ಪಣಜಿ: ರಾಜ್ಯದಲ್ಲಿ ಶೇಕಡಾ 13 ರಷ್ಟು ನಿರುದ್ಯೋಗ; ಸಿಎಂಐ ಸಮೀಕ್ಷೆ
Team Udayavani, Dec 8, 2022, 5:18 PM IST
ಪಣಜಿ: ಗೋವಾ ರಾಜ್ಯದಲ್ಲಿ ಶೇಕಡಾ 13 ರಷ್ಟು ನಿರುದ್ಯೋಗ ಮತ್ತು ರಾಜ್ಯದಲ್ಲಿ ಶೇಕಡಾ 70 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಸಿಎಂಐಯ ಸಮೀಕ್ಷೆ ತಿಳಿಸಿದೆ. ಇದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಮತ್ತು ಇನ್ನು ಮುಂದೆ ಕೌಶಲ್ಯ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ನಿರುದ್ಯೋಗವನ್ನು ಕಡಿಮೆ ಮಾಡಲು ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದರು.
ಪಣಜಿಯಲ್ಲಿ ಆಯೋಜಿಸಿದ್ದ ಹೊಸ ಶಿಕ್ಷಣ ನೀತಿ ಮತ್ತು ನ್ಯಾಕ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
2014ರಲ್ಲಿ ಪ್ರಧಾನಿ ಮೋದಿಯವರು ಕೌಶಲ್ಯ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇಂದಿನ ಅಗತ್ಯವನ್ನು ಮನಗಂಡು ಶಿಕ್ಷಣ ನೀಡದಿದ್ದರೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ಇದಕ್ಕಾಗಿ ರಾಜ್ಯದ 64 ಕಾಲೇಜುಗಳು ಹೊಸ ಶಿಕ್ಷಣ ನೀತಿಯೊಂದಿಗೆ ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡಬೇಕಾಗಿದ್ದು, ನಿರುದ್ಯೋಗ ನಿವಾರಣೆಗೆ ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು, ಹೊಸ ಚಟುವಟಿಕೆಗಳನ್ನು ನಡೆಸುವುದು, ಕಾಲೇಜುಗಳ ಆವರಣದ ಹೊರಗೆ ವಿವಿಧ ಚಟುವಟಿಕೆಗಳನ್ನು ನಡೆಸುವ ಅಗತ್ಯವಿದೆ. ಗೋವಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಹಾಗಾಗಿ ಈಗ ವಿಶ್ವವಿದ್ಯಾನಿಲಯವನ್ನು ವಿಭಾಗದ ಮೂಲಕ ಮಹಾಶಾಲೆಗಳನ್ನಾಗಿ ಮಾಡಲಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲಾಗುವುದು ಎಂದರು.
ಸಂಶೋಧನಾ ಉದ್ಯಾನವನ ಹಾಗೂ 5 ಗ್ರಾಮಗಳನ್ನು ಸದ್ಯದಲ್ಲಿಯೇ ದತ್ತು ತೆಗೆದುಕೊಳ್ಳಲಾಗುವುದು. ಗೋವಾ ವಿಶ್ವವಿದ್ಯಾನಿಲಯವು ಬಾಂಗ್ಲಾದೇಶದ ವಿಶ್ವವಿದ್ಯಾನಿಲಯದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಸಿಂಗಾಪುರ ಮತ್ತು ಕುವೈತ್ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದೊಂದು ಆಗುವವರೆಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ…; ಪ್ರಶಾಂತ್ ಕಿಶೋರ್
ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!
ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು
ಆನೆ ದಾಳಿ: 3 ವರ್ಷಗಳಲ್ಲಿ 1,581 ಮಂದಿ ಸಾವು