
ಅಸಮಾನತೆಗೆ ಅವಕಾಶ ಕೊಡದಿರಿ: ಬ್ಯಾಂಕುಗಳಿಗೆ ಆರ್‌ಬಿಐ ಗವರ್ನರ್ ಎಚ್ಚರಿಕೆ
Team Udayavani, Mar 18, 2023, 6:49 AM IST

ಮುಂಬೈ: ಹಣಕಾಸು ವ್ಯವಸ್ಥೆ ಸ್ಥಿರವಾಗಿರಬೇಕೆಂದರೆ ಆಸ್ತಿ ಮತ್ತು ಬಾಧ್ಯತೆಯ ನಡುವೆ ಅಸಮಾನತೆ ಹೆಚ್ಚಾಗದಂತೆ ನೋಡಿಕೊಳ್ಳಿ ಎಂದು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸೂಚನೆ ನೀಡಿದ್ದಾರೆ.
ಅಲ್ಲದೆ, ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಈ ರೀತಿಯ ಅಸಮಾನತೆಯೇ ಕಾರಣವಾಗಿರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದ ಹಣಕಾಸು ವಲಯ ಸ್ಥಿರವಾಗಿದೆ. ನಾವು ಯಾವುದೇ ರೀತಿಯಲ್ಲೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಜತೆಗೆ, ಯಾವುದೇ ಹಣಕಾಸು ವ್ಯವಸ್ಥೆಗೆ ಖಾಸಗಿ ಕ್ರಿಪ್ಟೋಕರೆನ್ಸಿಗಳು ಎಂಥ ಅಪಾಯ ತಂದೊಡ್ಡಬಲ್ಲದು ಎಂಬುದಕ್ಕೂ ಅಮೆರಿಕದಲ್ಲಿನ ಬಿಕ್ಕಟ್ಟೇ ಸಾಕ್ಷಿ ಎಂದೂ ದಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LPG Cylinder; ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ…

ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

ಆರಂಭಿಕ ವಹಿವಾಟಿನಲ್ಲಿ… ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 340 ಅಂಕ ಇಳಿಕೆ, ನಿಫ್ಟಿ ಕುಸಿತ

Foreign Fund: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 131 ಅಂಕ ಏರಿಕೆ, ನಿಫ್ಟಿಯೂ ಜಿಗಿತ

Stock Market; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ; 63,000 ಅಂಕಗಳ ದಾಖಲೆ ಮಟ್ಟ