ರಿಲಯನ್ಸ್‌ ಈಗ ವಿಶ್ವದ 2ನೇ ಬೃಹತ್‌ ತೈಲ ಕಂಪೆನಿ!

Team Udayavani, Jul 28, 2020, 6:45 AM IST

ರಿಲಯನ್ಸ್‌ ಈಗ ವಿಶ್ವದ 2ನೇ ಬೃಹತ್‌ ತೈಲ ಕಂಪೆನಿ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಮುಕೇಶ್‌ ಅಂಬಾನಿ ಮಾಲಕತ್ವದ ರಿಲ­ಯನ್ಸ್‌ ಇಂಡಸ್ಟ್ರೀಸ್‌ ಈಗ ಒಂದೊಂದೇ ಮೈಲುಗಲ್ಲು­ಗಳನ್ನು ಸ್ಥಾಪಿಸುತ್ತ ಭರ್ಜರಿಯಾಗಿ ಮುನ್ನಡೆಯುತ್ತಿದೆ.

14 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ದಾಟಿರುವ ರಿಲ­ಯನ್ಸ್‌ ಈಗ ವಿಶ್ವದ 2ನೇ ಬೃಹತ್‌ ತೈಲ ಕಂಪೆನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಇದುವರೆಗೆ 2ನೇ ಸ್ಥಾನದಲ್ಲಿದ್ದ ಎಕ್ಸಾನ್‌ ಮೊಬಿಲ್‌ ಮಾರುಕಟ್ಟೆ ಮೌಲ್ಯ 13.81 ಲಕ್ಷ ಕೋಟಿ ರೂ.ಗೆ ಕುಸಿದಿದೆ.

ಇನ್ನು ಎಂದಿ­ನಂತೆಯೇ ಸೌದಿ ಅರೇಬಿಯದ ಸೌದಿ ಅರಾಮ್ಕೊ 130 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಅಗ್ರ ಸ್ಥಾನದಲ್ಲಿದೆ.

ಕೋವಿಡ್ 19 ಕಾರಣಕ್ಕೆ ಜಾಗತಿಕವಾಗಿ ಕಚ್ಚಾತೈಲದ ಬೆಲೆ ಕುಸಿದ ಪರಿಣಾಮ, ಎಕ್ಸಾನ್‌ ಮೊಬಿಲ್‌ ಷೇರುಬೆಲೆ ಶೇ.39ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಈ ವರ್ಷ ರಿಲಯನ್ಸ್‌ ಷೇರು ಬೆಲೆ ಶೇ.46 ರಷ್ಟು ಏರಿಕೆಯಾಗಿದೆ.

ವಿಶೇಷವೆಂದರೆ ಮಾ.23ರ ಹೊತ್ತಿಗೆ ರಿಲಯನ್ಸ್‌ ಷೇರುಬೆಲೆ ಪಾತಾಳಕ್ಕೆ ತಲುಪಿದ್ದರಿಂದ ಕಂಪೆನಿಯ ಮಾರುಕಟ್ಟೆ ಮೌಲ್ಯ ಕೇವಲ 5.5 ಲಕ್ಷ ಕೋಟಿ ರೂ. ಆಗಿತ್ತು. ಅದಾದ ಮೇಲೆ ಸತತವಾಗಿ 13 ವಿದೇಶಿ ಕಂಪೆನಿಗಳು ರಿಲಯನ್ಸ್‌ನಲ್ಲಿ ಹೂಡಿಕೆ ಮಾಡಿದ್ದರಿಂದ 1.50 ಲಕ್ಷ ಕೋಟಿ ರೂ. ಹರಿದುಬಂತು. ಇದು ಕಂಪೆನಿಯ ಷೇರುಬೆಲೆಯನ್ನು ಏಕಾಏಕಿ ಗಗನಕ್ಕೇರಿಸಿದೆ.

2024ರಲ್ಲಿ ಜಿಯೋ ಮಾರ್ಟ್‌ಗೆ ದೊಡ್ಡ ಪಾಲು
ದೇಶದಲ್ಲಿ ಅಂತರ್ಜಾಲಾಧಾರಿತ ಮಾರಾಟ 2019­ರಲ್ಲಿ ಶೇ.4.7ರಷ್ಟಿತ್ತು. 2024ರಲ್ಲಿ ಈ ಪ್ರಮಾಣ ಶೇ.11­ಕ್ಕೇರಲಿದೆ ಎಂದು ಗೋಲ್ಡ್‌ಮ್ಯಾನ್‌ ಸ್ಯಾಚ್‌ ಅಂಕಿಸಂಖ್ಯೆ­ಗಳು ತಿಳಿಸಿವೆ. ಇದೇ ವೇಳೆ ಅಂತರ್ಜಾಲದಲ್ಲಿ ದಿನಸಿ ಕೊಳ್ಳುವ ಪ್ರಮಾಣ ದೊಡ್ಡಮಟ್ಟದಲ್ಲಿ ಏರಲಿದೆ.

ರಿಲಯನ್ಸ್‌ನ ಜಿಯೋ ಮಾರ್ಟ್‌ ಅರ್ಧದಷ್ಟು ಅಂತ­ರ್ಜಾಲ ದಿನಸಿ ಮಾರುಕಟ್ಟೆಯನ್ನು ಆವರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ 2024ರ ಹೊತ್ತಿಗೆ ಭಾರತದ ಅಂತರ್ಜಾಲಾಧಾರಿತ ಮಾರುಕಟ್ಟೆ ಗಾತ್ರ 7.4 ಲಕ್ಷ ಕೋಟಿ ರೂ. ಆಗಿರಲಿದೆ ಎನ್ನುವುದು ಗೋಲ್ಡ್‌ಮ್ಯಾನ್‌ ಸ್ಯಾಕ್‌ ವರದಿಯ ಮುಖ್ಯಾಂಶ.

ಟಾಪ್ ನ್ಯೂಸ್

accident 2

ಬೈಕ್‌ – ಸ್ಕೂಟರ್‌ ಢಿಕ್ಕಿ ಗಾಯ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

1-sadsadsd

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಫ್ ಮೇಲಿನ ಬಡ್ಡಿ ದರ ಶೇ.8.15ಕ್ಕೆ ಏರಿಸಿದ ಇಪಿಎಫ್ಒ

ಪಿಎಫ್ ಮೇಲಿನ ಬಡ್ಡಿ ದರ ಶೇ.8.15ಕ್ಕೆ ಏರಿಸಿದ ಇಪಿಎಫ್ಒ

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

ಮತ್ತೊಂದು ಆಘಾತ: ಬಡ್ಡಿ ದರ ಶೇ.0.25 ಹೆಚ್ಚಳ ಸಾಧ್ಯತೆ; ಆರ್‌ಬಿಐ

ಮತ್ತೊಂದು ಆಘಾತ: ಬಡ್ಡಿ ದರ ಶೇ.0.25 ಹೆಚ್ಚಳ ಸಾಧ್ಯತೆ; ಆರ್‌ಬಿಐ

ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!

ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

accident 2

ಬೈಕ್‌ – ಸ್ಕೂಟರ್‌ ಢಿಕ್ಕಿ ಗಾಯ

ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ

ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ

1-sasdsad

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

1-asdsdsd

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ