ಹೂಡಿಕೆದಾರರಿಗೆ 2.9 ಲಕ್ಷ ಕೋಟಿ ನಷ್ಟ: ಬಿಎಸ್ಇನಲ್ಲಿ ಸೂಚ್ಯಂಕ ಭಾರೀ ಪತನ
Team Udayavani, Jan 4, 2023, 9:30 PM IST
ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ಬುಧವಾರ ಹೂಡಿಕೆದಾರರಿಗೆ 2.9 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಒಂದೇ ದಿನ ಸೂಚ್ಯಂಕ 637.75 ಪಾಯಿಂಟ್ಸ್ ಕುಸಿತ ಉಂಟಾಗಿದೆ. ಇದರಿಂದಾಗಿ ದಿನಾಂತ್ಯಕ್ಕೆ 60, 657.45ರಲ್ಲಿ ಮುಕ್ತಾಯವಾಗಿದೆ.
ಮಧ್ಯಂತರದಲ್ಲಿ 700.64 ಪಾಯಿಂಟ್ಸ್ ವರೆಗೆ ಇಳಿಕೆಯಾಗಿತ್ತು. ಟಾಟಾ ಸ್ಟೀಲ್, ಪವರ್ ಗ್ರಿಡ್, ಟಾಟಾ ಮೋಟರ್ಸ್, ವಿಪ್ರೋ, ಇನ್ಫೋಸಿಸ್ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಅನುಭವಿಸಿದವು. ನಿಫ್ಟಿ ಸೂಚ್ಯಂಕ ಕೂಡ 189.60 ಪಾಯಿಂಟ್ಸ್ ಕುಸಿತಗೊಂಡು 18, 042.95 ಪಾಯಿಂಟ್ಸ್ಗೆ ಮುಕ್ತಾಯಗೊಂಡಿತು.
ಅಮೆರಿಕದ ಫೆಡರಲ್ ರಿಸರ್ವ್ ಶೀಘ್ರವೇ ಮತ್ತೆ ಬಡ್ಡಿದರ ಏರಿಕೆ ಮಾಡಲಿದೆ, ಜತೆಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಕ್ಕೆ ಪ್ರಬಲವಾಗಿ ಆರ್ಥಿಕ ಹಿಂಜರಿತ ಬಾಧಿಸಲಿದೆ ಎಂಬ ವರದಿಗಳೂ ಕೂಡ ಸೂಚ್ಯಂಕ ಪತನಕ್ಕೆ ಕಾರಣವಾದವು.
ಸಿಯೋಲ್, ಶಾಂಘೈ ಮತ್ತು ಹಾಂಕಾಂಗ್ ಷೇರುಪೇಟೆಯಲ್ಲಿ ವಹಿವಾಟು ತೃಪ್ತಿಕರವಾಗಿದ್ದರೆ, ಟೋಕ್ಯೋದಲ್ಲಿ ಇಳಿಕೆಯಾಗಿತ್ತು.
18 ಪೈಸೆ ಏರಿಕೆ:
ಅಮೆರಿಕದ ಡಾಲರ್ ಎದುರು 18 ಪೈಸೆ ಏರಿಕೆಯಾಗಿದೆ. ದಿನಾಂತ್ಯಕ್ಕೆ ಡಾಲರ್ ಎದುರು 82.82 ರೂ.ಗೆ ಮುಕ್ತಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಏರಿಳಿಕೆ ಕಂಡು ಬಂದ ಬಳಿಕ ಇತ್ತೀಚಿನ ದಿನಗಳಿಗೆ ಹೋಲಿಕೆ ಮಾಡಿದರೆ ಇದು ದಾಖಲೆಯ ಏರಿಕೆಯಾಗಿದೆ.
ಬಿಎಸ್ಇ:
637.75 ಪಾಯಿಂಟ್ಸ್ ಇಳಿಕೆ
60, 657.45 ದಿನದ ಮುಕ್ತಾಯ
700.64 – ಮಧ್ಯಂತರ ಏರಿಕೆ
ನಿಫ್ಟಿ:
189.60 ಪಾಯಿಂಟ್ಸ್ ಇಳಿಕೆ
18, 042.95 ದಿನದ ಮುಕ್ತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?