ನೈಜೀರಿಯಾ ನೋಟು ಅಮಾನ್ಯ: ಕುಸಿದ ಬಜಾಜ್ ಆಟೋ ಷೇರು ಮೌಲ್ಯ
Team Udayavani, Feb 28, 2023, 5:50 AM IST
ಅಬುಜ: ನೈಜೀರಿಯಾದಲ್ಲಿ ನೋಟು ಅಮಾನ್ಯ ಜಾರಿಯಾದ ನಂತರ ಭಾರತದ ದ್ವಿಚಕ್ರ ವಾಹನ ತಯಾರಿಕ ಕಂಪನಿ ಬಜಾಜ್ ಆಟೊ ಷೇರುಗಳ ಬೆಲೆ ಸೋಮವಾರ ಶೇ.5.14ರಷ್ಟು ತಗ್ಗಿದೆ.
2022ರ ಅಕ್ಟೋಬರ್ನಲ್ಲಿ ನೈಜೀರಿಯಾದ ಫೆಡರಲ್ ಸರ್ಕಾರ ಮತ್ತು ಸೆಂಟ್ರಲ್ ಬ್ಯಾಂಕ್ ನೋಟು ಅಮಾನ್ಯದ ಘೋಷಣೆ ಮಾಡಿತ್ತು. ಈ ವರ್ಷ ಫೆ.10ರಿಂದ ಇದು ಜಾರಿಗೆ ಬಂದಿತು. ಇದರಿಂದ ಅಲ್ಲಿನ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ.
ರಫ್ತಿಗೆ ಸಂಬಂಧಿಸಿದಂತೆ ಬಜಾಜ್ ಆಟೊಗೆ ನೈಜೀರಿಯಾ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಮುಂದಿನ ತಿಂಗಳಿನಿಂದ ಮೋಟಾರು ಸೈಕಲ್ಗಳು ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆಯನ್ನು ಬಜಾಜ್ ಆಟೊ ತಗ್ಗಿಸುವ ಸಾಧ್ಯತೆಯಿದೆ.
ನೈಜೀರಿಯಾದಲ್ಲಿ ನೋಟು ಅಮಾನ್ಯದಿಂದ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ವಲೂಜ್ ಮತ್ತು ಉತ್ತರಾಖಂಡದ ಪಂತ್ನಗರದಲ್ಲಿರುವ ತನ್ನ ಘಟಕಗಳಲ್ಲಿ ಉತ್ಪಾದನೆಯನ್ನು ತಗ್ಗಿಸಲು ಬಜಾಜ್ ಆಟೊ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.