
ನವೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ
Team Udayavani, Dec 13, 2022, 6:25 AM IST

ಹೊಸದಿಲ್ಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚುತ್ತಿದ್ದ ಬೇಡಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿದ್ದ ಕ್ರಮಗಳಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ನವೆಂಬರ್ ತಿಂಗಳ ಸಗಟು ಹಣದುಬ್ಬರ ಇಳಿಕೆಯಾಗಿದೆ.
ಕಳೆದ 11 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಗಟು ಹಣದುಬ್ಬರ ಶೇ. 6ಕ್ಕಿಂತಲೂ ಕಡಿಮೆಯಾಗಿದ್ದು, ನವೆಂಬರ್‌ನಲ್ಲಿ ಶೇ. 5.88ಕ್ಕೆ ತಗ್ಗಿದೆ ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ತಿಳಿಸಿದೆ.
ನವೆಂಬರ್‌ನಲ್ಲಿ ಹಣದುಬ್ಬರ ಶೇ. 4.91ರಷ್ಟಿತ್ತು. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಆತಂಕ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಜಾಗತಿಕ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತವಾಗಿ ಹಣದುಬ್ಬರ ಈ ವರ್ಷಾರಂಭದಿಂದಲೇ ಏರತೊಡಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಶೇ. 6.77ರಷ್ಟಿತ್ತು. ಹೀಗಾಗಿ ಆರ್‌ಬಿಐ ರೆಪೋ ದರ ಹೆಚ್ಚಿಸಿ, ಮಾರುಕಟ್ಟೆಯಲ್ಲಿ ಅನಗತ್ಯ ಬೇಡಿಕೆಗೆ ಕಡಿವಾಣ ಹಾಕಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RBI Repo Rate: ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ-ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡ RBI

Loan repayment; ಸುಸ್ತಿದಾರನಾಗುವ ದಿಕ್ಕಿನಲ್ಲಿ ಬೈಜೂಸ್ ?

LPG Cylinder; ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ…

ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

ಆರಂಭಿಕ ವಹಿವಾಟಿನಲ್ಲಿ… ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 340 ಅಂಕ ಇಳಿಕೆ, ನಿಫ್ಟಿ ಕುಸಿತ