

Team Udayavani, Feb 14, 2017, 4:01 PM IST
ಮುಂಬಯಿ : ಮೂರು ದಿನಗಳ ನಿರಂತರ ಏರುಗತಿಯನ್ನು ಕಾಯ್ದುಕೊಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 12.31 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿ ನಿರಾಶೆ ಉಂಟುಮಾಡಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ,ಕ 12.75 ಅಂಕಗಳ ನಷ್ಟಕ್ಕೆ ಗುರಿಯಾಗಿ 8,792.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಸಪ್ಪೆಯಾಗಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಶೇರು ಪೇಟೆಯನ್ನು ಬಹುವಾಗಿ ಆಧರಿಸಿದ ಶೇರುಗಳೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್. ಇವುಗಳು ಶೇ.2ರಷ್ಟು ಏರಿದರೆ ಇವುಗಳನ್ನು ಅನುಸರಿಸಿ ಓಎನ್‌ಜಿಸಿ ಮತ್ತು ಗೇಲ್ ಶೇರುಗಳು ಉತ್ತಮ ಖರೀದಿಯನ್ನು ಆಕರ್ಷಿಸಿದವು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,037 ಶೇರುಗಳು ಮುನ್ನಡೆ ಸಾಧಿಸಿದವು; 1,799 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಗೇಲ್, ಭಾತಿರ ಏರ್‌ಟೆಲ್, ರಿಲಯನ್ಸ್, ಓಎನ್‌ಜಿಸಿ, ಐಸಿಐಸಿಐ ಬ್ಯಾಂಕ್, ಐಡಿಯಾ ಸೆಲ್ಯುಲರ್ ಮತ್ತು ಈಶರ್ ಮೋಟರ್. ಟಾಪ್ ಲೂಸರ್‌ಳು : ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಎಚ್‌ಯುಎಲ್, ಮಾರುತಿ ಸುಜುಕಿ, ಬಜಾಜ್ ಆಟೋ, ಟಾಟಾ ಮೋಟರ್, ಡಿವಿಆರ್, ಬಿಪಿಸಿಎಲ್, ಝೀ ಎಂಟರ್‌ಟೇನ್‌ಮೆಂಟ್.
Ad
LIC ವಿಮಾ ಪಾಲಿಸಿಗಳು ಇನ್ನು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲೂ ಲಭ್ಯ
19 ತಿಂಗಳ ಬಳಿಕ ಸಗಟು ಹಣದುಬ್ಬರ ಮೈನಸ್‌ಗೆ: ಜೂನ್‌ನಲ್ಲಿ ಶೇ.-0.13
Stock: ಟ್ರಂಪ್ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ
Stock Market: ಷೇರುಪೇಟೆ ಸೂಚ್ಯಂಕ 300ಕ್ಕೂ ಅಧಿಕ ಅಂಕ ಇಳಿಕೆ, ನಿಫ್ಟಿಯೂ ಕುಸಿತ
Insurance: ಭಾರತದಲ್ಲಿ ಟರ್ಮ್ ಇನ್ಶುರೆನ್ಸ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆ & ಪರಿಹಾರ
You seem to have an Ad Blocker on.
To continue reading, please turn it off or whitelist Udayavani.