ಕ್ವಾರಂಟೈನ್‌ನಿಂದ ಮತ್ತೆರಡು ಚೀತಾಗೆ ಮುಕ್ತಿ
Team Udayavani, Nov 27, 2022, 10:36 PM IST
ಶಿಯೋಪುರ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್‌ನಲ್ಲಿದ್ದ ಎರಡು ಚೀತಾ ಗಳನ್ನು ಭಾನುವಾರ ವಿಶಾಲ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಕ್ವಾರಂಟೈನ್‌ನಿಂದ ಹೊರಬಂದ ಚೀತಾಗಳ ಸಂಖ್ಯೆ 5ಕ್ಕೇರಿದೆ. ನಮೀಬಿಯಾದಿಂದ ತರಲಾದ 8 ಚೀತಾಗಳ ಪೈಕಿ 3 ಚೀತಾಗಳು ಮಾತ್ರವೇ ಈಗ ಕ್ವಾರಂಟೈನ್‌ನಲ್ಲಿ ಉಳಿದಿವೆ.
ಹಂತ ಹಂತವಾಗಿ ಅವುಗಳನ್ನೂ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಹೊರಬಂದ ಆಶಾ ಮತ್ತು ಬಿಲಿಸಿ ಎಂಬ ಹೆಣ್ಣು ಚೀತಾಗಳು ಈಗಾಗಲೇ ವಿಶಾಲ ಪ್ರದೇಶಕ್ಕೆ ಬಂದಿದ್ದ ಒಬಾನ್, ಆಲ್ಟನ್ ಮತ್ತು ಫ್ರೆಡ್ಡಿ ಎಂಬ ಗಂಡು ಚೀತಾಗಳಿಗೆ ಜೊತೆಯಾಗಲಿವೆ.