ತರಕಾರಿ, ಆಹಾರೋತ್ಪನ್ನ ಬೆಲೆ ಹೆಚ್ಚಳ ಎಫೆಕ್ಟ್; ಚಿಲ್ಲರೆ ಹಣದುಬ್ಬರ ಶೇ.4.62ಕ್ಕೆ ಏರಿಕೆ

Team Udayavani, Nov 13, 2019, 6:49 PM IST

ಬೆಂಗಳೂರು: ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಶೇ.4.62ಕ್ಕೆ ಏರಿಕೆಯಾಗಿದೆ. ಇದು ಕಳೆದ 15 ತಿಂಗಳಲ್ಲಿ ಮೊದಲ ಬಾರಿಗೆ ಆರ್ ಬಿಐನ ಮಧ್ಯಾವಧಿಯ ಶೇ.4ರ ಗುರಿಯನ್ನು ಮೀರಿ ಏರಿಕೆ ಕಂಡಂತಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ವಾರ್ಷಿಕ ಚಿಲ್ಲರೆ ಹಣದುಬ್ಬರದ ಲೆಕ್ಕಚಾರದಲ್ಲಿ ಕಳೆದ ತಿಂಗಳು ಹಣದುಬ್ಬರದ ಪ್ರಮಾಣ ಶೇ.3.99ರಷ್ಟಿದ್ದು, ಅಕ್ಟೋಬರ್ ನಲ್ಲಿ ಶೇ.4.62ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಆಹಾರೋತ್ಪನ್ನಗಳ ಬೆಲೆ ಏರಿಕೆ 2019ರ ಸೆಪ್ಟೆಂಬರ್ ನಲ್ಲಿ ಶೇ.5.11ರಷ್ಟಿದ್ದು, ಅಕ್ಟೋಬರ್ ನಲ್ಲಿ ಶೇ.7.89ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶದಿಂದ ತಿಳಿದು ಬಂದಿದೆ.

ಆಕಸ್ಮಿಕವಾಗಿ ಸುರಿದ ಮಳೆ ಹಾಗೂ ಆಹಾರ ಸರಬರಾಜಿನಲ್ಲಾದ ವ್ಯತ್ಯಯದಿಂದಾಗಿ ಬಹುತೇಕ ತರಕಾರಿ ಬೆಲೆಗಳು ಭಾರೀ ಏರಿಕೆ ಕಂಡಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ