2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರು ಮಾರಾಟ ಬಂದ್!

Team Udayavani, Apr 25, 2019, 5:09 PM IST

ನವದೆಹಲಿ: 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ) ಗುರುವಾರ ತಿಳಿಸಿದೆ.

ಮಾರುತಿ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ 2020ರ ಏಪ್ರಿಲ್ 1ರಿಂದ ಮಾರುತಿ ಡೀಸೆ ಕಾರುಗಳ ಮಾರಾಟ ಮಾಡದಿರಲು ತೀರ್ಮಾನಿಸಿರುವುದಾಗಿ ಮಾರುತಿ ಅಧ್ಯಕ್ಷ ಆರ್ ಸಿ ಭಾರ್ಗವ್ ಮಾಧ್ಯಮಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಅಲ್ಲದೇ ಮಾರುತಿ ಸುಜುಕಿ ಇಂಡಿಯಾ 1500ಸಿಸಿ ಅಧಿಕ ಸಾಮರ್ಥ್ಯದ ಮಾರುತಿ ಡೀಸೆಲ್ ಕಾರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದ್ದಿರುವುದಾಗಿ ಹೇಳಿದರು. ಇದರಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಾಲೆನೋ(1248ಸಿಸಿ) ಡೀಸೆಲ್ ಕಾರು ಮಾತ್ರ ಈ ಪಟ್ಟಿಗೆ ಸೇರಲಿದೆ ಎಂದು ಭಾರ್ಗವ್ ವಿವರಿಸಿದ್ದಾರೆ.

ಭವಿಷ್ಯದಲ್ಲಿ 1500 ಸಿಸಿ ಡೀಸೆಲ್ ವಾಹನಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ಡೀಸೆಲ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಲ್ಲಿ ಮಾತ್ರ ನಾವು ಉತ್ಪಾದನೆ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದರು.

ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಕೂಡಾ 2020ರ ಮಾರ್ಚ್ 31ರ ನಂತರ ಬಿಎಸ್ 4 ವಾಹನ (ಭಾರತ್ ಸ್ಟೇಜ್ 4)ಗಳ  ಮಾರಾಟವಾಗಲಿ ಮತ್ತು ರಿಜಿಸ್ಟ್ರೇಶನ್ ಆಗಲಿ ಮಾಡುವಂತಿಲ್ಲ ಎಂದು ಡೆಡ್ ಲೈನ್ ನೀಡಿದೆ. ಆ ನಿಟ್ಟಿನಲ್ಲಿ ಬಿಎಸ್ 4 ಆದೇಶ ಜಾರಿಗೊಂಡರೆ 1500ಸಿಸಿಗಿಂತ ಕಡಿಮೆ ಸಾಮರ್ಥ್ಯದ ಡೀಸೆಲ್ ಇಂಜಿನ್ ಅನ್ನು ತಯಾರಿಸುವುದರಲ್ಲಿ ಅರ್ಥ ಇಲ್ಲ ಎಂದು ಮಾರುತಿ ಹೇಳಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ದೇವದುರ್ಗ: ಹೊಸದಾಗಿ ಖರೀದಿಸಿದ ವಾಹನಗಳ ಇನ್ಸೂರೆನ್ಸ್‌ ಮಾಡಿಸಲು ಪುರಸಭೆಯಲ್ಲಿ ಹಣವಿಲ್ಲದ್ದರಿಂದ ಅವುಗಳು ರಸ್ತೆಗಿಳಿಯದೇ ಪುರಸಭೆ ನೈರ್ಮಲ್ಯ ಕಚೇರಿ ಆವರಣದಲ್ಲಿ...

  • ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ ದಿನದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್...

  • ಶಿರಾ: ನಗರಕ್ಕೆ ಸರಬರಾಜಾಗುತ್ತಿರುವ ನೀರು ಕಲ್ಮಶ ದಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನೀರು ಕಲ್ಮಶವಾಗಿರುವುದಕ್ಕೆ...

  • ಚಿಕ್ಕನಾಯಕನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ನೂರಾರು ಬೀದಿಗಳು ಇವೆ. ಆದರೆ ಬೀದಿಯ ಹೆಸರು ಸೂಚಿಸುವ ಮಾರ್ಗ ಸೂಚಕ ಫ‌ಲಕಗಳು ಇಲ್ಲದೇ ಹೊಸದಾಗಿ...

  • ಬೇಕಾಗುವ ಸಾಮಗ್ರಿಗಳು ಸುವರ್ಣ ಗೆಡ್ಡೆ: ಕಾಲು ಕೆ.ಜಿ ಬಿಳಿ ಕಡಲೆ 100 ಗ್ರಾಂ ಅಂಬಟೆ ಕಾಯಿ 2 ಹಲಸಿನ ಬೀಜ 10 ಬಾಳೆಕಾಯಿ 1 ಕಳಲೆತುಂಡುಗಳು 10 ಒಂದು ದೊಡ್ಡ ದಂಟಿನ ಸೊಪ್ಪು ಚಿಕ್ಕ...

  • ಜೀವನದಲ್ಲಿ ಸರಿಯಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಯೋಗ ಒಳ್ಳೆಯದು. ಆದಾಗ್ಯೂ ಯೋಗದಿಂದ ಗರಿಷ್ಠ ಪ್ರಯೋಜನ ಪಡೆಯಲು ಸರಿಯಾದ ಸಮಯದಲ್ಲಿ...