಟ್ಟೆಯಲ್ಲಿರುವ ಏಜೆಂಟ್‌ಗಳಿಗೆ ನೀಡಲಾಗುತ್ತದೆ. ಅಲ್ಲದೇ ಇದನ್ನು ಎಲ್ಲರಿಗೂ ನೀಡ ಬೇಕು ಎಂಬುದಕ್ಕೆ ಕಾನೂನಿಲ್ಲ. ಅಲ್ಲದೇ ತತ್‌ಕ್ಷಣಕ್ಕೆ ಇದನ್ನು ಬದಲು ಮಾಡುವುದು ಕಷ್ಟವಾಗುತ್ತದೆ. ಕಳೆದ 60 ವರ್ಷಗಳಿಂದ ಇದು ಹೀಗೆಯೇ ನಡೆದುಕೊಂಡು ಬಂದಿದೆ ಎಂದು ಆಯೋಗ ಹೇಳಿದೆ.

ವಿಪಕ್ಷಗಳ ವಿರೋಧ: ಚುನಾವಣ ಆಯೋಗದ ಹೇಳಿಕೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂಬುದನ್ನು ತಿಳಿಸುವ ಮಾಹಿತಿ ಹಂಚಿಕೊಳ್ಳುವುದರಿಂದ ಯಾವ ಸಮಸ್ಯೆ ಉಂಟಾಗಲಿದೆ ಎಂದು ಪ್ರಶ್ನಿಸಿವೆ.

ಏನಿದು ಫಾರ್ಮ್ 17-ಸಿ?
ಮತಗಟ್ಟೆಯಲ್ಲಿ ಎಷ್ಟು ಮಂದಿ ಮತದಾರರು ನೋಂದಣಿಯಾಗಿದ್ದಾರೆ. ಎಷ್ಟು ಮಂದಿ ಮತ ಹಾಕಲು ನಿರಾಕರಿಸಿದ್ದಾರೆ. ಎಷ್ಟು ಮತ ನಿರಾಕರಣೆಯಾಗಿದೆ. ಎಷ್ಟು ಜನ ಮತ ಹಾಕಿದ್ದಾರೆ. ಇವಿಎಂ ಸಂಖ್ಯೆ, ಮತಪತ್ರಗಳ ಪ್ರಮಾಣದ ಮಾಹಿತಿಯನ್ನು ಇದು ಹೊಂದಿ ರುತ್ತದೆ. ಪ್ರತೀ ಮತಗಟ್ಟೆಯಲ್ಲೂ ಮತದಾನ ಮುಗಿದ ಬಳಿಕ ಮತಗಟ್ಟೆ ಅಧಿಕಾರಿ ಸಹಿ ಮಾಡಿ ಇದನ್ನು ಏಜೆಂಟ್‌ಗಳಿಗೆ ನೀಡುತ್ತಾರೆ.

ಆಯೋಗ ಆದೇಶದ ವಿರುದ್ಧ ಚಿದಂಬರಂ ಗರಂ
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣ ಆಯೋಗವು ಕಾಂಗ್ರೆಸ್‌ಗೆ ಆದೇಶಿಸಿದ್ದು ಸರಿಯಲ್ಲ. ಏಕೆಂದರೆ ಸರಕಾರದ ನೀತಿಗಳನ್ನು ಪ್ರಶ್ನಿಸುವುದು ವಿಪಕ್ಷಗಳ ಹಕ್ಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರು ಪ್ರಚಾರದಲ್ಲಿ ಅಗ್ನಿಪಥ ಯೋಜನೆ ರದ್ದುಗೊಳಿಸುವ ಬಗ್ಗೆ ಮಾತನಾಡಿದ್ದಕ್ಕೆ ಬುಧವಾರ ಕಾಂಗ್ರೆಸ್‌ ಅನ್ನು ತರಾ ಟೆಗೆ ತೆಗೆದುಕೊಂಡಿದ್ದ ಆಯೋಗ, ರಕ್ಷಣ ಪಡೆಗಳನ್ನು ರಾಜಕೀಯಗೊಳಿಸಬಾರದು ಎಂದು ಸೂಚಿಸಿತ್ತು. ಇದನ್ನು ತಪ್ಪೆಂದು ಹೇಳಿರುವ ಚಿದಂಬರಂ, “ರಾಜಕೀಕರಣ ಎಂದರೆ ಏನು?. ಸರಕಾರದ ನೀತಿಯನ್ನು ಟೀಕಿಸುವುದು ಮತ್ತು ಅಧಿಕಾರಕ್ಕೆ ಬಂದರೆ ಆ ನೀತಿಯನ್ನು ರದ್ದುಪಡಿಸುತ್ತೇವೆ ಎಂದು ಘೋಷಿಸುವುದು ವಿಪಕ್ಷಗಳ ಹಕ್ಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

1-asasas

G7 Summit: ಇಟಲಿಯಲ್ಲಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

ಬಕ್ರೀದ್ ಹಬ್ಬದ ಹಿನ್ನೆಲೆ: ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?  

ಬಕ್ರೀದ್ ಹಬ್ಬದ ಹಿನ್ನೆಲೆ: ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?  

1-aaaa

RSS ಹಿರಿಯ ನಾಯಕ ಆಕ್ರೋಶ: ರಾಮ ಅಹಂಕಾರಿಗಳನ್ನು 241ಕ್ಕೆ ನಿಲ್ಲಿಸಿದ!

ಬಿಎಸ್ ವೈ

POCSO ಪ್ರಕರಣದಲ್ಲಿ ಬಿಎಸ್ ವೈಗೆ ಬಿಗ್ ರಿಲೀಫ್; ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್

ಬಾಗಿಲು ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ಕಳವು

ಬಾಗಿಲು ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ಕಳವು

Renuka Swamy Case: ದರ್ಶನ್‌, ಗ್ಯಾಂಗ್‌ ಹೊಡೆತ ಭಯಾನಕ-Post Mortem ವರದಿ!

Renuka Swamy Case: ದರ್ಶನ್‌, ಗ್ಯಾಂಗ್‌ ಹೊಡೆತ ಭಯಾನಕ-Post Mortem ವರದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಸಾಲಿಗ್ರಾಮ-ಪಾರಂಪಳಿ ನಡುವಿನ ಸೇತುವೆಗೆ ಮುಕ್ತಿ ಯಾವಾಗ?

ಸಾಲಿಗ್ರಾಮ-ಪಾರಂಪಳಿ ನಡುವಿನ ಸೇತುವೆಗೆ ಮುಕ್ತಿ ಯಾವಾಗ?

1-asasas

G7 Summit: ಇಟಲಿಯಲ್ಲಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

ಉಡುಪಿ ನಗರದೊಳಗೂ ಬಸ್‌ ಸರ್ಕಸ್‌! ಬೆಳಗ್ಗೆ , ಸಂಜೆ ವಿದ್ಯಾರ್ಥಿಗಳ ಗೋಳಾಟ

ಉಡುಪಿ ನಗರದೊಳಗೂ ಬಸ್‌ ಸರ್ಕಸ್‌! ಬೆಳಗ್ಗೆ , ಸಂಜೆ ವಿದ್ಯಾರ್ಥಿಗಳ ಗೋಳಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.