ಮಾರುತಿ ಸುಜುಕಿ ಡ್ರೈವಾಶ್ ಸಿಸ್ಟಮ್ -ವರ್ಷಕ್ಕೆ 656 ಮಿಲಿಯನ್ ಲೀಟರ್ ನೀರು ಉಳಿತಾಯ!
Team Udayavani, Oct 5, 2019, 1:22 PM IST
ನವದೆಹಲಿ: ಭಾರತದ ನಂಬರ್ 1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ 2018-19ನೇ ಸಾಲಿನಲ್ಲಿ ಸುಮಾರು 6.9 ಮಿಲಿಯನ್ ವಾಹನಗಳನ್ನು ಡ್ರೈವಾಶ್ ಸರ್ವೀಸ್ ಮೂಲಕ 656 ಮಿಲಿಯನ್ ನಷ್ಟು ನೀರನ್ನು ಉಳಿತಾಯ ಮಾಡಿರುವುದಾಗಿ ತಿಳಿಸಿದೆ.
ಮಾರುತಿ ಇಂಡಿಯಾ ಡ್ರೈವಾಶ್ ಸರ್ವಿಸ್ ಮೊರೆ ಹೋದ ಪರಿಣಾಮ ತನ್ನ ವರ್ಕ್ ಶಾಪ್ ನಲ್ಲಿ ಪ್ರತಿ ಕಾರಿಗೆ 90 ಲೀಟರ್ ನಷ್ಟು ನೀರನ್ನು ಉಳಿತಾಯ ಮಾಡಿದಂತಾಗಿದೆ ಎಂದು ವಿವರಿಸಿದೆ.
ದೇಶಾದ್ಯಂತ ಸುಮಾರು 1,750 ನಗರಗಳಲ್ಲಿ ಮಾರುತಿ ಸುಜುಕಿ ಇಂಡಿಯಾ ಸರ್ವಿಸ್ ನೆಟ್ ವರ್ಕ್ಸ್ ನ 3,600 ವರ್ಕ್ಸ್ ಶಾಪ್ ಗಳಿವೆ. ಡ್ರೈ ವಾಶ್ ವ್ಯವಸ್ಥೆ ಕಾರು ತಯಾರಿಕಾ ಸಂಸ್ಥೆಗಳಿಗೆ ಕೇವಲ ವಾಶಿಂಗ್ ಸಮಯವನ್ನು ಮಾತ್ರ ಕಡಿಮೆ ಮಾಡುವುದಿಲ್ಲ, ಜತೆಗೆ ವಾಶಿಂಗ್ ಗುಣಮಟ್ಟ ಮತ್ತು ನೀರು ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದೆ.
2003-04 ಮತ್ತು 2006-07ರಿಂದ ಮಾರುತಿ ಸುಜುಕಿ ಇಂಡಿಯಾದ ಗುರ್ಗಾಂವ್ ಮತ್ತು ಮಾನ್ಸೆರ್ ಘಟಕಗಳಲ್ಲಿ ಕಲುಷಿತ ನೀರನ್ನು ಸಂಸ್ಕರಣೆಗೊಳಿಸಿ( ಜೀರೋ ಡಿಸ್ ಚಾರ್ಜ್ ಸ್ಟೇಟಸ್) ಉಪಯೋಗಿಸುವ ಮೂಲಕ ಗುರಿ ತಲುಪಿರುವುದಾಗಿ ಹೇಳಿದೆ. ಅಷ್ಟೇ ಅಲ್ಲ ಕಾರು ಉತ್ಪಾದನಾ ಪ್ರಕ್ರಿಯೆಯಲ್ಲಿ ಸಂರಕ್ಷಿತ (ಬಾವಿ, ಕೊಳವೆ ಬಾವಿ) ನೀರಿಗಿಂತ ಹೆಚ್ಚಾಗಿ ಬಹುತೇಕ ಕಾಲುವೆ(ಚರಂಡಿ) ನೀರನ್ನು ಬಳಸುತ್ತಿರುವುದಾಗಿ ಹೇಳಿದೆ. ಚರಂಡಿ ನೀರನ್ನು ಸಂಸ್ಕರಣೆಗೊಳಿಸಿ ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
ಡ್ರೈವಾಶ್ ಬಗ್ಗೆ ಮಾಹಿತಿ:
ನಮ್ಮ ಗ್ರಾಹಕರಿಗೆ ಡ್ರೈವಾಶ್, ಪೇಪರ್ ಲೆಸ್ ಸರ್ವಿಸ್ ಅನುಭವದ ಬಗ್ಗೆ ನಮ್ಮ ಡೀಲರ್ ವರ್ಕ್ಸ್ ಶಾಪ್ ನಲ್ಲಿ ಮಾಹಿತಿ ನೀಡಲಾಗುತ್ತದೆ. ನಮ್ಮ ಡೀಲರ್ ನ ವರ್ಕ್ಸ್ ಶಾಪ್ ನ ಡ್ರೈವಾಶ್ ಬಗ್ಗೆ ತಿಳಿದುಕೊಳ್ಳುವುದರಿಂದ ಸಮಾಜಕ್ಕೂ ನಮ್ಮಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ 18 ಮಿಲಿಯನ್ ಗ್ರಾಹಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಯಾರು ನಮ್ಮ ವರ್ಕ್ಸ್ ಶಾಪ್ ಗೆ ಭೇಟಿ ನೀಡುತ್ತಾರೋ ಅವರಿಗೆ ಡ್ರೈವಾಶ್ ಬಗ್ಗೆ ತಿಳಿಸಲಾಗುವುದು, ಇದರಿಂದ ನೀರನ್ನು ಕಡಿಮೆ ಬಳಕೆ ಮಾಡಲು ಸಹಾಯಕವಾಗುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕ
ಮಾರಾಟದಲ್ಲಿ ಕುಸಿತ: ಬೃಹತ್ ಇ-ವಾಣಿಜ್ಯ ಕಂಪನಿ ಅಲಿಬಾಬಾದಿಂದ 10 ಸಾವಿರ ಉದ್ಯೋಗಿಗಳ ವಜಾ
ಸಾಲದ ಆ್ಯಪ್ ಗಳಿಗೆ ಲಗಾಮು; ಆರ್ಬಿಐ ಮಾರ್ಗಸೂಚಿ ಬಿಡುಗಡೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ
ಕೃಷ್ಯುತ್ಪನ್ನ, ಸಂಸ್ಕರಿತ ಆಹಾರ ವಸ್ತು ರಫ್ತಿನಲ್ಲಿ ಸಾಧನೆ