
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 157, ನಿಫ್ಟಿ 53 ಅಂಕ ಜಿಗಿತ
Team Udayavani, Mar 6, 2019, 5:31 AM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 157 ಅಂಕಗಳ ಏರಿಕೆಯನ್ನು ದಾಖಲಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53 ಅಂಕಗಳ ಜಿಗಿತವನ್ನು ದಾಖಲಿಸಿದೆ.
ಏಶ್ಯನ್ ಶೇರು ಪೇಟೆಗಳಲ್ಲಿನ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿಂದು ಹಣಕಾಸು, ಮೆಟಲ್ ಮತ್ತು ಕ್ಯಾಪಿಟಲ್ ಗೂಡ್ಸ್ ರಂಗದ ಶೇರುಗಳ ಚುರುಕಿನ ಖರೀದಿ ಕಂಡು ಬಂತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 137.07 ಅಂಕಗಳ ಏರಿಕೆಯೊಂದಿಗೆ 36,579.61 ಅಂಕಗಳ ಮಟ್ಟದಲ್ಲೂ ನಿಫ್ಟಿ 47.20 ಅಂಕಗಳ ಏರಿಕೆಯೊಂದಿಗೆ 11,034.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ರಿಲಯನ್ಸ್, ವಿಪ್ರೋ, ಎಸ್ ಬ್ಯಾಂಕ್, ಐಟಿಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ವಿಪ್ರೋ, ಭಾರ್ತಿ ಇನ್‌ಫ್ರಾಟೆಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಬಜಾಜ್ ಫಿನಾನ್ಸ್; ಟಾಪ್ ಲೂಸರ್‌ಗಲು : ಝೀ ಎಂಟರ್‌ಟೇನ್‌ಮೆಂಟ್, ಎಕ್ಸಿಸ್ ಬ್ಯಾಂಕ್, ಎಚ್ ಸಿ ಎಲ್ ಟೆಕ್, ಹೀರೋ ಮೋಟೋ ಕಾರ್ಪ್, ಎಸ್ ಬ್ಯಾಂಕ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 11 ಪೈಸೆಗಳ ಕುಸಿತವನ್ನು 70.60 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Shimoga; ತಲ್ವಾರ್ ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂಸಮಾಜಕ್ಕೆ ಬರುತ್ತದೆ: ಈಶ್ವರಪ್ಪ

ʼThalaivar 170ʼ ಸಿನಿಮಾದ ಪ್ರಮುಖ ಪಾತ್ರಕ್ಕೆ ಆಯ್ಕೆಯಾದ ಖ್ಯಾತ ನಟಿ; ಇವರೇನಾ ನಾಯಕಿ?

Nalin Kumar Kateel: ಶಿವಮೊಗ್ಗ ಗಲಾಟೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ: ಕಟೀಲ್ ಹೇಳಿಕೆ

Shimoga ಗಲಭೆ ನಡೆಸಲು ಮೊದಲೇ ಪ್ಲ್ಯಾನ್?; ಓಮಿನಿಯಲ್ಲಿ ಬಂದಿದ್ದರು 15 ಕಿಡಿಗೇಡಿಗಳು

Tumkur: ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಸಾವು