ಮುಂಬಯಿ ಶೇರು ಭರ್ಜರಿ 346 ಅಂಕ ಏರಿಕೆ, ಮತ್ತೆ 33,000 ಮಟ್ಟ
Team Udayavani, Nov 16, 2017, 4:54 PM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 346.38 ಅಂಕಗಳ ಭರ್ಜರಿ ಏರಿಕೆಯೊಂದಿಗೆ 33,106.82 ಅಂಕಗಳ ಮಟ್ಟದಲ್ಲಿ ದೃಢತೆಯೊಂದಿಗೆ ಕೊನೆಗೊಳಿಸಿದೆ. ಇದು ವಾರದ ಗರಿಷ್ಠ ಮಟ್ಟವಾಗಿ ದಾಖಲಾಗಿದೆ.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ನಿರಂತರ ಸೋಲನ್ನು ಕಾಣುತ್ತ ಒಟ್ಟು 554.12 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಭರ್ಜರಿ ಏರಿಕೆಯನ್ನು ದಾಖಲಿಸಿ 33,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್ ಸಂಪಾದಿಸಿರುವುದು ಅತ್ಯಂತ ವಿಶೇಷ ಎನಿಸಿತು.
ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣ ಇಂದು ಶೇರುಗಳು ವಿಜೃಂಭಿಸಿದವು. ಇವುಗಳಲ್ಲಿ ರಿಲಯನ್ಸ್ ಶೇರು ರಾಲಿಯ ನೇತೃತ್ವ ವಹಿಸಿತು. ಇನ್ಫೋಸಿಸ್ ಕೂಡ ಭರ್ಜರಿ ಏರಿಕೆಯನ್ನು ದಾಖಲಿಸಿತು.
ಸೆನ್ಸೆಕ್ಸ್ ನಂತೆ ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ ಕೂಡ ಇಂದು ವಿಜೃಂಭಿಸಿತು. 96.70 ಅಂಕಗಳ ಏರಿಕೆಯೊಂದಿಗೆ ನಿಫ್ಟಿ ದಿನದ ವಹಿವಾಟನ್ನು 10,232.25 ಅಂಕಗಳ ಮಟ್ಟದಲ್ಲಿ ಹೊಸ ವಿಶ್ವಾಸದೊಂದಿಗೆ ಕೊನೆಗೊಳಿಸಿತು.
ಜಾಗತಿಕ ಶೇರು ಪೇಟೆಯಲ್ಲಿನ ಸ್ಥಿರತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮೌಲ್ಯಯುತ ಮುಂಚೂಣಿ ಶೇರುಗಳ ಭರಾಟೆಯ ಖರೀದಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ