ಜಿಎಸ್‌ಟಿ ಎಫೆಕ್ಟ್; ಈ ಕಾರುಗಳ ಬೆಲೆ 90 ಸಾವಿರ ರೂ. ವರೆಗೆ ಇಳಿಕೆ !

Team Udayavani, Aug 3, 2019, 5:28 PM IST

ಮುಂಬಯಿ: ಎಲೆಕ್ಟ್ರಿಕ್‌ ಕಾರುಗಳ ಖರೀದಿಯನ್ನು ಹೆಚ್ಚು ಹೆಚ್ಚು ಉತ್ತೇಜಿಸಲು ಮುಂದಾಗಿರುವ ಕೇಂದ್ರ ಸರಕಾರ ಈಗಾಗಲೇ ಎಲೆಕ್ಟ್ರಿಕ್‌ ಕಾರುಗಳ ಮೇಲಿನ ಸುಂಕಗಳನ್ನು ಕಡಿಮೆಗೊಳಿಸಿದ್ದಲ್ಲದೆ ಜಿಎಸ್‌ಟಿ ದರವನ್ನೂ ಶೇ.12ರಿಂದ ಶೇ.5ರಷ್ಟಕ್ಕೆ ಇಳಿಸಿದೆ. ಇದರೊಂದಿಗೆ ಸಾಂಪ್ರದಾಯಿಕ ಕಾರುಗಳ ಮೇಲಿನ ನೋಂದಣಿ ಶುಲ್ಕವನ್ನು ಹೆಚ್ಚಿಸುವ ಬಗ್ಗೆಯೂ ಆಲೋಚನೆ ಮಾಡುತ್ತಿದೆ. ಸದ್ಯ ಎಲೆಕ್ಟ್ರಿಕ್‌ ಕಾರುಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಿಂದಾಗಿ ಕಾರುಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಇವುಗಳಲ್ಲಿ ಗರಿಷ್ಠ ಎಂದರೆ ಹ್ಯುಂಡೈ ಕೋನಾ ಕಾರಿನ ಬೆಲೆ 1.58 ಲಕ್ಷ ರೂ.ವರೆಗೆ ಕಡಿತವಾಗಲಿದೆ.

ಯಾವೆಲ್ಲ ಕಾರುಗಳು?

ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪೆನಿಯ ಇ ವೆರಿಟೋ, ಇ2ಒ, ಟಾಟಾ ಮೋಟರ್ಸ್ ನ ಟೈಗೋರ್‌ ಇವಿ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿವೆ. ಇವುಗಳ ಮಾದರಿಗೆ ಅನುಗುಣವಾಗಿ ಕಾರುಗಳ ಬೆಲೆ ಸುಮಾರು 13 ಲಕ್ಷ ರೂ.ವರೆಗೆ ಇದ್ದು ಜಿಎಸ್‌ಟಿ ದರ ಇಳಿಕೆಯಿಂದಾಗಿ 80 ಸಾವಿರ ರೂ.ಗಳಿಂದ 90 ಸಾವಿರ ರೂ.ಗಳ ವರೆಗೆ ಬೆಲೆ ಇಳಿಕೆಯಾಗಿದೆ. ಎಫ್ಎಎಮ್‌ಇ (ಫೇಮ್‌ ಸ್ಕೀಂ- ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆ, ಮಾರಾಟ ಉತ್ತೇಜನ ಯೋಜನೆ) ಅನ್ವಯ ಗುರುತಿಸಲ್ಪಟ್ಟ ಕಂಪೆನಿಗಳ ವಾಹನಗಳಿಗೆ ಜಿಎಸ್‌ಟಿ ದರ ಕಡಿತ ಅನ್ವಯಿಸಲಿದೆ. ಜತೆಗೆ ಫೇಮ್‌ ದರ ಕಡಿತವೂ ಹೆಚ್ಚುವರಿಯಾಗಿ ಲಭ್ಯವಾಗಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆಯೂ ಇಳಿಕೆ

ಜಿಎಸ್‌ಟಿ ದರ ಕಾರಣ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆಯೂ ಇಳಿಕೆಯಾಗಿದೆ. 9 ಸಾವಿರ ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆ ಕಂಡ ಸ್ಕೂಟರ್‌ಗಳಲ್ಲಿ ಏಥರ್‌ ಎನರ್ಜಿ ಸ್ಕೂಟರ್‌ಗಳು, ಓಕಿನಾವಾ ಕಂಪೆನಿಯ ಸ್ಕೂಟರ್‌ಗಳು, ಆ್ಯಂಪರ್‌ ಕಂಪೆನಿ, ಏವಾನ್‌, ಹೀರೋ, ಲೋಹಿಯಾ ಇತ್ಯಾದಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿಗಳ ವಿವಿಧ ಮಾಡೆಲ್‌ಗ‌ಳ ದರವೂ ಇಳಿಕೆಯಾಗಲಿದೆ.

ಆ.1ರಿಂದ ಅನ್ವಯ

ಎಲೆಕ್ಟ್ರಿಕ್‌ ವಾಹನಗಳ ಮೇಲಿನ ಜಿಎಸ್‌ಟಿ ದರ ಆ.1ರಿಂದ ಇಳಿಕೆಯಾಗಲಿದೆ. ಈ ದರ ಕಡಿತದಿಂದಾಗಿ ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ಉತ್ತೇಜನ ಸಿಗಲಿದೆ ಎಂಬ ಆಶಾವಾದ ಸರಕಾರದ್ದಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ನೋಂದಣಿ ಶುಲ್ಕ ರದ್ದು ಇತ್ಯಾದಿ ಕ್ರಮಗಳನ್ನು ಸರಕಾರ ಘೋಷಿಸುವ ಸಾಧ್ಯತೆಯೂ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ...

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...

  • ಸಾಸ್ತಾನ ಸಮೀಪದ ಮೂಡಹಡು ಹಾಗೂ ಗುಂಡ್ಮಿ ಗ್ರಾಮಗಳ ಹೈನುಗಾರರ ಸಂಸ್ಥೆಯಾಗಿರುವ ಚೇಂಪಿ ಹಾಲು ಉತ್ಪಾದಕರ ಸಂಘ ಸಣ್ಣ ವ್ಯಾಪ್ತಿಯನ್ನು ಹೊಂದಿದ್ದರೂ ಕೋಟ ಹೋಬಳಿಯಲ್ಲಿ...

  • ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌...

  • ಎಲ್ಲಿ ನಗರಗಳಿರುತ್ತವೆಯೋ ಅಲ್ಲಿ ಸ್ಲಂಗಳು ಇದ್ದೇ ಇರುತ್ತವೆ. ಸ್ಲಂ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದೇ ಅಲ್ಲಿನ ಕೊಳಚೆ ಪ್ರದೇಶ, ಮೂಲ ಸೌಕರ್ಯಗಳ ಕೊರತೆ,...