ಕೋವಿಡ್ 19 ವೈರಸ್ : ಉತ್ಪಾದನೆ ನಿಲ್ಲಿಸಿದ ಮಾರುತಿ
Team Udayavani, Mar 24, 2020, 11:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಮೇಲೂ ಪ್ರತಿಕೂಲ ಉಂಟಾಗಿದೆ. ಹರಿಯಾಣದಲ್ಲಿಯ ತನ್ನ ಎರಡು ಕಾರು ತಯಾರಿಕಾ ಘಟಕಗಳು ಮತ್ತು ಕಚೇರಿಗಳನ್ನು ಕೂಡಲೇ ಮುಚ್ಚುವುದಾಗಿ ಎಂಎಸ್‌ಐ ಪ್ರಕಟನೆಯಲ್ಲಿ ತಿಳಿಸಿದೆ.
ರೋಹ್ಟಕ್‌ನಲ್ಲಿರುವ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರಗಳನ್ನೂ ಮುಚ್ಚಲಾಗುವುದು. ಸರಕಾರ ಮುಂದಿನ ಕ್ರಮ ತೆಗೆದುಕೊಳ್ಳುವವರೆಗೂ ಘಟಕಗಳು, ಕಚೇರಿ ಗಳನ್ನು ತೆರೆಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.