ಕೃಷ್ಯುತ್ಪನ್ನ, ಸಂಸ್ಕರಿತ ಆಹಾರ ವಸ್ತು ರಫ್ತಿನಲ್ಲಿ ಸಾಧನೆ
Team Udayavani, Aug 8, 2022, 6:15 AM IST
ಹೊಸದಿಲ್ಲಿ: ಈ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ಕೃಷ್ಯುತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ವಸ್ತು ಗಳ ರಫ್ತು ಕಳೆದ ವರ್ಷದ ಇದೇ ಅವಧಿ ಗಿಂತ ಶೇ. 31ರಷ್ಟು ಹೆಚ್ಚಳ ಕಂಡಿದೆ.
2022ರ ಎಪ್ರಿಲ್ನಿಂದ ಜೂನ್ ವರೆಗಿನ ಅವಧಿಯಲ್ಲಿ 7.408 ಶತಕೋಟಿ ಡಾಲರ್ ಮೌಲ್ಯದ ಕೃಷ್ಯುತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು 5.663 ಶತಕೋಟಿ ಡಾಲರ್ ಆಗಿತ್ತು ಎಂದು ಅಂಕಿಅಂಶಗಳು ಹೇಳಿವೆ.
ಈ ವರ್ಷ ಈ ಅವಧಿಗೆ 5.890 ಶತಕೋಟಿ ಡಾಲರ್ ಮೌಲ್ಯದ ರಫ್ತು ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಗುರಿ ಮೀರಿದ ಸಾಧನೆ ಮಾಡಲಾಗಿದೆ.
ತಾಜಾ ಹಣ್ಣು ಮತ್ತು ತರಕಾರಿಗಳ ರಫ್ತಿನಲ್ಲಿ ಶೇ. 4ರಷ್ಟು ಹೆಚ್ಚು ಸಾಧನೆ ಮಾಡಲಾಗಿದ್ದರೆ ಸಂಸ್ಕರಿತ ಹಣ್ಣು ಮತ್ತು ತರಕಾರಿಗಳ ನಿರ್ಯಾತದಲ್ಲಿ ಶೇ. 59.71ರ ಪ್ರಗತಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್