ಸೆನ್ಸೆಕ್ಸ್‌, ನಿಫ್ಟಿ ಧನಾತ್ಮಕ ಆರಂಭ; ಟಿಸಿಎಸ್‌ ಶೇರು ಧಾರಣೆ ಶೇ.3 ಜಂಪ್‌

Team Udayavani, Apr 15, 2019, 11:24 AM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು. ಐಟಿ ರಂಗದ ದಿಗ್ಗಜ ಟಿಸಿಎಸ್‌ ಶೇರು ಇಂದು ಭರಾಟೆಯ ಖರೀದಿಯನ್ನು ಕಾಣುವ ಮೂಲಕ ಶೇ.3ರ ಏರಿಕೆಯನ್ನು ದಾಖಲಿಸಿತು.

ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್‌ 86.56 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,853.67 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.60 ಅಂಕಗಳ ಮುನ್ನಡೆಯೊಂದಿಗೆ 11,670.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಕಳೆದ ವಾರ ಸೆನ್ಸೆಕ್ಸ್‌ 95.12 ಅಂಕಗಳ ನಷ್ಟವನ್ನು ಕಂಡಿತ್ತು. ಇದೇ ರೀತಿ ನಿಫ್ಟಿ 22.50 ಅಂಕಗಳ ನಷ್ಟವನ್ನು ಅನುಭವಿಸಿತ್ತು.

ಇಂದಿನ ವಹಿವಾಟಿನ ಟಾಪ್‌ ಗೇನರ್‌ಗಳಾದ ಟಾಟಾ ಮೋಟರ್‌, ಟಿಸಿಎಸ್‌, ಕೋಲ್‌ ಇಂಡಿಯಾ, ಎಚ್‌ಸಿಎಲ್‌ ಟೆಕ್‌, ವೇದಾಂತ, ಟಾಟಾ ಸ್ಟೀಲ್‌, ಹೀರೋ ಮೋಟೋಕಾರ್ಪ್‌, ಐಟಿಸಿ, ಕೋಟಕ್‌ ಬ್ಯಾಂಕ್‌, ಏಶ್ಯನ್‌ ಪೇಂಟ್‌, ಇಂಡಸ್‌ ಇಂಡ್‌ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಶೇರುಗಳು ಶೇ. 4.12ರ ಏರಿಕೆಯನ್ನು ಕಂಡವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಏಳು ಪೈಸೆಗಳ ಕುಸಿತನ್ನು ಕಂಡು 69.24 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ