ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

Team Udayavani, Jun 1, 2023, 7:12 AM IST

ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆ ಸ್ಥಿರವಾಗಿದೆ ಮತ್ತು ಬೆಳವಣಿಗೆ ಸಾಧಿಸುತ್ತಿದೆ ಎಂಬುದಕ್ಕೆ ಮತ್ತೂಂದು ದಾಖಲೆ ಲಭ್ಯವಾಗಿದೆ. ಕಳೆದ ವಿತ್ತೀಯ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.6.1ರ ಬೆಳವಣಿಗೆ ಸಾಧಿಸಿದೆ. ಹೀಗಾಗಿ ನಾಲ್ಕೂ ತ್ತೈಮಾಸಿಕಗಳ ಲೆಕ್ಕಾಚಾರದಲ್ಲಿ ಒಟ್ಟಾರೆಯಾಗಿ ದೇಶದ ಜಿಡಿಪಿ ದರ ಶೇ.7.2 ನಿರೀಕ್ಷಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಭಾರತವೇ ಪ್ರಥಮ ಎಂಬ ಹೆಗ್ಗಳಿಕೆಯೂ ಲಭಿಸಿದೆ.

ಕೇಂದ್ರ ಸರಕಾರದ ಸಾಂಖಿಕ ಮತ್ತು ಯೋಜನೆಗಳ ಅನುಷ್ಠಾನ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ದತ್ತಾಂಶಗಳಲ್ಲಿ ಈ ವಿಷಯ ಸ್ಪಷ್ಟವಾಗಿದೆ. 2021-22ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈ ಜಿಡಿಪಿ ಪ್ರಮಾಣ ತುಸು ಕಡಿಮೆಯೇ. ಆಗ ಶೇ.9.1ರಷ್ಟು ಜಿಡಿಪಿ ದರ ದಾಖಲಾಗಿತ್ತು.

ಕೃಷಿ, ಉತ್ಪಾದನೆ ಕ್ಷೇತ್ರ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳ ಉತ್ತಮ ಸಾಧನೆಯಿಂದ 2022-23ನೇ ಸಾಲಿನ ವಿತ್ತ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ತೃಪ್ತಿದಾಯಕ ಸಾಧನೆ ಮಾಡಲಾಗಿದೆ. ಆರ್‌ಬಿಐ ನೀಡಿದ್ದ ಆರ್ಥಿಕ ಮುನ್ನೋಟದಲ್ಲಿ ಕಳೆದ ವಿತ್ತೀಯ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ಶೇ.5.1, ಎಸ್‌ಬಿಐ ಸಂಶೋಧನ ಕೇಂದ್ರದ ಪ್ರಕಾರ ಶೇ.5.5ರ ದರಲ್ಲಿ ಜಿಡಿಪಿ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಮೌಲ್ಯದ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 2022-23ನೇ ಸಾಲಿನ ವಿತ್ತೀಯ ವರ್ಷದಲ್ಲಿ 160.06 ಲಕ್ಷ ಕೋಟಿ ರೂ. 2021-22ನೇ ಸಾಲಿನಲ್ಲಿ ಅದರ ಮೌಲ್ಯ 149.26 ಲಕ್ಷ ಕೋಟಿ ರೂ. ಆಗಿತ್ತು. ಇದೇ ವೇಳೆ, ಆರ್‌ ಬಿಐ ನೀಡಿದ್ದ ಅಂದಾಜು ಲೆಕ್ಕಾಚಾರವನ್ನೂ ಮೀರಿ ಭಾರತದ ಜಿಡಿಪಿ ಶೇ.7.2ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕೇಂದ್ರ ಸರಕಾರದ ವರದಿ ಹೇಳಿದೆ. ಆರ್‌ ಬಿಐ ಶೇ.7ರಷ್ಟು ಬೆಳವಣಿಗೆಯಾಗಬಹುದು ಎಂದು ಹೇಳಿತ್ತು.

ಹಿಂದಿನ ತ್ತೈಮಾಸಿಕಗಳಲ್ಲಿ
2022ರ ಜುಲೈ-ಸೆಪ್ಟಂಬರ್‌ನಲ್ಲಿ ಶೇ.6.2, ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಶೇ.4.5ರ ಪ್ರಮಾಣದಲ್ಲಿ ಅರ್ಥ ವ್ಯವಸ್ಥೆ ವೃದ್ಧಿಯಾಗಿತ್ತು. ರಾಷ್ಟ್ರೀಯ ಸಾಂಖೀÂಕ ಸಂಸ್ಥೆ ನೀಡಿದ್ದ ಮಾಹಿತಿಯಂತೆ 2022ರ ಎಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ ಅರ್ಥ ವ್ಯವಸ್ಥೆ ಬೆಳವಣಿಗೆ ಶೇ.13.1 ದಾಖಲಾಗಿತ್ತು. 2021  -22ನೇ ಸಾಲಿನ ಕೊನೆಯ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಶೇ.4 ಆಗಿತ್ತು.

ಚೇತರಿಕೆಯ ಹಾದಿಯಲ್ಲಿ
ಕೊರೊನಾ ಹಾವಳಿ ತಗ್ಗಿದ ಬಳಿಕ ಸೇವಾ ಕ್ಷೇತ್ರದಲ್ಲಿ ನಿಧಾನಕ್ಕೆ ಚೇತರಿಕೆ ಕಂಡುಬಂದಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜಿಡಿಪಿ ಮತ್ತು ಅರ್ಥ ವ್ಯವಸ್ಥೆಗೆ ಗಣನೀಯ ಕೊಡುಗೆ ಉಂಟಾಗಿದೆ. ಜತೆಗೆ ಖಾಸಗಿಯಾಗಿ ಜನರು ಮಾಡುವ ವೆಚ್ಚಯೂ ನೆರವಾಗಿದೆ.

ಜಿಡಿಪಿ ಮಾಹಿತಿ
ಯಿಂದ ದೇಶದ ಅರ್ಥ ವ್ಯವಸ್ಥೆ ದೃಢವಾಗಿದೆ ಎನ್ನುವುದು ಸಾಬೀತಾಗಿದೆ. ಜನರ ದೃಢವಾದ ಬೆಂಬಲ ಮತ್ತು ಅರ್ಥ ವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯೇ ಇದಕ್ಕೆ ಕಾರಣ.

– ನರೇಂದ್ರ ಮೋದಿ, ಪ್ರಧಾನಮಂತ್ರಿ

ಟಾಪ್ ನ್ಯೂಸ್

ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

M.P Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

3-hosapete

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

stock market down

Stock Market: ಷೇರುಪೇಟೆ ಹೂಡಿಕೆದಾರರಿಗೆ 5.50 ಲಕ್ಷ ಕೋಟಿ ರೂ. ನಷ್ಟ

United Kingdom: ಅಕ್ಟೋಬರ್‌ ನಿಂದ ಸ್ಟೂಡೆಂಟ್‌ ವೀಸಾ ಶುಲ್ಕ ಏರಿಕೆ: ಬ್ರಿಟನ್‌

United Kingdom: ಅಕ್ಟೋಬರ್‌ ನಿಂದ ಸ್ಟೂಡೆಂಟ್‌ ವೀಸಾ ಶುಲ್ಕ ಏರಿಕೆ: ಬ್ರಿಟನ್‌

TIMEನಿಂದ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿ ಬಿಡುಗಡೆ…ಭಾರತದ ಒಂದೇ ಕಂಪನಿಗೆ ಸ್ಥಾನ!

TIMEನಿಂದ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿ ಬಿಡುಗಡೆ…ಭಾರತದ ಒಂದೇ ಕಂಪನಿಗೆ ಸ್ಥಾನ!

Bank of Barodaದಿಂದ ಭರ್ಜರಿ ಫೆಸ್ಟಿವ್ ಆಫರ್ -‘BOB’ ಸಂಗ್ ತ್ಯೋಹಾರ್ ಕಿ ಉಮಂಗ್’

Bank of Barodaದಿಂದ ಭರ್ಜರಿ ಫೆಸ್ಟಿವ್ ಆಫರ್ -‘BOB’ ಸಂಗ್ ತ್ಯೋಹಾರ್ ಕಿ ಉಮಂಗ್’

Cash On Delivery ವೇಳೆ ಈ…ದಿನಾಂಕದಿಂದ 2000 ಮುಖಬೆಲೆಯ ನೋಟನ್ನು ಸ್ವೀಕರಿಸಲ್ಲ: ಅಮೆಜಾನ್

Cash On Delivery ವೇಳೆ ಈ…ದಿನಾಂಕದಿಂದ 2000 ಮುಖಬೆಲೆಯ ನೋಟನ್ನು ಸ್ವೀಕರಿಸಲ್ಲ: ಅಮೆಜಾನ್

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

M.P Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

3-hosapete

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.