
ರಘುರಾಮ್ ರಾಜನ್, ಸಿಂಗ್ ಕಾಲದಲ್ಲಿ ಬ್ಯಾಂಕ್ ಸಂಕಷ್ಟ
Team Udayavani, Oct 17, 2019, 5:49 AM IST

ನ್ಯೂಯಾರ್ಕ್: ಆರ್‌ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಮತ್ತು ಪ್ರಧಾನಿ ಯಾಗಿ ಮನಮೋಹನ ಸಿಂಗ್ ಅಧಿಕಾರ ದಲ್ಲಿದ್ದಾಗಲೇ ಸರಕಾರಿ ಸ್ವಾಮ್ಯದ ಕಂಪೆನಿಗಳು ಅತ್ಯಂತ ಸಂಕಷ್ಟದ ದಿನಗಳನ್ನು ಕಳೆದಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದಾಗಿ ಸಂಕಷ್ಟದಲ್ಲಿರುವ ಬ್ಯಾಂಕ್‌ಗಳನ್ನು ರಕ್ಷಿಸುವುದೇ ಈ ಸರಕಾರದ ಆದ್ಯತೆ ಯಾಗಿದೆ ಎಂದಿದ್ದಾರೆ.
ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮರು ಪಾವತಿಯಾಗದ ಸಾಲದ ಸುಳಿಗೆ ಸಿಲುಕಿದ್ದು, ಅವುಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ನಮ್ಮ ಸರಕಾರ ನಡೆಸಿದೆ ಎಂದು ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಉಪನ್ಯಾಸದ ವೇಳೆ ಹೇಳಿದ್ದಾರೆ. ಈಗ ಬ್ಯಾಂಕ್‌ಗಳು ಇರುವ ಸ್ಥಿತಿ ರಾತ್ರಿ ಬೆಳಗಾಗುವುದರೊಳಗೆ ಉಂಟಾ ದದ್ದಲ್ಲ. ಇದು ಹಲವು ವರ್ಷಗಳಿಂದ ಉಂಟಾದ ಪರಿಸ್ಥಿತಿ. ನನಗೆ ರಘುರಾಮ್ ರಾಜನ್ ಕುರಿತು ಗೌರವವಿದೆ. ಆದರೆ, ಅವರ ಅವಧಿಯಲ್ಲಿ ಬ್ಯಾಂಕ್‌ಗಳು ರಾಜಕೀಯ ಮುಖಂಡರ ದೂರವಾಣಿ ಕರೆಯನ್ನು ಆಧರಿಸಿ ಸಾಲ ನೀಡಿವೆ. ಹೀಗಾಗಿ ಈಗಲೂ ಸರಕಾರದ ಹಣವನ್ನೇ ಈ ಬ್ಯಾಂಕ್‌ಗಳು ನಂಬಿಕೊಂಡಿವೆ ಎಂದಿದ್ದಾರೆ.
370ನೇ ವಿಧಿಯಿಂದ ಮಾನವ ಹಕ್ಕು ಉಲ್ಲಂಘನೆ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಅನಂತರ ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಕೇಳಿಬರುತ್ತಿವೆ. ಆದರೆ 370ನೇ ವಿಧಿಯೇ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿತ್ತು. ಈ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಟಾಪ್ ನ್ಯೂಸ್
