Udayavni Special

ಗ್ರಾಹಕರಿಗೆ ಬರೆ! Jio,ವೋಡಾಫೋನ್, ಏರ್ ಟೆಲ್ ಪರಿಷ್ಕೃತ ದರ ಎಷ್ಟೆಷ್ಟು ಹೆಚ್ಚಾಗಲಿದೆ ಗೊತ್ತಾ


Team Udayavani, Dec 2, 2019, 11:43 AM IST

Jio-new

ನವದೆಹಲಿ: ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್ಸ್ ಗಳಾದ ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಡಿಸೆಂಬರ್ 3ರಿಂದ ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. ರಿಲಯನ್ಸ್ ಜಿಯೋ ಕೂಡಾ ಡಿಸೆಂಬರ್ 6ರಿಂದ ಶೇ.40ರಷ್ಟು ಪರಿಸ್ಕೃತ ಶುಲ್ಕ ಹೆಚ್ಚಿಸುವುದಾಗಿ ಘೋಷಿಸಿದೆ.

ವೋಡಾಫೋನ್- ಭಾರ್ತಿ ಏರ್ ಟೆಲ್ ಶೇ.15ರಿಂದ 47ರಷ್ಟು ಏರಿಕೆ:

ವೋಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ ಟೆಲ್ ನ ನೂತನ ಟಾರಿಫ್ಸ್ ನಲ್ಲಿ ಮೊಬೈಲ್ ಕರೆಗಳು, ಡೇಟಾ ಮೇಲಿನ ದರವನ್ನು ಶೇ.15ರಿಂದ 47ರಷ್ಟು ಏರಿಕೆ ಮಾಡಲಿದ್ದು, ಇದು ಡಿಸೆಂಬರ್ 3ರಿಂದ ಜಾರಿಗೊಳ್ಳಲಿದೆ ಎಂದು ತಿಳಿಸಿದೆ.

ಅನ್ ಲಿಮಿಡೆಟ್ ಯೋಜನೆಯಡಿ ವರ್ಗೀಕರಿಸಲಾಗಿದ್ದ ಸೇವೆಗಳನ್ನು ಸಂಪೂರ್ಣ ಬದಲಾಯಿಸಿ ನವೀಕರಿಸುವುದಾಗಿ ತಿಳಿಸಿದೆ. ಏರ್ ಟೆಲ್ ಸೇವಾ ಶುಲ್ಕದಲ್ಲಿ ದಿನಕ್ಕೆ 50ಪೈಸೆಯಿಂದ 2.85 ರೂ.ವರೆಗೆ ಏರಿಕೆಯಾಗಲಿದೆ ಎಂದು ಹೇಳಿದೆ.

ಸುಮಾರು ಒಂದು ದಶಕಗಳ ಕಾಲ ಬೆಲೆ ಸ್ಪರ್ಧೆಯಲ್ಲಿ ವೋಡಾಫೋನ್, ಭಾರ್ತಿ ಏರ್ ಟೆಲ್ ಕರೆಗಳ ದರದಲ್ಲಿ, ಡಾಟಾ ಸರ್ವೀಸ್ ದರದಲ್ಲಿ ಮೇಲಾಟ ನಡೆಸಿದ್ದವು. ಇದೀಗ ಹತ್ತು ವರ್ಷಗಳ ನಂತರ ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿರುವುದಾಗಿ ವರದಿ ತಿಳಿಸಿದೆ.

ಏರ್ ಟೆಲ್ ನ ಜನಪ್ರಿಯ 169 ರೂಪಾಯಿ ಹಾಗೂ 199 ರೂಪಾಯಿ ಪ್ಲ್ಯಾನ್ ಇನ್ಮುಂದೆ 248 ರೂಪಾಯಿ ಪ್ಯಾಕ್ ಆಗಲಿದೆ. ಏರ್ ಟೆಲ್ ನ ಹಿಂದಿನ 28 ದಿನಗಳ ಕಾಲದ ವ್ಯಾಲಿಡಿಟಿ ಈಗಲೂ ಮುಂದುವರಿಯಲಿದೆ. ಪರಿಷ್ಕೃತ ಬೆಲೆಯಲ್ಲಿ ಗ್ರಾಹಕರಿಗೆ 169 ರೂಪಾಯಿ ಪ್ಯಾಕ್ ನಲ್ಲಿ ದಿನಂಪ್ರತಿ 1.5ಜಿಬಿ ಡಾಟಾ ಪಡೆಯಲಿದ್ದಾರೆ. ಈ ಮೊದಲು ಪಡೆಯುತ್ತಿದ್ದುಕ್ಕಿಂತ ಶೇ.50ರಷ್ಟು ಹೆಚ್ಚಿನ ಸೇವೆ ಲಭ್ಯವಾಗಲಿದೆ. 199 ರೂ. ಪ್ಲ್ಯಾನ್ ಗ್ರಾಹಕರು ಈ ಮೊದಲಿನ ಸೇವೆ ಪಡೆಯಲಿದ್ದಾರೆ.

ಭಾರ್ತಿ ಏರ್ ಟೆಲ್ ಹೊರ ಹೋಗುವ ಕರೆ 28ದಿನಕ್ಕೆ 1000 ನಿಮಿಷ, 84 ದಿನ 3 ಸಾವಿರ ನಿಮಿಷ, 365 ದಿನ 12 ಸಾವಿರ ನಿಮಿಷ. ಹೀಗೆ ನಿಗದಿತ ನಿಮಿಷಗಳ ಮಿತಿ ಮೀರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಹೇಳಿದೆ.

ವೋಡಾಫೋನ್ ಕೂಡಾ ನೂತನ ಪ್ರೀಪೇಯ್ಡ್ ಮತ್ತು ಸರ್ವೀಸಸ್ ನ ವ್ಯಾಲಿಡಿಟಿ ಸಮಯವನ್ನು ನಿಗದಿಪಡಿಸಿದೆ. ಅದರಂತೆ 2 ದಿನ, 28 ದಿನ, 84 ದಿನ ಹಾಗೂ 365 ದಿನಗಳು ಎಂದು ಘೋಷಿಸಿದೆ. ವೋಡಾಫೋನ್ ಮತ್ತು ಭಾರ್ತಿಏರ್ ಟೆಲ್ ಈಗಾಗಲೇ ಭಾರೀ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದೀಗ ದರ ಏರಿಕೆಗೆ ಮುಂದಾಗಿದೆ ಎಂದು ವರದಿ ವಿವರಿಸಿದೆ.

ಜಿಯೋ ಕರೆ, ಡೇಟಾ ದರ ಶೇ.40ರಷ್ಟು ಏರಿಕೆ:

ಜಿಯೋ ಕರೆಗಳ ದರ ಮತ್ತು ಡೇಟಾ ಬೆಲೆ ಶೇ.40ರಷ್ಟು ಏರಿಕೆಯಾಗಲಿದೆ. ಹೊಸ ಯೋಜನೆ ಅನ್ವಯ ಗ್ರಾಹಕರು ಶೇ.300ರಷ್ಟು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ರಿಲಯನ್ಸ್ ಹೇಳಿದೆ. ಆಲ್ ಇನ್ ಒನ್ ಪ್ಲ್ಯಾನ್ ನಡಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ.

ಗ್ರಾಹಕ ಮೊದಲು ಎಂಬ ಧ್ಯೇಯ ನಮ್ಮದು ಹೀಗಾಗಿ ಜಿಯೋ ಗ್ರಾಹಕರು ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕರೆಗಳ ದರ ಎಷ್ಟು ಹೆಚ್ಚಾಗಲಿದೆ, ಡೇಟಾ ದರ ಎಷ್ಟು, ಅನ್ ಲಿಮಿಟೆಡ್ ಕರೆಗಳು, ವೈಸ್ ಸಂದೇಶ, ವಿಡಿಯೋ ಕರೆಗಳ ಪರಿಷ್ಕೃತ ದರದ ಬಗ್ಗೆ ಜಿಯೋ ಇನ್ನಷ್ಟೇ ನಿಖರವಾಗಿ ಘೋಷಿಸಬೇಕಾಗಿದೆ. ಸದ್ಯ ಶೇ.40ರಷ್ಟು ಎಂದು ಹೇಳಿದೆ. ಅದು ಯಾವ್ಯಾವ ಫ್ಲ್ಯಾನ್ ಗೆ ಎಷ್ಟೆಷ್ಟು ಎಂಬುದು ಡಿಸೆಂಬರ್ 3ರಂದು ಬಹಿರಂಗವಾಗಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

leopard

ಬೇಟೆಯನ್ನು ಹಿಡಿಯಲು ಹೋಗಿ ಪ್ರಪಾತಕ್ಕೆ ಬಿದ್ದ ಹಿಮಚಿರತೆ: ಮನಕಲಕುವ ವಿಡಿಯೋ ವೈರಲ್

ಮಹಾ ಮಳೆಗೆ ಬೆಳಗಾವಿ ಗಡಿಯ ಅನೇಕ ಸೇತುವೆಗಳು ಮುಳುಗಡೆ: ಪ್ರವಾಹದ ಆತಂಕ

ಮಹಾ ಮಳೆಗೆ ಬೆಳಗಾವಿ ಗಡಿಯ ಅನೇಕ ಸೇತುವೆಗಳು ಮುಳುಗಡೆ: ಪ್ರವಾಹದ ಆತಂಕ

ಹಿರೋಶಿಮಾದ ನಂತರ ನಡೆದ ಮಹಾಸ್ಫೋಟ! ಬೈರೂತ್ ನಲ್ಲಿ ನಿಜಕ್ಕೂ ನಡೆದಿದ್ದೇನು?

ಹಿರೋಶಿಮಾದ ನಂತರ ನಡೆದ ಮಹಾಸ್ಫೋಟ! ಬೈರೂತ್ ನಲ್ಲಿ ನಿಜಕ್ಕೂ ನಡೆದಿದ್ದೇನು?

ಚಿಕ್ಕಮಗಳೂರು: ಮಹಾಮಳೆಗೆ ಮೊದಲ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

ಚಿಕ್ಕಮಗಳೂರು: ಮಹಾಮಳೆಗೆ ಮೊದಲ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

ಧರ್ಮಸ್ಥಳ ಸ್ನಾನಘಟ್ಟ

ಅಪಾಯದ ಮಟ್ಟ ತಲುಪುತ್ತಿದ್ದಾಳೆ ನೇತ್ರಾವತಿ: ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆ ಸಾಧ್ಯತೆ

ಪಾಕಿಸ್ತಾನ: ಕಾಶ್ಮೀರ ಪರ Rally ಮೇಲೆ ಗ್ರೆನೇಡ್ ದಾಳಿ- 30 ಜನರಿಗೆ ಗಾಯ

ಪಾಕಿಸ್ತಾನ: ಕಾಶ್ಮೀರ ಪರ Rally ಮೇಲೆ ಗ್ರೆನೇಡ್ ದಾಳಿ- 30 ಜನರಿಗೆ ಗಾಯ

ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಪಾಕ್ ಗೆ ನೆರವಾದ ಬಾಬರ್ ಅಜಂ- ಶಾನ್ ಮಸೂದ್

ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಪಾಕ್ ಗೆ ನೆರವಾದ ಬಾಬರ್ ಅಜಂ- ಶಾನ್ ಮಸೂದ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಒಂಬತ್ತು ದಿನ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

” ಆನ್‌ಲೈನ್‌ ದಗಾ ತಡೆ” ಗೆ ದಾರಿ ಯಾವುದಯ್ನಾ?

” ಆನ್‌ಲೈನ್‌ ದಗಾ ತಡೆ” ಗೆ ದಾರಿ ಯಾವುದಯ್ನಾ?

ಮತ್ತೆ 55 ಸಾವಿರದತ್ತ ಚಿನ್ನ

ಮತ್ತೆ 55 ಸಾವಿರದತ್ತ ಚಿನ್ನ

ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ ; ಜಾರಿಯಾಗಿದೆ ಗ್ರಾಹಕ ರಕ್ಷಣಾ ಕಾಯ್ದೆ-2019

ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ ; ಜಾರಿಯಾಗಿದೆ ಗ್ರಾಹಕ ರಕ್ಷಣಾ ಕಾಯ್ದೆ-2019

ಇಂದು ಚಿನ್ನದ ಬಾಂಡ್‌ 5ನೇ ಸರಣಿ ಬಿಡುಗಡೆ

ಇಂದು ಚಿನ್ನದ ಬಾಂಡ್‌ 5ನೇ ಸರಣಿ ಬಿಡುಗಡೆ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

leopard

ಬೇಟೆಯನ್ನು ಹಿಡಿಯಲು ಹೋಗಿ ಪ್ರಪಾತಕ್ಕೆ ಬಿದ್ದ ಹಿಮಚಿರತೆ: ಮನಕಲಕುವ ವಿಡಿಯೋ ವೈರಲ್

ಗುರುಪುರ: ಗುಡ್ಡ ಕುಸಿತ ದುರಂತಕ್ಕೆ ಒಂದು ತಿಂಗಳು; ವಾಸ್ತವ್ಯ ವ್ಯವಸ್ಥೆ ಇನ್ನೂ ಅನಿಶ್ಚಿತ

ಗುರುಪುರ: ಗುಡ್ಡ ಕುಸಿತ ದುರಂತಕ್ಕೆ ಒಂದು ತಿಂಗಳು; ವಾಸ್ತವ್ಯ ವ್ಯವಸ್ಥೆ ಇನ್ನೂ ಅನಿಶ್ಚಿತ

ಬಂಟ್ವಾಳ: ತುಂಬಿದ ನೇತ್ರಾವತಿ; ಪ್ರವಾಹದ ಭೀತಿ

ಬಂಟ್ವಾಳ: ತುಂಬಿದ ನೇತ್ರಾವತಿ, ಪ್ರವಾಹದ ಭೀತಿ

ಕೋವಿಡ್‌-19 ತಡೆಗೆ ತಂಡ ರಚನೆ: ಅಧಿಕಾರಿಗಳಿಗೆ ಡಿಸಿ ಸೂಚನೆ

ಕೋವಿಡ್‌-19 ತಡೆಗೆ ತಂಡ ರಚನೆ: ಅಧಿಕಾರಿಗಳಿಗೆ ಡಿಸಿ ಸೂಚನೆ

“ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಅವಕಾಶ’

“ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಅವಕಾಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.