ಪೂರ್ವ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿ 14 ಪ್ರಯಾಣಿಕರಿಗೆ ಗಾಯ
Team Udayavani, Apr 20, 2019, 9:59 AM IST
ಕಾನ್ಪುರ: ಇಲ್ಲಿನ ರೂಮಾ ರೈಲು ನಿಲ್ದಾಣದ ಸಮೀಪ ಹೌರಾ – ನವದೆಹಲಿ ‘ಪೂರ್ವ’ ಎಕ್ಸ್ ಪ್ರೆಸ್ ರೈಲಿನ 12 ಬೋಗಿಗಳು ಹಳಿತಪ್ಪಿದ ಕಾರಣ ಕನಿಷ್ಠ 14 ಪ್ರಯಾಣಿಕರು ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಹಳಿ ತಪ್ಪಿರುವ 12 ಬೋಗಿಗಳಲ್ಲಿ ನಾಲ್ಕು ಬೋಗಿಗಳು ಸಂಪೂರ್ಣ ಮಗುಚಿಬಿದ್ದಿವೆ. ಈ ರೈಲು ಪ್ರಯಾಗದಿಂದ ನವದೆಹಲಿಗೆ ಸಾಗುತ್ತಿತ್ತು. ಘಟನೆಯಲ್ಲಿ ಇದುವರೆಗೆ ಯಾವುದೆ ಪ್ರಾಣಹಾನಿಗಳಾಗಿರುವ ಕುರಿತಾಗಿ ವರದಿಯಾಗಿಲ್ಲ.
ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಮತ್ತು ಗಾಯಾಳುಗಳಲ್ಲಿ ಹಲವರು ಪ್ರಾಥಮಿಕ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಸುರಕ್ಷತಾ ಕಮಿಷನರ್ ಎ.ಕೆ. ಜೈನ್ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ.
Kanpur: Morning visuals from the spot where 12 coaches of Poorva Express, plying from Howrah to New Delhi, derailed near Rooma village at around 1 am today. No casualties reported. pic.twitter.com/sFw0jZvVib
— ANI UP (@ANINewsUP) April 20, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ
ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ
ಬಿಹಾರದ ಬೆಳವಣಿಗೆಗಳು ರಾಷ್ಟ್ರ ರಾಜಕಾರಣಕ್ಕೆ ಸಕಾರಾತ್ಮಕ ಸಂಕೇತ: ಅಖಿಲೇಶ್ ಯಾದವ್
ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಶಂಕಿತ ಸದಸ್ಯರಿಬ್ಬರ ಬಂಧನ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ
MUST WATCH
ಹೊಸ ಸೇರ್ಪಡೆ
ಶಾಸಕ ರಾಜುಗೌಡ ವಿರುದ್ದ ಪ್ರತಿಭಟನೆ
ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್
ವಿಜಯಪುರ ಪಾಲಿಕೆ ವಾರ್ಡ್ ಮೀಸಲು ಬದಲಾವಣೆಗೆ 92 ಆಕ್ಷೇಪಣೆ : ಜಿಲ್ಲಾಧಿಕಾರಿ
ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ
ಸುತ್ತೂರು ಮಠ ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಗೆ ಪ್ರಸಿದ್ಧ: ರಾಜ್ಯಪಾಲ ಗೆಹ್ಲೋಟ್