ಇನ್ಫಿ ಚೇತರಿಕೆ, ಡೋಕ್‌ಲಾಂ ಅಂತ್ಯ: ಮುಂಬಯಿ ಶೇರು 155 ಅಂಕ ಜಿಗಿತ

Team Udayavani, Aug 28, 2017, 5:09 PM IST

ಮುಂಬಯಿ : ಭಾರತ – ಚೀನ ನಡುವಿನ ಡೋಕ್‌ಲಾಂ ಗಡಿ ಬಿಕ್ಕಟ್ಟು ಸೌಹಾರ್ದಯುತವಾಗಿ ಕೊನೆಗೊಂಡಿರುವ ಹಾಗೂ ಇನ್‌ಫೋಸಿಸ್‌ ಶೇರು ಉತ್ತಮ ಚೇತರಿಕೆಯನ್ನು ಕಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 154.76 ಅಂಕಗಳ ಮುನ್ನಡೆಯೊಂದಿಗೆ 31,750.82 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.75 ಅಂಕಗಳ ಏರಿಕೆಯೊಂದಿಗೆ 9,912.80 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿರುವುದು ಗಮನಾರ್ಹವೆನಿಸಿತು.

ಇಂದಿನ ವಹಿವಾಟು ಹರಹು ಉತ್ತೇಜನಕಾರಿಯಾಗಿತ್ತು; ಹಿನ್ನಡೆ ಕಂಡ ಪ್ರತೀ ಒಂದು ಶೇರಿಗೆ ವ್ಯತಿರಿಕ್ತವಾಗಿ ಎರಡು ಶೇರುಗಳ ಮುನ್ನಡೆ ಸಾಧಿಸಿದವು. 

ಇಂದಿನ ವಹಿವಾಟಿನಲ್ಲಿ ಏಶ್ಯನ್‌ ಪೇಂಟ್‌, ಎಚ್‌ಯುಎಲ್‌, ಅದಾನಿ ಪೋರ್ಟ್‌, ಸನ್‌ ಫಾರ್ಮಾ, ಎಕ್ಸಿಸ್‌ ಬ್ಯಾಂಕ್‌ ಮತ್ತು ಎನ್‌ಟಿಪಿಸಿ ಶೇರುಗಳು ಶೇ. 1ರಿಂದ 2ರಷ್ಟು ಏರಿದವು. ಡಾ. ರೆಡ್ಡಿ, ಟಾಟಾ ಮೋಟರ್‌ ಶೇರು ಶೇ.1ರಿಂದ ಶೇ.2ರಷ್ಟು ಇಳಿದವು; ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರು ದರ ಕೂಡ ಸ್ವಲ್ಪ ಮಟ್ಟಿಗೆ ಕುಗ್ಗಿತು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ