ಫಿಲಿಪ್ಸ್ ಕಂಪನಿಯಿಂದ ಮತ್ತೆ 6000 ಉದ್ಯೋಗ ಕಡಿತ
Team Udayavani, Jan 30, 2023, 9:44 PM IST
ದ ಹೇಗ್: ಆರ್ಥಿಕ ನಷ್ಟದಿಂದ ತತ್ತರಿಸಿರುವ ವೈದ್ಯಕೀಯ ಸಾಧನ ತಯಾರಿ ಕಂಪನಿ ಫಿಲಿಪ್ಸ್; ಮತ್ತೆ 6000 ಜನರನ್ನು ಉದ್ಯೋಗದಿಂದ ಕಿತ್ತೂಗೆಯುವುದಾಗಿ ಘೋಷಿಸಿದೆ.
ನಿದ್ರೆಯಲ್ಲಿ ಬಳಸುವ ಉಸಿರಾಟದ ಸಾಧನಗಳು ದೋಷಪೂರಿತವಾಗಿದ್ದರಿಂದ ಅವನ್ನು ಕಂಪನಿ ಹಿಂಪಡೆದಿತ್ತು. ಈ ನಷ್ಟಭರ್ತಿಗೆ ಉದ್ಯೋಗಕಡಿತ ಮಾಡಲು ನಿರ್ಧರಿಸಲಾಗಿದೆ.
ಕೇವಲ 3 ತಿಂಗಳ ಹಿಂದೆ ಇದೇ ಕಂಪನಿ 4000 ಮಂದಿಯನ್ನು ಕೆಲಸದಿಂದ ಕಿತ್ತೂಗೆದಿತ್ತು. 2025ರ ಹೊತ್ತಿಗೆ ಇನ್ನಷ್ಟು ಮಂದಿಯನ್ನು ಕೆಲಸದಿಂದ ತೆಗೆಯುವುದು ಕಂಪನಿ ಉದ್ದೇಶ.
ಈ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ರಾಯ್ ಜೇಕಬ್ಸ್ “2022 ನಮ್ಮ ಪಾಲಿಗೆ ಅತ್ಯಂತ ಕಠಿಣವರ್ಷ. ನಮ್ಮ ಪ್ರದರ್ಶನ ಗುಣಮಟ್ಟ ವೃದ್ಧಿಸಿಕೊಳ್ಳಲು ಕಠಿಣಕ್ರಮ ತೆಗೆದುಕೊಳ್ಳಲೇಬೇಕಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್; ಭಾರತದಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ, ಬೆಲೆ ವಿವರ…
ಅಸಮಾನತೆಗೆ ಅವಕಾಶ ಕೊಡದಿರಿ: ಬ್ಯಾಂಕುಗಳಿಗೆ ಆರ್‌ಬಿಐ ಗವರ್ನರ್ ಎಚ್ಚರಿಕೆ
ಜಾಗತಿಕ ಬೇಡಿಕೆ ಕುಸಿತ: ರಫ್ತು, ವ್ಯಾಪಾರ ಕೊರತೆ ಇಳಿಕೆ