
ನಿಮಿಷಗಳಲ್ಲಿ ಡಿಜಿಟಲ್ ಪಾನ್‌ಕಾರ್ಡ್ ಸಿಗುತ್ತೆ
ಕೇಂದ್ರ ಸರ್ಕಾರದಿಂದ ಅತ್ಯಂತ ಸುಲಭದಲ್ಲಿ ಪಾನ್‌ಕಾರ್ಡ್ ಪಡೆಯಲು ಆನ್‌ಲೈನ್ ಮಾರ್ಗ
Team Udayavani, May 31, 2020, 9:12 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಶಾಶ್ವತ ಖಾತೆ ಸಂಖ್ಯೆ ಇದನ್ನು ಚಿಕ್ಕದಾಗಿ ಹೇಳುವುದಾದರೆ ಪಾನ್ ಕಾರ್ಡ್. ಭಾರತ ಸರ್ಕಾರ ಈ ಸಂಖ್ಯೆಯನ್ನು ಅರ್ಜಿ ಹಾಕಿದ ಎಲ್ಲ ಭಾರತೀಯರಿಗೆ ನೀಡುತ್ತದೆ. ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರೆಲ್ಲರಿಗೂ ಇದು ಬೇಕೇ ಬೇಕು. ತೆರಿಗೆ ಪಾವತಿ ಮಾಡುವವರಿಗಂತೂ ಇದು ಕಡ್ಡಾಯ. ಈ ಹಿಂದೆ ಈ ಸಂಖ್ಯೆ ಪಡೆಯುವುದು ತುಸು ಕಷ್ಟವಾಗಿತ್ತು. ಇದೀಗ ಕೆಲವೇ ನಿಮಿಷಗಳಲ್ಲಿ ಪಾನ್ ಸಂಖ್ಯೆಯನ್ನು ಡಿಜಿಟಲ್ ಮಾರ್ಗದಲ್ಲಿ ಪಡೆಯಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ. ಏನಿದು ಡಿಜಿಟಲ್ ಮಾರ್ಗ, ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.
ಡಿಜಿಟಲೀಕರಣದ ಇನ್ನೊಂದು ಹೆಜ್ಜೆ
ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಪ್ರತಿಯೊಂದನ್ನೂ ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡುತ್ತಿದೆ. ಅಂದರೆ ಆನ್‌ಲೈನ್ ಮೂಲಕವೇ ಯಾವುದನ್ನೇ ಆದರೂ ಪಡೆಯುವುದು. ಆಧಾರ್ ಕಾರ್ಡ್‌ನಿಂದ ಹಿಡಿದು, ಪಾನ್‌ಕಾರ್ಡ್‌ವರೆಗೆ ಈಗ ಆನ್‌ಲೈನ್ ಮೂಲಕವೇ ಪಡೆದುಕೊಳ್ಳಲು ಸಾಧ್ಯವಿದೆ. ಪಾನ್‌ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಪಡೆಯುವುದು, ಕೇಂದ್ರದ ಅತ್ಯಂತ ಮಹತ್ವದ ಹೆಜ್ಜೆ.
ಮೇ 28ರಿಂದ ಅಧಿಕೃತ ಆರಂಭ
ಪಾನ್‌ಕಾರ್ಡ್ ಅನ್ನೂ ಡಿಜಿಟಲ್ ರೂಪದಲ್ಲಿ ನೀಡಲಾಗುವುದು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಮುಂಗಡಪತ್ರದಲ್ಲೇ ತಿಳಿಸಿದ್ದರು. ಆದರೆ ಫೆ.20ರಿಂದಲೇ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ವೆಬ್‌ಸೈಟ್‌ನಲ್ಲಿ ಪಾನ್‌ಕಾರ್ಡ್ ಪಡೆಯುವ ಪ್ರಾಯೋಗಿಕ ಆವೃತ್ತಿ ಲಭ್ಯವಿತ್ತು. ಮೇ 28ರಿಂದ ಈ ವ್ಯವಸ್ಥೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ.
ಏನೇನು ಬೇಕು?
ಕೇಂದ್ರಸರ್ಕಾರ ಈಗಾಗಲೇ ಡಿಜಿಟಲ್ ಪಾನ್ ಪಡೆಯಲು ಇ-ಕೆವೈಸಿ ಎಂಬ ವ್ಯವಸ್ಥೆಯನ್ನು ಜಾರಿ ಮಾಡಿದೆ. ನಿಮ್ಮ ಬಳಿ ಆಧಾರ್ ಸಂಖ್ಯೆ ಹಾಗೂ ಆಧಾರ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆ ಇದ್ದರೆ, ಡಿಜಿಟಲ್ ಪಾನ್ ಪಡೆಯಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ; 63,000 ಅಂಕಗಳ ದಾಖಲೆ ಮಟ್ಟ

2,000 notes ಹಿಂಪಡೆಯುವಿಕೆಯ ಪ್ರಕ್ರಿಯೆ ಸಮಸ್ಯೆಗೆ ಎಡೆಮಾಡಿಕೊಡುವುದಿಲ್ಲ

Lucknow: ಹಲವೆಡೆ 2,000 ರೂ. ನೋಟು ಸ್ವೀಕರಿಸಲು ನಕಾರ, ಚಿನ್ನ ಖರೀದಿಸಲು ಆಸಕ್ತಿ!

Vodafone: ಮುಂದಿನ 3 ವರ್ಷಗಳ ಅವಧಿಯಲ್ಲಿ11 ಸಾವಿರ ಉದ್ಯೋಗಿಗಳ ವಜಾ

Bank of Baroda; ಬಿಒಬಿಗೆ 4,775 ಕೋಟಿ ಲಾಭ
MUST WATCH
ಹೊಸ ಸೇರ್ಪಡೆ

T Narasipura ಭೀಕರ ಅಪಘಾತ: ಮೈಸೂರು ಆಸ್ಪತ್ರೆಗೆ ಸಚಿವ ನಾಗೇಂದ್ರ ಭೇಟಿ

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ